ಮನೆಗೆ ನುಗ್ಗಿ ಗನ್ ತೋರಿಸಿ ಡಕಾಯಿತಿ ಮಾಡುತ್ತಿದ್ದ ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ ಪೊಲೀಸ್ ಇನ್ಸ್ಪೆಕ್ಟರ್
ಆರೋಪಿ ದಿವಾಕರ್ನನ್ನು ಬಂಧಿಸಲು ತೆರಳಿದ್ದಾಗ ಚಾಕುವಿನಿಂದ ಇರಿದು ಹಲ್ಲೆಗೆ ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್ ಬಾಲರಾಜ್ ಫೈರಿಂಗ್ ಮಾಡಿ ಆರೋಪಿ ದಿವಾಕರ್ನನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಕಿ ಗನ್ ಸದ್ದು ಮಾಡಿದೆ. ಆರೋಪಿ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ದಿವಾಕರ್ನನ್ನು ಬಂಧಿಸಲು ತೆರಳಿದ್ದಾಗ ಚಾಕುವಿನಿಂದ ಇರಿದು ಹಲ್ಲೆಗೆ ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್ ಬಾಲರಾಜ್ ಫೈರಿಂಗ್ ಮಾಡಿ ಆರೋಪಿ ದಿವಾಕರ್ನನ್ನು ಅರೆಸ್ಟ್ ಮಾಡಿದ್ದಾರೆ. ಘಟನೆಯಲ್ಲಿ ಕಾನ್ಸ್‌ಟೇಬಲ್ ಪ್ರದೀಪ್ ಎಂಬಾತನಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ದಿವಾಕರ್, ಮನೆಗಳಿಗೆ ನುಗ್ಗಿ ಹಣೆಗೆ ಪಿಸ್ತೂಲ್ ಇಟ್ಟು ಡಕಾಯಿತಿ ಮಾಡ್ತಿದ್ದ. ನವೆಂಬರ್ 29 ರಂದು ಯಶವಂತಪುರದಲ್ಲಿ ಡಕಾಯಿತಿ ನಡೆಸಿದ್ದ. ಎರಡು ದಿನದ ಹಿಂದೆ ಅಂದ್ರೆ ಬುಧವಾರ ರಾತ್ರಿ ಆರೋಪಿ ಅರೆಸ್ಟ್ ಮಾಡಲು ತೆರಳಿದ್ದ ಪಿಎಸ್ಐಗೆ ಚಾಕು ಇರಿದು ಎಸ್ಕೇಪ್ ಆಗಿದ್ದ. ಸದ್ಯ ಇಂದು ಐದು ಗಂಟೆ ಸುಮಾರಿಗೆ ಆರೋಪಿ ಅರೆಸ್ಟ್ ಮಾಡಲು ಸಂಜಯ್ ನಗರ ಇನ್ಸ್ಪೆಕ್ಟರ್ ಬಾಲ್ರಾಜ್ ತೆರಳಿದ್ದಾರೆ. ಈ ವೇಳೆ ಮತ್ತೆ ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಇನ್ಸ್ಪೆಕ್ಟರ್ ಬಾಲ್ರಾಜ್ ಸೂಚಿಸಿದ್ದಾರೆ. ಮತ್ತೆ ಅಟ್ಯಾಕ್ ಮಾಡಲು ಆರೋಪಿ ದಿವಾಕರ್ ಮುಂದಾಗಿದ್ದ. ಈ ವೇಳೆ ಆತ್ಮ ರಕ್ಷಣೆಗೆಂದು ಇನ್ಸ್ಪೆಕ್ಟರ್ ಬಾಲ್ರಾಜ್ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. ಆರೋಪಿ ವಿರುದ್ಧ ಡಕಾಯಿತಿ, ರಾಬರಿ ಕೊಲೆಯತ್ನ ಸೇರಿ ಸುಮಾರು ಏಳು ಕೇಸ್ಗಳಲ್ಲಿ ಬೇಕಾದ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: Gold Rate: ಆಭರಣ ಪ್ರಿಯರಿಗೆ ಸಂತೋಷದ ವಿಚಾರ; ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ
Published On - 7:32 am, Fri, 31 December 21