ಹೈದರಾಬಾದ್: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್‌ನ ಕೊತ್ತಪೇಟ ಠಾಣೆಯ ಪೇದೆ ಆನಂದ್, ಜನರನ್ನ ರಕ್ಷಣೆ ಮಾಡೋದನ್ನ ಬಿಟ್ಟು ಪ್ರೇಮಿಗಳನ್ನ ಬೆದರಿಸೋದು, ಬ್ಲಾಕ್ ಮೇಲ್ ಮಾಡೋದು, ಯುವತಿಯರನ್ನು ಅತ್ಯಾಚಾರ ಮಾಡೋದೇ ಈತನ ಖಯಾಲಿ.
ಯುವತಿ ಮೇಲೆ ಅತ್ಯಾಚಾರ?
ಇದೇ ಇದೇ ರೀತಿ ಒಂಗೋಲ್‌ನ ವಂಗಮೂರು ರಸ್ತೆಯಲ್ಲಿ ಜೋಡಿಯೊಂದು ಏಕಾಂತ ವಾತಾವರಣವನ್ನು ಹುಡುಕಿಕೊಂಡು ಹೊರಟಿದ್ದಾಗ ಅಡ್ಡಗಟ್ಟಿದ್ದಾನೆ. ಪ್ರೇಮಿಗಳನ್ನು ಬೆದರಿಸಿ, ಯುವಕನನ್ನು ಓಡಿಸಿದ್ದಾನೆ. ನಂತರ ಆತನ ಪ್ರೇಯಸಿಯನ್ನು ಬೇರೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಗೈದಿದ್ದಾನೆ. ನಂತರ ಯುವತಿಯನ್ನು ವಂಗಮೂರು ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ಇನ್ನು ಪೊಲೀಸ್ ಪೇದೆಯ ಹಲ್ಲೆಗೆ ಹೆದರಿ ಪ್ರೇಯಸಿಯನ್ನು ಬಿಟ್ಟು ಓಡಿ ಹೋಗಿದ್ದ ಪ್ರಿಯಕರ ಘಟನೆ ಬಗ್ಗೆ ಸ್ನೇಹಿತರಿಗೆ ಫೋನ್ ಮಾಡಿ ತಿಳಿಸಿದ್ದಾನೆ. ನಂತರ ಸ್ನೇಹಿತರ ಜೊತೆಗೆ ಸ್ಥಳಕ್ಕೆ ಬಂದು ನೋಡಿದಾಗ ಪ್ರೇಯಸಿ ನರಳುತ್ತಾ ಬಿದ್ದಿದ್ದಳು. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಆದ್ರೆ, ಪೇದೆಯ ಸಹೋದರ ಇನ್ನೊಂದು ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಕಾರಣ ಪ್ರಕರಣ ಬಯಲಾಗದಂತೆ ತಡೆಯಲು ಯತ್ನಿಸಿದ್ದಾರೆ.
ಪೇದೆ ಮೇಲೆ ಪ್ರಕರಣ ದಾಖಲು:
ನಂತರ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ, ಪ್ರಕರಣ ಗಂಭೀರತೆ ಪಡೆದಿದೆ. ಆಗ ಪೇದೆಯ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆಗೆ ಆದೇಶಿಸಲಾಗಿದೆ. ಈ ವೇಳೆ ಕಾಮಿ ಪೇದೆ ಆನಂದ್ ಇಂತಹ ಅನೇಕ ಜೋಡಿಗಳನ್ನು ಬೆದರಿಸಿ, ಯುವತಿಯರ ಮೇಲೆ ಅತ್ಯಾಚಾರ ಮಾಡಿರೋ ಸಂಗತಿಗಳು ಗೊತ್ತಾಗಿವೆ. ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಎಲ್ಲ ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ.
ಒಟ್ನಲ್ಲಿ ಜನರನ್ನ ರಕ್ಷಣೆ ಮಾಡಬೇಕಾದ ಆರಕ್ಷಕ ಇಲ್ಲಿ ಭಕ್ಷಕನಾಗಿದ್ದಾನೆ. ಮೊದಲೇ ಅತ್ಯಾಚಾರ, ಕೊಲೆ ಪ್ರಕರಣಗಳಿಂದ ಸದ್ದು ಮಾಡುತ್ತಿರುವ ಆಂಧ್ರಪ್ರದೇಶ ಪೊಲೀಸ್ ಪೇದೆಯ ಕೃತ್ಯದಿಂದ ಮತ್ತಷ್ಟು ಭಯ ಬಿದ್ದಿದೆ. ಜನರನ್ನು ರಕ್ಷಣೆ ಮಾಡುವ ಪೊಲೀಸ್ ಇಲಾಖೆ ಹೆಸರಿಗೆ ಕಳಂಕವಾಗಿ ಈ ಕಾಮಿ ಪೇದೆಗೆ ತಕ್ಷ ಶಿಕ್ಷೆಯಾಗಲಿದೆ ಅನ್ನೋದೇ ಎಲ್ಲರ ಆಶಯ.