ಅಂತೂ ಇಂತೂ ಇಂದಿನ ಬಂದ್​ ಕ್ಯಾನ್ಸಲ್, ಮುಂದಿನ ಬಂದ್ ಯಾವಾಗ ಎಂದು ಘೋಷಿಸಿದ ವಾಟಾಳ್​ ನಾಗರಾಜ್!

ಈಗ ಎಂಇಎಸ್ ಬ್ಯಾನ್ ಗೆ ಜನವರಿ 20ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ. ಒಂದು ವೇಳೆ ಬ್ಯಾನ್ ಮಾಡದಿದ್ದರೆ ಮತ್ತೆ ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ ವಾಟಾಳ್ ನಾಗರಾಜ್ ರಾಜ್ಯ ಸರ್ಕಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಂತೂ ಇಂತೂ ಇಂದಿನ ಬಂದ್​ ಕ್ಯಾನ್ಸಲ್, ಮುಂದಿನ ಬಂದ್ ಯಾವಾಗ ಎಂದು ಘೋಷಿಸಿದ ವಾಟಾಳ್​ ನಾಗರಾಜ್!
ವಾಟಾಳ್ ನಾಗರಾಜ್​ರನ್ನು ಹೊಗಳಿದ ಸಿಎಂ ಬೊಮ್ಮಾಯಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 31, 2021 | 10:26 AM

ಬೆಂಗಳೂರು:ಎಂಇಎಸ್​ ರಾಜಕೀಯ ಪಕ್ಷ ಕನ್ನಡದ್ರೋಹಿಯಾಗಿದ್ದು, ಅದನ್ನು ಬ್ಯಾನ್​ ಮಾಡಬೇಕು ಎಂಬ ಏಕಂಶ ಬೇಡಿಕೆ ಮುಂದಿಟ್ಟುಕೊಂಡು ವರ್ಷಾಂತ್ಯ ಇಂದು ಕನ್ನಡ ಹೋರಾಟಗಾರ ವಾಟಾಳ್​ ನಾಗರಾಜ್ ಬಂದ್​​ಗೆ ಕರೆನೀಡಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸರ್ವರೂ ಒಕ್ಕೊರಲಿಂದ ತಮ್ಮ ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಬಂದ್​ ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸ್ಪಂದಿಸಿರುವ ವಾಟಾಳ್ ಇಂದು ಬಂದ್​ ಆಚರಿಸುತ್ತಿಲ್ಲ. ಬದಲಿಗೆ ಇಂದಿನ ಕರ್ನಾಟಕ ಬಂದ್ ಮುಂದೂಡಿಕೆ ಹಿನ್ನೆಲೆ ವಾಟಾಳ್ & ಟೀಂ ಬೃಹತ್ ಪ್ರತಿಭಟನೆಗೆ ಮುಂದಾಗಿದೆ.

ವಿವಿಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಎಂಇಎಸ್ ನಿಷೇಧಗೊಳಿಸುವಂತೆ ಒತ್ತಾಯಿಸಿ ಇಂದು ಬೆಳಗ್ಗೆ 11 ಗಂಟೆಗೆ ಪ್ರೊಟೆಸ್ಟ್ ಆರಂಭವಾಗಲಿದೆ. ನಿನ್ನೆ ಸಿಎಂ ಜೊತೆಗಿನ ಸಂಧಾನ ಸಭೆ ಸಕ್ಸಸ್ ಆದ ಬಳಿಕ ಬಂದ್ ದಿನಾಂಕ ಮುಂದೂಡಿಕೆಗೆ ವಾಟಾಳ್ ಒಪ್ಪಿದ್ದರು. ಅದರಂತೆ ಈಗ ಎಂಇಎಸ್ ಬ್ಯಾನ್ ಗೆ ಜನವರಿ 20ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ. ಒಂದು ವೇಳೆ ಬ್ಯಾನ್ ಮಾಡದಿದ್ದರೆ ಮತ್ತೆ ಬಂದ್ ಗೆ ಕರೆ ನೀಡಲಿದ್ದು, ಜನವರಿ 22ರಂದು (January 22 2022 – ಶನಿವಾರ) ಕರ್ನಾಟಕ ಬಂದ್ ಗೆ ಕರೆ ನೀಡುವುದಾಗಿ ವಾಟಾಳ್ ನಾಗರಾಜ್ ರಾಜ್ಯ ಸರ್ಕಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಾಟಾಳ್ ನಾಗರಾಜ್ ಮಾತಿಗೆ ದನಿಗೂಡಿಸಿದ ಸಾರಾ ಗೋವಿಂದು: ಎಂಇ‌ಎಸ್ ಬ್ಯಾನ್ ಮಾಡಲು ಇವತ್ತು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದೆವು. ಆದರೆ ಮುಖ್ಯಮಂತ್ರಿಗಳು ನೀಡಿರುವ ಭರವಸೆ ಮೇಲೆ ಬಂದ್ ಕೈ ಬಿಟ್ಟು ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದೇನೆ. ಎಂ‌ಇಎಸ್ ಬ್ಯಾನ್ ಮಾಡುವುದರಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿಯನ್ನು ಮಾಡುತ್ತಿದ್ದೇವೆ. ಎಂಇಎಸ್ ಬ್ಯಾನ್ ಮಾಡುವವರೆಗೂ ನಮ್ಮ ಹೋರಾಟ ನಿರಂತರ. ಮುಖ್ಯಮಂತ್ರಿಗಳು ಕೊಟ್ಟಮಾತಿಗೆ ತಪ್ಪಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ನಾಡು-ನುಡಿ ವಿಚಾರದಲ್ಲಿ ಎಲ್ಲರೂ ಕೈಜೋಡಿಸಬೇಕು. ಸಿನಿಮಾ ರಂಗದವರು ಸೇರಿ ಎಲ್ಲರಿಗೂ ಮನವಿ ಮಾಡಿದ್ದೇವೆ ಎಂದು ಟಿವಿ 9 ಜೊತೆ ಮಾತನಾಡುತ್ತಾ ಸಾರಾ ಗೋವಿಂದು ಹೇಳಿದ್ದಾರೆ.

ಇದನ್ನೂ ಓದಿ:

Karnataka Bandh: ಸಿಎಂ ಬೊಮ್ಮಾಯಿ ಸಂಧಾನ ಯಶಸ್ವಿ; ಕರ್ನಾಟಕ ಬಂದ್ ಇಲ್ಲ ಎಂದ ವಾಟಾಳ್ ನಾಗರಾಜ್ Karnataka Bandh ಬಗ್ಗೆ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ | Vatal Nagaraj Press Meet | Tv9 Kannada

Published On - 7:54 am, Fri, 31 December 21