AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿನ ಸರ್ಕಾರ ಉತ್ತರಾಖಂಡ್​​ನ್ನು ಎರಡೂ ಕೈಯಿಂದ ಬಾಚಿ ಲೂಟಿ ಮಾಡಿತು, ಆದರೆ ನಾವು ಹಾಗಲ್ಲ: ಪ್ರಧಾನಿ ಮೋದಿ

ಉತ್ತರಾಖಂಡ ಅಸ್ತಿತ್ವಕ್ಕೆ ಬಂದು 20ವರ್ಷ ಪೂರ್ಣವಾಯಿತು. ಈ ಅವಧಿಯಲ್ಲಿ ಉತ್ತರಾಖಂಡ ಸಂಪೂರ್ಣವಾಗಿ ಲೂಟಿಯಾದರೂ ಅಡ್ಡಿಯಿಲ್ಲ, ನನ್ನ ಸರ್ಕಾರ ಉಳಿಯಬೇಕು ಎಂಬ ದುರಾಸೆಯಿಂದ ರಾಜ್ಯವನ್ನು ಆಳಿದವರನ್ನು ಇಲ್ಲಿನ ಜನರು ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಹಿಂದಿನ ಸರ್ಕಾರ ಉತ್ತರಾಖಂಡ್​​ನ್ನು ಎರಡೂ ಕೈಯಿಂದ ಬಾಚಿ ಲೂಟಿ ಮಾಡಿತು, ಆದರೆ ನಾವು ಹಾಗಲ್ಲ: ಪ್ರಧಾನಿ ಮೋದಿ
ಪ್ರಧಾನಿ ಮೋದಿ
TV9 Web
| Edited By: |

Updated on: Dec 30, 2021 | 5:20 PM

Share

ದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ್(PM Modi Uttarakhand Visit) ​ಗೆ ಭೇಟಿ ನೀಡಿ, 17,500 ಕೋಟಿ ರೂಪಾಯಿ ವೆಚ್ಚದ 23 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ 23 ಯೋಜನೆಗಳಲ್ಲಿ 17ಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಆರು ಯೋಜನೆಗಳ ಮುಕ್ತಾಯಗೊಂಡ ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದಾರೆ. ಬಳಿಕ ಉತ್ತರಾಖಂಡ್​ನ ಹಾಲ್ದ್ವಾನಿಯಲ್ಲಿ ಮಾತನಾಡಿ, ಇಂದು ಹಲ್ದ್ವಾನಿಯಲ್ಲಿ ಉದ್ಘಾಟನೆಯಾದ ಎಲ್ಲ ಅಭಿವೃದ್ಧಿ ಯೋಜನೆಗಳು, ಇಲ್ಲಿನ ಜನರಿಗೆ ಅತ್ಯುತ್ತಮ ಸಂಪರ್ಕ ಮತ್ತು ಉತ್ತರ ಆರೋಗ್ಯ ಸೇವೆ ಒದಗಿಸುವಂಥದ್ದಾಗಿದೆ ಎಂದು ಹೇಳಿದರು. ನಾವು ಇಲ್ಲಿನ ನೀರು, ರಸ್ತೆ, ಪಾರ್ಕಿಂಗ್​, ಬೀದಿ ದೀಪಗಳು, ಒಳಚರಂಡಿ ವ್ಯವಸ್ಥೆ ಸುಧಾರಣೆಗಾಗಿ ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು. 

ಉತ್ತರಾಖಂಡ ಜನರ ಸಾಮರ್ಥ್ಯವು ಈ ರಾಜ್ಯವನ್ನು ದಶಕದ ಉತ್ತರಾಖಂಡ್​ ಆಗಿ ರೂಪಿಸಿದೆ. ಉತ್ತರಾಖಂಡ್​​ನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕ್ಷಿಪ್ರವಾಗಿ ಆಗುತ್ತಿದೆ. ಚಾರ್​ ಧಾಮ್​ ಮೆಗಾ ಯೋಜನೆ, ಹೊಸ ರೈಲು ಮಾರ್ಗಗಳಿಂದ ಉತ್ತರಾಖಂಡ್​ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.  ಉತ್ತರಾಖಂಡ ರಾಜ್ಯ ಸ್ವತಂತ್ರ್ಯವಾದಾಗಿನಿಂದೂ ಎರಡು ರೀತಿಯ ರಾಜಕಾರಣ ನೋಡಿದೆ..ಅದರಲ್ಲಿ ಮೊದಲನೇಯದು, ಈ ಪರ್ವತ ರಾಜ್ಯವನ್ನು ಎಲ್ಲ ರೀತಿಯ ಅಭಿವೃದ್ಧಿಯಿಂದ ವಂಚಿತಗೊಳಿಸಿದ ರಾಜಕಾರಣ ಮತ್ತು ಇನ್ನೊಂದು ಉತ್ತರಾಖಂಡ್​ ಅಭಿವೃದ್ಧಿಗಾಗಿ ಎಲ್ಲವನ್ನೂ ಮಾಡಿದ ರಾಜಕಾರಣ ಎಂದು ಹೇಳುವ ಮೂಲಕ ತಮ್ಮ ಸರ್ಕಾವನ್ನು ಹೊಗಳಿ, ಹಿಂದೆ ಆಳಿದ ಸರ್ಕಾರವನ್ನು ಟೀಕಿಸಿದರು.

