3ನೆಯ ಮುದ್ದಿನ ಗಂಡನ ಬಗ್ಗೆ ಇತ್ತು ಅನುಮಾನ! ಮತ್ತೊಬ್ಬ ರೌಡಿಗೆ ವಿಚಾರ ತಿಳಿಸಿದ್ದ ಅರ್ಚನಾ: ಇದು ತ್ರಿಕೋನ ಪ್ರೇಮದ ಫಲಾನಾ?

3ನೆಯ ಮುದ್ದಿನ ಗಂಡನ ಬಗ್ಗೆ ಇತ್ತು ಅನುಮಾನ! ಮತ್ತೊಬ್ಬ ರೌಡಿಗೆ ವಿಚಾರ ತಿಳಿಸಿದ್ದ ಅರ್ಚನಾ: ಇದು ತ್ರಿಕೋನ ಪ್ರೇಮದ ಫಲಾನಾ?
ಯುವಿಕಾ ರೆಡ್ಡಿ, ನವೀನ್, ಅರ್ಚನಾ ರೆಡ್ಡಿ

2021ರ ಆರಂಭದಲ್ಲೆ ಅರ್ಚನಾ ಮಗಳು ಯುವಿಕಾ ನವೀನ್ ಬಳಿ ತಾನು ಆತನನ್ನು ಇಷ್ಟು ಪಡುತ್ತಿರುವುದಾಗಿ ಹೇಳಿಕೊಂಡಿದ್ದಳು. ನವೀನ್, ಯುವಿಕಾಳಿಗೆ ಮಾರುಹೋಗಿ ತಾಯಿ ಬಿಟ್ಟು ಯುವಿಕಾ ಜೊತೆಗೆ ಲವ್ವಿ ಡವ್ವಿ ಶುರು ಮಾಡಿದ್ದ.

TV9kannada Web Team

| Edited By: sadhu srinath

Dec 31, 2021 | 12:42 PM

ಬೆಂಗಳೂರು: ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಹಿಂದಿನ ರಹಸ್ಯ ತನಿಖೆ ವೇಳೆ ಬಯಲಾಗಿದೆ. ಅರ್ಚನಾ ರೆಡ್ಡಿಯನ್ನು ಕೊಲೆ ಮಾಡಬೇಕು ಎಂದು ಮೊದಲು ಹೇಳಿದ್ದೆ ಮಗಳು ಯುವಿಕಾ ರೆಡ್ಡಿ ಎಂಬ ಸತ್ಯ ಹೊರ ಬಿದ್ದಿದೆ. ಕೊಲೆಯ ಹಿಂದೆ ಟ್ರಯಾಂಗಲ್ ಲವ್ ಸ್ಟೋರಿ ಅಡಗಿದೆ.

ನವೀನ್ಗೂ ಅರ್ಚನಾ ರೆಡ್ಡಿಗೂ ಪ್ರೀತಿ ಹುಟ್ಟಿದ್ದು ಹೇಗೆ? 2014 ರಲ್ಲಿ ಜಿಮ್ ಟ್ರೇನರ್ ನವೀನ್ ತನ್ನ ಮೊದಲ ಹೆಂಡತಿ ಮೂಲಕ ಅರ್ಚನಾ ರೆಡ್ಡಿ ಪರಿಚಯ ಮಾಡಿಕೊಂಡಿದ್ದ. ಹೀಗಾಗಿ ಅರ್ಚನಾ ರೆಡ್ಡಿಗೆ ನವೀನ್ ಪರಿಚಯವಾಗಿತ್ತು. ಬಳಿಕ ಅರ್ಚನಾ ರೆಡ್ಡಿ ಹಾಗು ನವೀನ್ ಇಬ್ಬರ ನಡುವಿನ ಪರಿಚಯ ಪ್ರೀತಿಯಾಗಿ ಬದಲಾಯಿತು. ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಈ ಪ್ರೀತಿಯ ಸಾಕ್ಷಿಯಾಗಿ ಅರ್ಚನಾ ರೆಡ್ಡಿ ತನ್ನ ಮೂರನೆ ಗಂಡನಾಗಿ ನವೀನ್ನನ್ನು ಮದುವೆ ಮಾಡಿಕೊಂಡ್ರು. 2021ರ ತನಕ ನವೀನ್ ಅರ್ಚನಾ ಹಾಗು ಯುವಿಕಾ ಮತ್ತು ಅರ್ಚನಾ ಮಗ ಎಲ್ಲರೂ ಜಿಗಣಿಯಲ್ಲಿ ವಾಸ್ ಮಾಡ್ತಿದ್ರು. 2021ರ ತನಕ ಈ ಕುಟುಂಬದಲ್ಲಿ ಎಲ್ಲವೂ ಸರಿಯಾಗೆ ಇತ್ತು.

