ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಪು ಓದುತ್ತಿದ್ದಂತೆಯೇ, ಆರೋಪಿ ಸ್ಥಾನದಲ್ಲಿದ್ದ ವ್ಯಕ್ತಿ ಅವರೆಡೆಗೆ ಚಪ್ಪಲಿಯನ್ನು ಎಸೆದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಈತನ ಹೆಸರು ಸುಜಿತ್ ಸಾಕೇತ್. ಕಳೆದ ವರ್ಷ ಏಪ್ರಿಲ್ನಲ್ಲಿ 5ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಹತ್ಯೆಗೈದ ಆರೋಪ ಇವನ ಮೇಲಿತ್ತು. ಅದರ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯದ ಜಡ್ಜ್ ಇಂದು ತೀರ್ಪು ತಮ್ಮ ತೀರ್ಪು ಪ್ರಕಟಸಿದರು. ಆರೋಪಿ (27ವರ್ಷದ ಯುವಕ)ನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಈ ಶಿಕ್ಷೆಯಿಂದ ತೀವ್ರ ಕುಪಿತನಾದ ವ್ಯಕ್ತಿ ತನ್ನ ಚಪ್ಪಲಿಯನ್ನು ಎಸೆದಿದ್ದಾನೆ.
ಕಳೆದ ವರ್ಷ ಏಪ್ರಿಲ್ನಲ್ಲಿ ಈ ಸುಜಿತ್ನಿಂದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿ ವಲಸೆ ಕಾರ್ಮಿಕನೊಬ್ಬನ ಪುತ್ರಿಯಾಗಿದ್ದಳು. ಈಕೆಗೆ ಸುಜಿತ್ ಚಾಕಲೇಟ್ ಆಸೆ ತೋರಿಸಿ ಹತ್ತಿರ ಕರೆಸಿದ್ದ. ನಂತರ ಕಿಡ್ನ್ಯಾಪ್ ಮಾಡಿ, ಅತ್ಯಾಚಾರ ಮಾಡಿದ್ದ. ಬಳಿಕ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ನಂತರ ಪೊಲೀಸರು ಸುಜಿತ್ನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಿಸಿದ್ದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಈ ವ್ಯಕ್ತಿ ತನ್ನದೇನೂ ತಪ್ಪಿಲ್ಲ. ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಕ್ಕಿಸಲಾಗಿದೆ ಎಂದು ಹೇಳುತ್ತಲೇ ಬಂದಿದ್ದ. ಆದರೆ ಕೋರ್ಟ್ ಇದುವರೆಗೆ ಸುಮಾರು 29 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು, ಎಲ್ಲವೂ ಸುಜಿತ್ ವಿರುದ್ಧವಾಗಿಯೇ ಇವೆ. ಆತನೇ ಆರೋಪಿ ಎಂಬುದನ್ನು ಎತ್ತಿ ತೋರಿಸುತ್ತಿವೆ ಎಂದು ಹೇಳಲಾಗಿದೆ. ಹಾಗೇ, ಬಾಲಕಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದೂ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆ ಶುರುವಾದಾಗಿನಿಂದಲೂ ಕೋರ್ಟ್ನಲ್ಲಿ ಹಾಜರಿದ್ದ ವಕೀಲ ವಿನಯ್ ಶರ್ಮಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಧೀಶರು ತೀರ್ಪು ಓದುತ್ತಿರುವಂತೆಯೇ, ಆರೋಪಿ ಅವರೆಡೆಗೆ ಚಪ್ಪಲಿ ಎಸೆದಿದ್ದಾನೆ. ತಾನು ಅಪರಾಧಿಯಲ್ಲ ಎಂದು ಕೂಗಿದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Karnataka Bandh: ಬಂದ್ ಮುಂದೂಡುವಂತೆ ಕಾಲುಮುಟ್ಟಿ ಮನವಿ ಮಾಡಿಕೊಂಡ ಪ್ರವೀಣ್ ಶೆಟ್ಟಿ ಮನವಿ ತಿರಸ್ಕರಿಸಿದ ವಾಟಾಳ್ ನಾಗರಾಜ್