ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ 25 ವರ್ಷ ಸಮಯ ವ್ಯರ್ಥವಾಯಿತು; ದೇಶದ ಮೊದಲ ಪ್ರಧಾನಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

ಭಾರತಕ್ಕೆ ಬಂದ ಸ್ವಾತಂತ್ರ್ಯ ಸಾರ್ಥಕವಾಗಬೇಕು ಎಂದರೆ, ಅದು ಸ್ವಾವಲಂಬಿಯಾಗಬೇಕು. ಅಂದರೆ ನಮ್ಮ ದೇಶ ಯಾವುದೇ ವಿಚಾರಕ್ಕೂ ಇನ್ಯಾರ ಮೇಲೆಯೂ ಅವಲಂಬನೆಯಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ 25 ವರ್ಷ ಸಮಯ ವ್ಯರ್ಥವಾಯಿತು; ದೇಶದ ಮೊದಲ ಪ್ರಧಾನಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ
ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Dec 30, 2021 | 3:15 PM

ಇತ್ತೀಚೆಗೆ ಕಾನ್ಪುರ ಐಐಟಿ (Kanpur IIT)  ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಮೊದಲ ಪ್ರಧಾನಿ (PM Narendra Modi) ಜವಾಹರಲ್​ ಲಾಲ್​ ನೆಹರೂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 25 ವರ್ಷಗಳ ಕಾಲ, ಸುಮ್ಮನೆ ಸಮಯ ಮತ್ತು ಅವಕಾಶಗಳು ವ್ಯರ್ಥವಾದವು ಬಿಟ್ಟರೆ, ಸರಿಯಾದ ಪಥದಲ್ಲಿ ಅಭಿವೃದ್ಧಿ ಆಗಲೇ ಇಲ್ಲ ಎಂದು ಹೇಳಿದರು. ಅಂದರೆ ಸ್ವತಂತ್ರ್ಯ ಭಾರತದ ಅಧಿಕಾರ ವಹಿಸಿಕೊಂಡ ಮೊದಲ ಪ್ರಧಾನಿ ಜವಾಹರ್​ ಲಾಲ್​ ನೆಹರೂ ಮತ್ತು ಕಾಂಗ್ರೆಸ್​ ಪಕ್ಷಗಳು ದೇಶವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲಿಲ್ಲ ಎಂದು ಪರೋಕ್ಷವಾಗಿಯೇ ಹೇಳಿದರು. ಅಷ್ಟೇ ಅಲ್ಲ, ಭಾರತ ಸ್ವಾತಂತ್ರ್ಯ ಪಡೆದ ನಂತರ 25ವರ್ಷ ಸುಮ್ಮನೆ ವೇಸ್ಟ್​ ಆಯಿತು ಎಂಬ ಬಗ್ಗೆ ನನಗೆ ತುಂಬ ಅಸಹನೆ ಇದೆ. ಈಗಿನ ವಿದ್ಯಾರ್ಥಿಗಳು ಕೂಡ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ವಿಳಂಬ ಮಾಡಬಾರದು ಎಂದು ಹೇಳಿದರು.  

ಭಾರತಕ್ಕೆ ಬಂದ ಸ್ವಾತಂತ್ರ್ಯ ಸಾರ್ಥಕವಾಗಬೇಕು ಎಂದರೆ, ಅದು ಸ್ವಾವಲಂಬಿಯಾಗಬೇಕು. ಅಂದರೆ ನಮ್ಮ ದೇಶ ಯಾವುದೇ ವಿಚಾರಕ್ಕೂ ಇನ್ಯಾರ ಮೇಲೆಯೂ ಅವಲಂಬನೆಯಾಗಬಾರದು ಎಂದು ಹೇಳಿದ ಪ್ರಧಾನಿ ಮೋದಿ, ಐಐಟಿ ವಿದ್ಯಾರ್ಥಿಗಳಿಗೆ ಸಲಹೆಯೊಂದನ್ನು ನೀಡಿದರು. ನೀವೆಲ್ಲ ಇಲ್ಲಿಂದ ಪದವೀಧರರಾಗಿ ಹೊರಹೋಗತ್ತಿದ್ದೀರಿ. ತಂತ್ರಜ್ಞಾನ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣ ಈಗ ಶುರುವಾಗುತ್ತದೆ. ಹಾಗಂತ ನೀವು, ನೀವೇ ಸೃಷ್ಟಿಸಿಕೊಳ್ಳುವ ರೊಬೊಟ್​ನ ಇನ್ನೊಂದು ಆವೃತ್ತಿಯಂತೆ ಆಗಬಾರದು. ಎಲ್ಲ ಭಾವನೆಗಳನ್ನೂ ಜೀವಂತವಾಗಿಸಿಕೊಂಡು, ಮನುಷ್ಯರಾಗಿ ಎಂದು ಹೇಳಿದರು.

ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಲ್ಲಿ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದರು. ನಂತರ ಕಾನ್ಪುರ ಐಐಟಿ ಘಟಿಕೋತ್ಸವದಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಬಹುಮುಖ್ಯವಾಗಿ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ನೆರವಾಗಬೇಕು ಎಂದು ಕರೆ ನೀಡಿದರು. ಆದರೆ ಇನೆಹರೂ ಮತ್ತು ಕಾಂಗ್ರೆಸ್​ ಸರ್ಕಾರಗಳ ವಿರುದ್ಧ ಪರೋಕ್ಷವಾಗಿ ಮಾತನಾಡುವ ಮೂಲಕ ಘಟಿಕೋತ್ಸವ ವೇದಿಕೆಯನ್ನು ರಾಜಕೀಯವಾಗಿಯೂ ಬಳಸಿಕೊಂಡರು ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ: Financial Changes: 2022ರ ಜನವರಿಯಿಂದ ಆಗಲಿರುವ 6 ಹಣಕಾಸು ವಿಚಾರದ ಬದಲಾವಣೆಗಳಿವು

Published On - 3:14 pm, Thu, 30 December 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು