ದೆಹಲಿಯಲ್ಲಿ ಒಮಿಕ್ರಾನ್ ಸಮುದಾಯ ಪ್ರಸರಣ ಆರಂಭ?-ಆರೋಗ್ಯ ಸಚಿವರು ಹೇಳಿದ್ದೇನು?
ಸದ್ಯ ದೇಶದಲ್ಲಿ ಅತಿಹೆಚ್ಚು ಒಮಿಕ್ರಾನ್ ಸೋಂಕಿತರು ಇರುವುದು ದೆಹಲಿಯಲ್ಲಿ. ಅಲ್ಲಿ 263 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೆಹಲಿ ಬಿಟ್ಟರೆ ಮಹಾರಾಷ್ಟ್ರದಲ್ಲಿ 252 ಒಮಿಕ್ರಾನ್ ಸೋಂಕಿನ ಕೇಸ್ಗಳು ದಾಖಲಾಗಿವೆ.
ದೆಹಲಿಯಲ್ಲಿ ಒಟ್ಟಾರೆ ಕೊವಿಡ್ 19 ಪ್ರಕರಣ(Covid 19)ಗಳಲ್ಲಿ ಶೇ.46ರಷ್ಟು ಒಮಿಕ್ರಾನ್ ಪ್ರಕರಣ(Omicron Variant)ಗಳಾಗಿವೆ ಎಂಬುದು ಇತ್ತೀಚಿನ ಜಿನೋಮ್ ಸಿಕ್ವೆನ್ಸಿಂಗ್ ವರದಿಯಿಂದ ಗೊತ್ತಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಹಾಗೇ, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಲ್ಲಿ (ಬೇರೆ ದೇಶಗಳಿಗೆ ಪ್ರಯಾಣ ಬೆಳೆಸದೆ ಇರುವವರು) ಕೂಡ ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದರೆ, ಈ ರೂಪಾಂತರ ತಳಿ ಸಮುದಾಯದಲ್ಲಿ ಹಬ್ಬುತ್ತಿದೆ ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕು ಎಂದೂ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಿನ್ನೆ 923 ಕೊವಿಡ್ 19 ಕೇಸ್ಗಳು ದಾಖಲಾಗಿವೆ. ಇಲ್ಲಿ ಪಾಸಿಟಿವಿಟಿ ರೇಟ್ 1.29ರಷ್ಟಿದೆ. ನಗರದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಹಾಗೇ ಅದರೊಂದಿಗೆ ಒಮಿಕ್ರಾನ್ ಪ್ರಕರಣಗಳೂ ಅಧಿಕವಾಗುತ್ತಿವೆ. ಇತ್ತೀಚೆಗೆ ಬಂದ ಜಿನೋಮ್ ಸಿಕ್ವೆನ್ಸಿಂಗ್ ರಿಪೋರ್ಟ್ ಪ್ರಕಾರ, ಒಟ್ಟಾರೆ ಕೊವಿಡ್ 19 ಸೋಂಕಿತರಲ್ಲಿ ಶೇ.46ರಷ್ಟು ಒಮಿಕ್ರಾನ್ ಪ್ರಕರಣಗಳಾಗಿವೆ. ಹೀಗೆ ಪತ್ತೆಯಾದ ಒಮಿಕ್ರಾನ್ ಸೋಂಕಿತರಲ್ಲಿ ಕೆಲವರು ವಿದೇಶ ಪ್ರವಾಸಕ್ಕೆ ಹೋಗಿ ಬಂದವರು. ಇನ್ನೂ ಹಲವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಅಂದರೆ ಒಮಿಕ್ರಾನ್ ಕ್ರಮೇಣ ಸಮುದಾಯ ಪ್ರಸರಣವಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ದೆಹಲಿಯಲ್ಲಿಂದು 263 ಕೇಸ್ಗಳು ಸದ್ಯ ದೇಶದಲ್ಲಿ ಅತಿಹೆಚ್ಚು ಒಮಿಕ್ರಾನ್ ಸೋಂಕಿತರು ಇರುವುದು ದೆಹಲಿಯಲ್ಲಿ. ಅಲ್ಲಿ 263 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೆಹಲಿ ಬಿಟ್ಟರೆ ಮಹಾರಾಷ್ಟ್ರದಲ್ಲಿ 252 ಒಮಿಕ್ರಾನ್ ಸೋಂಕಿನ ಕೇಸ್ಗಳು ದಾಖಲಾಗಿವೆ. ಕೊವಿಡ್ 19ನ ಈ ಹೊಸ ತಳಿ ಈಗಾಗಲೇ 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಾಲಿಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಈ ಸೋಂಕು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹರಡುತ್ತಿದೆ. ಭಾರತದಲ್ಲಿಯೂ ಕೂಡ ಹರಡುವಿಕೆ ವೇಗ ಹೆಚ್ಚಾಗಿದೆ. ಇನ್ನು ಆರೋಗ್ಯ ತಜ್ಞರ ಪ್ರಕಾರ ಒಮಿಕ್ರಾನ್ ವೈರಾಣು, ಡೆಲ್ಟಾಕ್ಕಿಂತ ಮೂರು ಪಟ್ಟು ವೇಗವಾಗಿ ಹರಡುತ್ತದೆ.
ಇದನ್ನೂ ಓದಿ: ಆಂಧ್ರ ಹುಡುಗನನ್ನು ವರಿಸಿದ ಟರ್ಕಿ ದೇಶದ ಯುವತಿ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ಜೋಡಿ