AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರದಲ್ಲಿ ಸಿಆರ್​ಪಿಎಫ್​, ಪೊಲೀಸ್ ಜಂಟಿ ​ ಪಡೆಯ ಮೇಲೆ ಹೊಂಚು ದಾಳಿ, ಓರ್ವ ಯೋಧ ಹುತಾತ್ಮ

ಮಣಿಪುರದ ಜಿರಿಬಾಮ್​ನಲ್ಲಿ ಸಿಆರ್​ಪಿಎಫ್​, ಪೊಲೀಸರ ಜಂಟಿ ಪಡೆಯ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದು, ಓರ್ವ ಯೋಧ ಮೃತೊಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 9.40ರ ಸುಮಾರಿಗೆ ದಾಳಿ ನಡೆಸಿದ್ದಾರೆ. 20 ಬೆಟಾಲಿಯನ್ ಸಿಆರ್​ಪಿಎಫ್​ ಮತ್ತು ಜಿರಿಬಾಮ್ ಜಿಲ್ಲಾ ಪೊಲೀಸರ ಜಂಟಿ ತಂಡವು ಒಟ್ಟಾಗಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಇದೇ ವೇಳೆ ಜಂಟಿ ತಂಡದ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದರು.

ಮಣಿಪುರದಲ್ಲಿ ಸಿಆರ್​ಪಿಎಫ್​, ಪೊಲೀಸ್ ಜಂಟಿ ​ ಪಡೆಯ ಮೇಲೆ ಹೊಂಚು ದಾಳಿ, ಓರ್ವ ಯೋಧ ಹುತಾತ್ಮ
ಸಿಆರ್​ಪಿಎಫ್Image Credit source: Aaj Tak
ನಯನಾ ರಾಜೀವ್
|

Updated on: Jul 14, 2024 | 2:57 PM

Share

ಮಣಿಪುರದ ಜಿರಿಬಾಮ್​ನಲ್ಲಿ ಸಿಆರ್​ಪಿಎಫ್​, ಪೊಲೀಸರ ಜಂಟಿ ಪಡೆಯ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದು, ಓರ್ವ ಯೋಧ ಮೃತೊಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 9.40ರ ಸುಮಾರಿಗೆ ದಾಳಿ ನಡೆಸಿದ್ದಾರೆ. 20 ಬೆಟಾಲಿಯನ್ ಸಿಆರ್​ಪಿಎಫ್​ ಮತ್ತು ಜಿರಿಬಾಮ್ ಜಿಲ್ಲಾ ಪೊಲೀಸರ ಜಂಟಿ ತಂಡವು ಒಟ್ಟಾಗಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಇದೇ ವೇಳೆ ಜಂಟಿ ತಂಡದ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದರು.

ದಾಳಿಯ ವೇಳೆ ಮೂವರು ಪೊಲೀಸರು ಗಾಯಗೊಂಡಿದ್ದು, ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ಪೊಲೀಸ್ ವರದಿ ಪ್ರಕಾರ, ಜುಲೈ 13ರಂದು ನಡೆದ ಗುಂಡಿನ ದಾಳಿಗೆ ಸಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸಲು ಜಂಟಿ ಭದ್ರತಾ ತಂಡವು ಜಿರಿಬಾಮ್ ಜಿಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊನಬಂಗ್ ಗ್ರಾಮದ ಬಳಿ ಹೋಗುತ್ತಿತ್ತು.

ದಾಳಿಯಲ್ಲಿ ಮೃತಪಟ್ಟ ಯೋಧ ಸಿಆರ್​ಪಿಎಫ್​ನ ಭಾಗವಾಗಿದ್ದರು. ಅವರನ್ನು ಬಿಹಾರದ ನಿವಾಸಿ ಅಜಯ್​ ಕುಮಾರ್​ ಝಾ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಮಣಿಪುರ: ಚುರಾಚಂದ್‌ಪುರ ಶಾಸಕರ ನಿವಾಸದ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಕಳೆದ ಹಲವು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರದ ವಾತಾವರಣವಿದೆ. ಹಿಂಸಾಚಾರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿ ಕುಕಿ ಹಾಗೂ ಮೈತಿ ಸಮುದಾಯಗಳ ನಡುವಿನ ಸಂಘರ್ಷ ಮುಂದುವರೆದಿದೆ. ಏಪ್ರಿಲ್​ನಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ದಾಳಿ ನಡೆದಿದೆ.

ಇಂಫಾಲ್​ ಪೂರ್ವದ ಕಾಂಗ್​ಪೋಕ್ಷಿ, ಉಖ್ರುಲ್ ಮತ್ತು ಟ್ರೈಜಂಕ್ಷನ್ ಜಿಲ್ಲೆಗಳಲ್ಲಿ ದುಷ್ಕರ್ಮಿಗಳು ಪರಸ್ಪರ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಕುಕಿ ಸಮುದಾಯದ ಇಬ್ಬರು ಸಾವನ್ನಪ್ಪಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