Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯಾಲಯದಲ್ಲಿ ತನ್ನ ವಿರುದ್ಧ ತೀರ್ಪು ನೀಡಿದ ಜಡ್ಜ್​​ಗೆ ಚಪ್ಪಲಿ ಎಸೆದ ಅತ್ಯಾಚಾರ ಆರೋಪಿ; ನಾನು ತಪ್ಪು ಮಾಡಿಲ್ಲ ಎಂದು ಒಂದೇ ಸಮನೆ ಕೂಗುತ್ತಿದ್ದ !

ಕಳೆದ ವರ್ಷ ಏಪ್ರಿಲ್​ನಲ್ಲಿ ಈ ಸುಜಿತ್​​ನಿಂದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿ ವಲಸೆ ಕಾರ್ಮಿಕನೊಬ್ಬನ ಪುತ್ರಿಯಾಗಿದ್ದಳು. ಈಕೆಗೆ ಸುಜಿತ್ ಚಾಕಲೇಟ್​ ಆಸೆ ತೋರಿಸಿ ಹತ್ತಿರ ಕರೆಸಿದ್ದ.

ನ್ಯಾಯಾಲಯದಲ್ಲಿ ತನ್ನ ವಿರುದ್ಧ ತೀರ್ಪು ನೀಡಿದ ಜಡ್ಜ್​​ಗೆ ಚಪ್ಪಲಿ ಎಸೆದ ಅತ್ಯಾಚಾರ ಆರೋಪಿ; ನಾನು ತಪ್ಪು ಮಾಡಿಲ್ಲ ಎಂದು ಒಂದೇ ಸಮನೆ ಕೂಗುತ್ತಿದ್ದ !
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Dec 30, 2021 | 4:19 PM

ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಪು ಓದುತ್ತಿದ್ದಂತೆಯೇ, ಆರೋಪಿ ಸ್ಥಾನದಲ್ಲಿದ್ದ ವ್ಯಕ್ತಿ ಅವರೆಡೆಗೆ ಚಪ್ಪಲಿಯನ್ನು ಎಸೆದ ಘಟನೆ ಗುಜರಾತ್​ನ ಸೂರತ್​​ನಲ್ಲಿ ನಡೆದಿದೆ.  ಈತನ ಹೆಸರು ಸುಜಿತ್​ ಸಾಕೇತ್​.  ಕಳೆದ ವರ್ಷ ಏಪ್ರಿಲ್​​ನಲ್ಲಿ 5ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಹತ್ಯೆಗೈದ ಆರೋಪ ಇವನ ಮೇಲಿತ್ತು. ಅದರ ವಿಚಾರಣೆ ನಡೆಸಿದ್ದ ಸೂರತ್​ ನ್ಯಾಯಾಲಯದ ಜಡ್ಜ್​ ಇಂದು ತೀರ್ಪು ತಮ್ಮ ತೀರ್ಪು ಪ್ರಕಟಸಿದರು. ಆರೋಪಿ (27ವರ್ಷದ ಯುವಕ)ನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಈ ಶಿಕ್ಷೆಯಿಂದ ತೀವ್ರ ಕುಪಿತನಾದ ವ್ಯಕ್ತಿ ತನ್ನ ಚಪ್ಪಲಿಯನ್ನು ಎಸೆದಿದ್ದಾನೆ.

ಕಳೆದ ವರ್ಷ ಏಪ್ರಿಲ್​ನಲ್ಲಿ ಈ ಸುಜಿತ್​​ನಿಂದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿ ವಲಸೆ ಕಾರ್ಮಿಕನೊಬ್ಬನ ಪುತ್ರಿಯಾಗಿದ್ದಳು. ಈಕೆಗೆ ಸುಜಿತ್ ಚಾಕಲೇಟ್​ ಆಸೆ ತೋರಿಸಿ ಹತ್ತಿರ ಕರೆಸಿದ್ದ. ನಂತರ ಕಿಡ್ನ್ಯಾಪ್​ ಮಾಡಿ, ಅತ್ಯಾಚಾರ ಮಾಡಿದ್ದ. ಬಳಿಕ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ.  ನಂತರ ಪೊಲೀಸರು ಸುಜಿತ್​​ನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಿಸಿದ್ದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಈ ವ್ಯಕ್ತಿ ತನ್ನದೇನೂ ತಪ್ಪಿಲ್ಲ. ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಕ್ಕಿಸಲಾಗಿದೆ ಎಂದು ಹೇಳುತ್ತಲೇ ಬಂದಿದ್ದ. ಆದರೆ ಕೋರ್ಟ್​ ಇದುವರೆಗೆ ಸುಮಾರು 29 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು, ಎಲ್ಲವೂ ಸುಜಿತ್​ ವಿರುದ್ಧವಾಗಿಯೇ ಇವೆ. ಆತನೇ ಆರೋಪಿ ಎಂಬುದನ್ನು ಎತ್ತಿ ತೋರಿಸುತ್ತಿವೆ ಎಂದು ಹೇಳಲಾಗಿದೆ.  ಹಾಗೇ, ಬಾಲಕಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದೂ ನ್ಯಾಯಾಧೀಶರು ಆದೇಶಿಸಿದ್ದಾರೆ.   ಪ್ರಕರಣದ ವಿಚಾರಣೆ ಶುರುವಾದಾಗಿನಿಂದಲೂ ಕೋರ್ಟ್​ನಲ್ಲಿ ಹಾಜರಿದ್ದ ವಕೀಲ ವಿನಯ್​ ಶರ್ಮಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಧೀಶರು ತೀರ್ಪು ಓದುತ್ತಿರುವಂತೆಯೇ, ಆರೋಪಿ ಅವರೆಡೆಗೆ ಚಪ್ಪಲಿ ಎಸೆದಿದ್ದಾನೆ. ತಾನು ಅಪರಾಧಿಯಲ್ಲ ಎಂದು ಕೂಗಿದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Bandh: ಬಂದ್ ಮುಂದೂಡುವಂತೆ ಕಾಲುಮುಟ್ಟಿ ಮನವಿ ಮಾಡಿಕೊಂಡ ಪ್ರವೀಣ್ ಶೆಟ್ಟಿ ಮನವಿ ತಿರಸ್ಕರಿಸಿದ ವಾಟಾಳ್ ನಾಗರಾಜ್

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