ಅಶ್ಲೀಲವಾಗಿ ಮಾತನಾಡಿದ ಆಡಿಯೋ ವೈರಲ್, ರಾಜೀನಾಮೆ ನೀಡಿದ ಪೃಥ್ವಿ..!

|

Updated on: Jan 15, 2020 | 2:34 PM

ತೆಲುಗು ಚಿತ್ರ ನಟ ಹಾಗೂ ಟಿಟಿಡಿ ಅಧೀನದ ವಾಹಿನಿಯ ನಿರ್ದೇಶಕ ಪೃಥ್ವಿ ವಿರುದ್ಧ ಆಂಧ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಹೋದ್ಯೋಗಿ ಜೊತೆ ಪೃಥ್ವಿ ಅಶ್ಲೀಲವಾಗಿ ಮಾತನಾಡಿದ್ದಾರೆ ಅನ್ನೋ ಆಡಿಯೋ ಎಲ್ಲೆಲ್ಲೂ ವೈರಲ್ ಆಗಿದ್ದು, ಇದೀಗ ಪೃಥ್ವಿ ತಮ್ಮ ಹುದ್ದೆಯನ್ನೇ ಕಳೆದುಕೊಂಡಿದ್ದಾರೆ. ಆಪ್ ಅಭ್ಯರ್ಥಿ ಪಟ್ಟಿ ರಿಲೀಸ್..! ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೂ ಕೆಲವೇ ದಿನ ಬಾಕಿಯಿದ್ದು, 70 ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ಬಿಡುಗಡೆ ಮಾಡಿದೆ. ಅರವಿಂದ್ ಕೇಜ್ರಿವಾಲ್ ದೆಹಲಿಯಿಂದ ಸ್ಪರ್ಧೆ ಮಾಡಿದ್ರೆ, ಮನೀಶ್ ಸಿಸೋಡಿಯಾ ಪ್ರತಾಪ್​ಗಂಜ್​ನಿಂದ […]

ಅಶ್ಲೀಲವಾಗಿ ಮಾತನಾಡಿದ ಆಡಿಯೋ ವೈರಲ್, ರಾಜೀನಾಮೆ ನೀಡಿದ ಪೃಥ್ವಿ..!
Follow us on

ತೆಲುಗು ಚಿತ್ರ ನಟ ಹಾಗೂ ಟಿಟಿಡಿ ಅಧೀನದ ವಾಹಿನಿಯ ನಿರ್ದೇಶಕ ಪೃಥ್ವಿ ವಿರುದ್ಧ ಆಂಧ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಹೋದ್ಯೋಗಿ ಜೊತೆ ಪೃಥ್ವಿ ಅಶ್ಲೀಲವಾಗಿ ಮಾತನಾಡಿದ್ದಾರೆ ಅನ್ನೋ ಆಡಿಯೋ ಎಲ್ಲೆಲ್ಲೂ ವೈರಲ್ ಆಗಿದ್ದು, ಇದೀಗ ಪೃಥ್ವಿ ತಮ್ಮ ಹುದ್ದೆಯನ್ನೇ ಕಳೆದುಕೊಂಡಿದ್ದಾರೆ.

ಆಪ್ ಅಭ್ಯರ್ಥಿ ಪಟ್ಟಿ ರಿಲೀಸ್..!
ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೂ ಕೆಲವೇ ದಿನ ಬಾಕಿಯಿದ್ದು, 70 ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ಬಿಡುಗಡೆ ಮಾಡಿದೆ. ಅರವಿಂದ್ ಕೇಜ್ರಿವಾಲ್ ದೆಹಲಿಯಿಂದ ಸ್ಪರ್ಧೆ ಮಾಡಿದ್ರೆ, ಮನೀಶ್ ಸಿಸೋಡಿಯಾ ಪ್ರತಾಪ್​ಗಂಜ್​ನಿಂದ ಅಖಾಡಕ್ಕೆ ಧುಮುಕಲಿದ್ದಾರೆ.

‘ಬಜೆಟ್-2020’ಗೆ ಕೌಂಟ್​ಡೌನ್:
ಆರ್ಥಿಕ ಹಿನ್ನಡೆಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ 2020ರ ಬಜೆಟ್ ಮಂಡಿಸಲು ಕೇಂದ್ರಸರ್ಕಾರ ಸಿದ್ಧತೆ ಆರಂಭಿಸಿದೆ. ಆದಾಯ ತೆರಿಗೆ ಪಾವತಿದಾರರಿಗೆ ರಿಲೀಫ್ ಸಿಗುವ ನಿರೀಕ್ಷೆ ಇದ್ದು, ಜನರ ಬಳಿ ದುಡ್ಡ ಓಡಾಡುವಂತೆ ಮಾಡೋದಕ್ಕೆ ಕೇಂದ್ರ ಸರ್ಕಾರ ನಾನಾ ತಂತ್ರಗಳನ್ನ ಇದೀಗ ಅನುಸರಿಸುತ್ತಿದೆ.

ಈರುಳ್ಳಿ ಆಮದು ಮಾಡಿಕೊಳ್ಳಲು ಹಿಂದೇಟು:
ಹೊರ ದೇಶದಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನ ಪಡೆಯಲು ರಾಜ್ಯಗಳು ಹಿಂದೇಟು ಆಕತ್ತಿವೆ. ಹೀಗೆ ಆಮದು ಮಾಡಿಕೊಂಡಿರುವ ಈರುಳ್ಳಿ ರುಚಿಯಲ್ಲಿ ಭಾರಿ ವ್ಯತ್ಯಾಸವಿದ್ದು, ಸಾವಿರಾರು ಕ್ವಿಂಟಲ್ ಹಾಗೇ ಉಳಿದಿದೆ. ಈ ಈರುಳ್ಳಿಯನ್ನ ಸಾರಿಗೆ ವೆಚ್ಚ ಇಲ್ಲದೆ ತಲುಪಿಸಲು ಸಿದ್ಧ ಅಂತಾ ತಿಳಿಸಿದ್ದರೂ ರಾಜ್ಯಗಳೂ ಆಸಕ್ತಿ ತೋರುತ್ತಿಲ್ಲ.

Published On - 2:18 pm, Wed, 15 January 20