ಖಲಿಸ್ತಾನಿ ಉಗ್ರಾತಂಕ- ಮುಂಬೈನಲ್ಲಿ ಹೈ ಅಲರ್ಟ್; ಪೊಲೀಸ್ ಸಿಬ್ಬಂದಿಯ ರಜೆ ಕಡಿತಗೊಳಿಸಿ ಕರ್ತವ್ಯಕ್ಕೆ ನಿಯೋಜನೆ
Mumbai on High Alert: ಹೊಸ ವರ್ಷಾಚರಣೆಗೆ ವಾಣಿಜ್ಯ ನಗರಿ ಮುಂಬೈಗೆ ಖಲಿಸ್ತಾನಿ ಭಯೋತ್ಪಾದಕರ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಹೊಸ ವರ್ಷದ ಮುನ್ನಾದಿನದಂದು ಖಲಿಸ್ತಾನಿ ಸಂಘಟನೆಯ ಉಗ್ರರು ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸಬಹುದು ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಪ್ರಮುಖ ರೈಲ್ವೆ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಇದಕ್ಕಾಗಿ ಸಿಬ್ಬಂದಿಯ ವಾರದ ರಜೆ ಮತ್ತು ರಜಾ ದಿನಗಳನ್ನು ರದ್ದುಗೊಳಿಸಲಾಗಿದ್ದು, ಎಲ್ಲರನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ‘‘ಹೊಸ ವರ್ಷದ ಮುನ್ನಾದಿನದಂದು ಮುಂಬೈನಲ್ಲಿ ಖಲಿಸ್ತಾನಿ ಸಂಘಟನೆಗಳು ಭಯೋತ್ಪಾದಕ ದಾಳಿ ನಡೆಸಬಹುದು ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಹೊಸ ವರ್ಷದ ಮುನ್ನಾದಿನದ ಪೊಲೀಸ್ ಸಿಬ್ಬಂದಿಯ ವಾರದ ರಜೆ ಮತ್ತು ರಜಾದಿನಗಳನ್ನು ರದ್ದುಗೊಳಿಸಿ, ಭದ್ರತೆಗೆ ನಿಯೋಜಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮುಂಬೈ ಪೊಲೀಸ್ ಅಧಿಕಾರಿಗಳು ಹೈ-ಅಲರ್ಟ್ ಆಗಿದ್ದು, ಡಿಸೆಂಬರ್ 31 ರಂದು ನಗರದಾದ್ಯಂತ ಕಟ್ಟುನಿಟ್ಟಿನ ನಿಗಾ ಇಡುವುದಾಗಿ ಹೇಳಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸಹ ಗುಪ್ತಚರ ಮಾಹಿತಿ ಪರಿಗಣಿಸಿ ಪ್ರಮುಖ ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ವಿಧ್ವಂಸಕ ವಿರೋಧಿ ಕ್ರಮಗಳನ್ನು ಕೈಗೊಂಡಿದ್ದಾರೆ.
ಜಿಆರ್‌ಪಿ ಮುಂಬೈನ ಕಮಿಷನರ್ ಕ್ವೈಸರ್ ಖಾಲಿದ್ ಟ್ವೀಟ್ ಮೂಲಕ ಜನರಿಗೆ ಸರ್ಕಾರ ಸೂಚಿಸಿರುವ ಕೊವಿಡ್ ಕುರಿತ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಮನವಿ ಮಾಡಿದ್ದಾರೆ. ‘‘‘ಕೋವಿಡ್ 19 ಪರಿಸ್ಥಿತಿಯ ದೃಷ್ಟಿಯಿಂದ ಈ ವಿಷಯದ ಕುರಿತು ಸರ್ಕಾರದ ನಿರ್ದೇಶನಗಳನ್ನು ಅನುಸರಿಸಲು ನಾವು ಜನರಿಗೆ ಸಲಹೆ ನೀಡುತ್ತೇವೆ. ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ, ವಿರೋಧಿ ವಿಧ್ವಂಸಕ ಕ್ರಮಗಳಿಗಾಗಿ ದೊಡ್ಡ ಪಡೆಯನ್ನು ನಿಯೋಜಿಸಿದ್ದೇವೆ. ಕಾನೂನುಗಳನ್ನು ದೃಢವಾಗಿ ಜಾರಿಗೊಳಿಸುತ್ತಿದ್ದು, ಜನರು ಸಹಕಾರ ನೀಡಬೇಕೆಂದು ವಿನಂತಿಸುತ್ತೇವೆ’’ ಎಂದು ಟ್ವೀಟ್ ಮಾಡಲಾಗಿದೆ.
In view of the covid 19 situation we advise people to adhere to government directions on the issue. We @grpmumbai have deployed large manpower for checking, frisking & anti-sabotage measures at important Rly Stn. We will enforce laws firmly. We request people’s cooperation.
— CP GRP Mumbai (@cpgrpmumbai) December 30, 2021
ಕೊರೊನಾ ಕಾರಣ ಮುಂಬೈನಲ್ಲಿ ಈಗಾಗಲೇ ಕಠಿಣ ಕ್ರಮ ಜಾರಿ: ಕರೋನವೈರಸ್‌ನ ಒಮಿಕ್ರಾನ್ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮುಂಬೈನಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಯಾವುದೇ ಮುಚ್ಚಿದ ಅಥವಾ ತೆರೆದ ಜಾಗದಲ್ಲಿ ಹೊಸ ವರ್ಷದ ಆಚರಣೆಗಳು ಮತ್ತು ಕೂಟಗಳನ್ನು ನಿಷೇಧಿಸಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ:
ಮನೆಗೆ ನುಗ್ಗಿ ಗನ್ ತೋರಿಸಿ ಡಕಾಯಿತಿ ಮಾಡುತ್ತಿದ್ದ ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ ಪೊಲೀಸ್ ಇನ್ಸ್ಪೆಕ್ಟರ್
Published On - 8:04 am, Fri, 31 December 21