ಉತ್ತರಾಖಂಡ ಅಸ್ತಿತ್ವಕ್ಕೆ ಬಂದು 20ವರ್ಷ ಪೂರ್ಣವಾಯಿತು. ಈ ಅವಧಿಯಲ್ಲಿ ಉತ್ತರಾಖಂಡ ಸಂಪೂರ್ಣವಾಗಿ ಲೂಟಿಯಾದರೂ ಅಡ್ಡಿಯಿಲ್ಲ, ನನ್ನ ಸರ್ಕಾರ ಉಳಿಯಬೇಕು ಎಂಬ ದುರಾಸೆಯಿಂದ ರಾಜ್ಯವನ್ನು ಆಳಿದವರನ್ನು ಇಲ್ಲಿನ ಜನರು ನೋಡಿದ್ದಾರೆ. ಅವರು ಎರಡೂ ಕೈಗಳಿಂದ ಈ ರಾಜ್ಯವನ್ನು ಬಾಚಿ, ಲೂಟಿ ಮಾಡಿದ್ದಾರೆ. ಆದರೆ ಉತ್ತರಾಖಂಡವನ್ನು ಪ್ರೀತಿಸುವವರು ಎಂದಿಗೂ ಹಾಗೆ ಮಾಡಿಲ್ಲ. ಇಲ್ಲಿಯ ಅಭಿವೃದ್ಧಿಯನ್ನೇ  ಬಯಸಿದರು ಎಂದು ಹೇಳಿದರು. ಈ ಮೂಲಕ ಹಿಂದಿನ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳು ಈಗೀಗ ಹೊಸ ಉದ್ಯೋಗ ಮಾಡುತ್ತಿವೆ. ಏನಿದ್ದರೂ ಸುಳ್ಳು, ಗಾಳಿ ಸುದ್ದಿ ಹಬ್ಬಿಸುವುದೆ ಅವರ ಕೆಲಸವಾಗಿದೆ. ಆದರೆ ಜನರಿಗೂ ಈಗೀಗ ಅದು ಅರ್ಥವಾಗುತ್ತಿದೆ. ತನಕ್‌ಪುರ-ಬಾಗೇಶ್ವರ್ ರೈಲು ಮಾರ್ಗದ ಬಗ್ಗೆಯೂ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ನಮ್ಮ ಸರ್ಕಾರ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂದು ಶುರುವಾಗಿರುವ ಲಖ್ವಾರ್​ ಯೋಜನೆ ಮೊದಲು ರೂಪಿಸಲ್ಪಟ್ಟಿದ್ದು 1976ರಲ್ಲಿ. ಆದರೆ ಅಲ್ಲಿಗೇ ನಿಂತು ಹೋಗಿತ್ತು. ಇದೀಗ 46ವರ್ಷಗಳ ಬಳಿಕ ನಮ್ಮ ಸರ್ಕಾರ ಅದಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಚಾಲನೆ ನೀಡಿದೆ ಎಂದು ಹೇಳಿದರು.

ಹಿಮಾಲಯ ರಾಜ್ಯವಾದ ಉತ್ತರಾಖಂಡ್​ನಲ್ಲಿ ಒಟ್ಟು 23 ಯೋಜನೆಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಚಾಲನೆ ದೊರೆತಿದೆ. ಆರೋಗ್ಯ, ನೀರಾವರಿ, ರಸ್ತೆ, ವಸತಿ, ಉದ್ಯಮ, ಕುಡಿಯುವ ನೀರು ಪೂರೈಕೆ ಸಂಬಂಧ ಅಭಿವೃದ್ಧಿ ಯೋಜನೆಗಳನ್ನು ಮೋದಿಯವರು ಉದ್ಘಾಟನೆ ಮಾಡಿದ್ದಾರೆ.  ಏಮ್ಸ್​ ರಿಶಿಕೇಶ ಸೆಟಲೈಟ್​ ಕೇಂದ್ರ, ಜಗಜೀವನ ರಾಮ್​ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ವಿವಿಧ ರಸ್ತೆ ವಿಸ್ತರಣೆ ಯೋಜನೆಗಳು, ಜಲವಿದ್ಯುತ್​ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ.

ಇದನ್ನೂ ಓದಿ: ಇಂದು ಉತ್ತರಾಖಂಡ್​ಗೆ ಪ್ರಧಾನಿ ಮೋದಿ ಭೇಟಿ; 17,500 ಕೋಟಿ ರೂ.ವೆಚ್ಚದ 23 ಯೋಜನೆಗಳಿಗೆ ಚಾಲನೆ

Follow Us
TV9 Web
TV9 Web

TV9 Kannada

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು