ಟ್ರಾಫಿಕ್ ಪೊಲೀಸರಿಗೆ ಮೈಮೇಲೆಯೂ ಕ್ಯಾಮಾರಾ! ಸುಗಮ ಸಂಚಾರಕ್ಕಾಗಿ ತಂತ್ರಜ್ಞಾನ ಆಧಾರಿತ ಸೌಲಭ್ಯಗಳ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಲವಾರು ತಂತ್ರಜ್ಞಾನ ಸೌಲಭ್ಯಗಳನ್ನು ಸಂಚಾರ ನಿಯಂತ್ರಣಕ್ಕೆ ಬಳಸಿಕೊಳ್ಳಲಾಕ್ತಿದೆ. 5,000 ಹೊಸ ವೆಹಿಕಲ್ಗಳು ಮತ್ತು 3000 ಅತಿದೊಡ್ಡ ಹೊಸ ವಾಹನಗಳು ರಸ್ತೆಗಿಳಿಯುತ್ತಿದೆ. ಬೆಂಗಳೂರಿನಲ್ಲಿ 12 ಕಾರಿಡಾರ್ಗಳನ್ನ ಗುರುತಿಸಿದ್ದೇವೆ ಎಂದು ವಿವರಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದ ಟೌನ್ ಹಾಲ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸುಗಮ ಸಂಚಾರಕ್ಕಾಗಿ ಮಾರ್ಗಸೂಚಿಗಳು, ತಂತ್ರಜ್ಞಾನಾಧಾರಿತ ಸೌಲಭ್ಯಗಳ ಲೋಕಾರ್ಪಣೆ ಮಾಡಿದ್ದಾರೆ. ತಂತ್ರಜ್ಞಾನಾಧಾರಿತ ಸೌಲಭ್ಯಗಳು, ಸಂಚಾರಿ ಬೀಟ್ ವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರ ಕಾರ್ಯನಿರ್ವಣೆಗೆ ಮಾರ್ಗಸೂಚಿಗಳ ಲೋಕಾರ್ಪಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಸುರೇಶ್ ಕುಮಾರ್, ಡಿಜಿ ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭಾಗಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಲವಾರು ತಂತ್ರಜ್ಞಾನ ಸೌಲಭ್ಯಗಳನ್ನು ಸಂಚಾರ ನಿಯಂತ್ರಣಕ್ಕೆ ಬಳಸಿಕೊಳ್ಳಲಾಕ್ತಿದೆ. 5,000 ಹೊಸ ವೆಹಿಕಲ್ಗಳು ಮತ್ತು 3000 ಅತಿದೊಡ್ಡ ಹೊಸ ವಾಹನಗಳು ರಸ್ತೆಗಿಳಿಯುತ್ತಿದೆ. ಬೆಂಗಳೂರಿನಲ್ಲಿ 12 ಕಾರಿಡಾರ್ಗಳನ್ನ ಗುರುತಿಸಿದ್ದೇವೆ ಎಂದು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ 12 ಕಾರಿಡಾರ್ಗಳನ್ನ ಗುರುತಿಸಿದ್ದೇವೆ. ಅವುಗಳನ್ನ ಹೆವಿಡೆಟಿ ಟ್ರಕ್ ಗಳ ಸಂಚರಿಸಿದ್ರು, ಹೈ ಸ್ಟಾಡಂರ್ಡ್ ರಸ್ತೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಕ್ಯಾಮಾರ ಅಳವಡಿಸಬೇಕು. 360 ಡಿಗ್ರಿ ಒಂದು ಸಿಗ್ನಲ್ ಐದಾರು ರಸ್ತೆಗಳಲ್ಲಿ ಯಾವ ರಸ್ತೆಯಲ್ಲಿ ಹೆಚ್ಚು ದಟ್ಟಣೆ ಇದೆ, ಆ ರಸ್ತೆಗೆ ಮೊದಲಿಗೆ ಅವಕಾಶ ನೀಡಲಾಗುತ್ತೆ. ಮಾದರಿಯಾಗಿ ಐದಾರು ವಲಯಗಳಲ್ಲಿ ಸುವ್ಯವಸ್ಥಿತವಾಗಿ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಬಿಬಿಎಂಪಿ, ಬೆಸ್ಕಾಂ, ಬಿಡಬ್ಲೂಎಸ್ಎಸ್ಬಿ ಸೇರಿದಂತೆ ಸೇವಾವಲಯ ಒಗ್ಗೂಡಿಸುವಿಕೆ ಮಾಡುವಂತ ಕೆಲಸ ಆಗಬೇಕಿದೆ. ಬೆಂಗಳೂರಿಗೆ ವಿಶೇಷವಾಗಿ ಟ್ರಾಫಿಕ್ ಪೊಲೀಸರು ಬಾಡಿಓನ್ಡ್ ಕ್ಯಾಮಾರಾ ಕಾರ್ಯ ನಿರ್ವಹಿಸಲು ಅನುಕೂಲವಾಗಲಿದೆ.
ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಕ್ಯಾಮಾರ ಸಂಚಾರಿ ನಿಯಮ ಉಲ್ಲಂಘನೆ ಗುರುತಿಸಲಿದೆ. ಎಸ್ಎಂಎಸ್ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಮಾಹಿತಿ ರವಾನಿಸಲಿದೆ. ಐಟಿ ಹಬ್, ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ತಂತ್ರಜ್ಞಾನ ಸುಧಾರಿತ ವ್ಯವಸ್ಥೆ ಬಳಕೆಗೆ ಸಜ್ಜುಗೊಳ್ಳಬೇಕು. ಹಗಲಿರುಳೆನ್ನದೆ ಕೆಲಸ ನಿರ್ವಹಿಸುವ ಪೊಲೀಸರ ಬಗ್ಗೆ ಸಮಾಜ, ಸರ್ಕಾರ ಗೌರವ ಕೊಡುವ ಅವಶ್ಯಕತೆ ಇದೆ. ವರ್ಷಕ್ಕೆ 5000 ಪೊಲೀಸರ ಇಲಾಖೆಗೆ ನೇಮಕವಾಕ್ತಿದ್ದು, ಮುಂದಿನ ವರ್ಷದಲ್ಲಿ 16 ಸಾವಿರ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತೆ. CEN ಪೊಲೀಸ್ ಠಾಣೆ ಸಮರ್ಪಕವಾಗಿ ವಿಭಾಗವಾರು ಅನ್ ಲೈನ್ ಗ್ಯಾಬ್ಲಿಂಗ್, ನಾನ್ ಬೇಲ್ ಅಬೆಲ್ ಮಾಡಿ ಅಪರಾಧ ನಿಯಂತ್ರಣಗೊಳಿಸಲು ನಮ್ಮ ಸರ್ಕಾರ ಮಾಡಿದೆ. ಕ್ರೈಂ ಸಿಂಡಿಕೇಟ್ ಗಳ ಮೇಲೆ ನಿರಂತರ ಪ್ರಹಾರ ನಡೆಯಬೇಕು ಎಂದು ವಿವರಿಸಿದ್ದಾರೆ.
ಬಾಡಿ ಕ್ಯಾಮೆರಾಗಳನ್ನ ಟ್ರಾಫಿಕ್ ಪೊಲೀಸರಿಗೆ ನೀಡಲಾಗುತ್ತೆ 32 ಕೋಟಿಗಳ ವೆಚ್ಚದಲ್ಲಿ ಬೆಂಗಳೂರು ಸಂಚಾರಿ ಪೊಲೀಸರಿಗೆ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ಸುಗಮ ಸಂಚಾರಕ್ಕೆ ವ್ಯವಸ್ಥೆಗೆ ತಂತ್ರಜ್ಞಾನ ಸಮರ್ಪಕವಾಗಿ ಬಳಸಿಕೊಳ್ಳಲಾಕ್ತಿದೆ. ಸುಧಾರಿತ ಕ್ಯಾಮಾರವೊಂದು ವಾಹನಗಳ ನಿಯಮ ಉಲ್ಲಂಘನೆ ಮತ್ತು ಕಳುವಾದ ವಾಹನಗಳ ಬಗ್ಗೆ ಮಾಹಿತಿ ನೀಡುತ್ತದೆ. ಟ್ರಾಫಿಕ್ ವೇಳೆ ನಿಯಮ ಉಲ್ಲಂಘಿಸುವ ವಾಹನಗಳನ್ನ ಗುರುತಿಸಲು ಅನುವಾಗುತ್ತೆ. ಇತರೆ ವಾಹನಗಳನ್ನ ಅಡ್ಡಗಟ್ಟುವುದು ವಿನಾಕಾರಣ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. 2028 ಜಿಪಿಎಸ್ ಆಧಾರಿತ ಬಾಡಿ ಕ್ಯಾಮೆರಾಗಳನ್ನ ಟ್ರಾಫಿಕ್ ಪೊಲೀಸರಿಗೆ ನೀಡಲಾಕ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಆಲೋಚನೆ ಮಾಡಿ ರೂಪುರೇಷೆ ಸೂಚನೆ ನೀಡಿದ್ರು. ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಈ ಯೋಜನೆಗಳನ್ನ ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಙಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಅಂತೂ ಇಂತೂ ಇಂದಿನ ಬಂದ್ ಕ್ಯಾನ್ಸಲ್, ಮುಂದಿನ ಬಂದ್ ಯಾವಾಗ ಎಂದು ಘೋಷಿಸಿದ ವಾಟಾಳ್ ನಾಗರಾಜ್!
Published On - 8:04 am, Fri, 31 December 21