ತಂದೆ ಸ್ಥಾನದಲ್ಲಿದ್ದ ನವೀನ್ ಮೇಲೆ ಯುವಿಕಾ ಪ್ರೀತಿ ಆದ್ರೆ 2021ರ ಆರಂಭದಲ್ಲೆ ಅರ್ಚನಾ ಮಗಳು ಯುವಿಕಾ ನವೀನ್ ಬಳಿ ತಾನು ಆತನನ್ನು ಇಷ್ಟು ಪಡುತ್ತಿರುವುದಾಗಿ ಹೇಳಿಕೊಂಡಿದ್ದಳು. ನವೀನ್, ಯುವಿಕಾಳಿಗೆ ಮಾರುಹೋಗಿ ತಾಯಿ ಬಿಟ್ಟು ಯುವಿಕಾ ಜೊತೆಗೆ ಲವ್ವಿ ಡವ್ವಿ ಶುರು ಮಾಡಿದ್ದ. ನವೀನ್ ಏಕಕಾಲದಲ್ಲಿ ಅರ್ಚನಾ ರೆಡ್ಡಿ ಮತ್ತು ಆಕೆಯ ಮಗಳು ಯುವಿಕಾ ಇಬ್ಬರನ್ನೂ ಮೇಟೈನ್ ಮಾಡ್ತಿದ್ದ. 2021ರ ಸೆಪ್ಟೆಂಬರ್ನಲ್ಲಿ ಯುವಿಕಾ ಮತ್ತು ನವೀನ್ ಸಂಬಂಧ ಬಯಲಾಗಿದೆ. ಬರ್ತ್ ಡೇ ಪಾರ್ಟಿಯಲ್ಲಿ ಕಂಠ ಪೂರ್ತಿ ಕುಡಿದಿದ್ದ ಯುವಿಕಾ ತನ್ನ ತಾಯಿ ಅರ್ಚನಾಗೆ ಮೆಸೇಜ್ ಮಾಡಿದ್ದಳು. ನಾನು ನವೀನ್ ಇಬ್ಬರು ರಿಲೇಷನ್ಶಿಪ್ನಲ್ಲಿ ಇದ್ದೀವಿ ಎಂದು ಮೆಸೇಜ್ ಮಾಡಿದ್ಳು. ಬಳಿಕ ಮನೆಗೆ ಬಂದಾಗ ಈ ಸಂಬಂಧ ಯುವಿಕಾ ಮತ್ತು ಅರ್ಚನಾ ನಡುವೆ ಜಗಳ ನಡೆದಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ನವೀನ್ ಮನೆಯಲ್ಲಿ ಗಲಾಟೆ ಮಾಡ್ತಾನೆ ಎಂದು ಅರ್ಚನಾ ದೂರು ದಾಖಲಿಸಿದ್ದಾರೆ. ಇದು ಗಂಡ ಹೆಂಡತಿ ಜಗಳ ಎಂದು ಕೇಸ್ ದಾಖಲು ಮಾಡಿ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ರು.

ಇಷ್ಟೆಲ್ಲಾ ಆದ ಬಳಿಕ ಮತ್ತೆ ಅರ್ಚನಾ ರೆಡ್ಡಿ ಮನೆಯಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ನನ್ನ ಜೊತೆಗೆ ಇರು ಅಥವಾ ನನ್ನ ಮಗಳ ಜೊತೆ ಇರು ಇಬ್ಬರ ಜೊತೆಗೂ ನಾಟಕ ಮಾಡ್ತಾ ಇರಬೇಡ ಎಂದು ಅರ್ಚನಾ ನವೀನ್ ವಿರುದ್ಧ ಕೆಂಡಾಮಂಡಲರಾಗಿದ್ರು. ಬಳಿಕ ನಾವಿಬ್ಬರು ಒಟ್ಟಿಗೆ ಇರ್ತಿವಿ ಎಂದು ಯುವಿಕಾ ರೆಡ್ಡಿ ಮತ್ತು ನವೀನ್ ಮನೆ ಬಿಟ್ಟು ಹೊರಗೆ ಬಂದಿದ್ರು. ಬಳಿಕ ನೊಂದಿದ್ದ ಅರ್ಚನಾ ಮೊಬೈಲ್ ನಂಬರ್, ಮನೆ ಎರಡನ್ನೂ ಬದಲಾಯಿಸಿದ್ರು. ಮಗನ ಜೊತೆಗೆ ಬೆಳ್ಳಂದೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ರು. ಅರ್ಚನಾ ರೆಡ್ಡಿ ಬಿಟ್ಟು ಬಂದ ಮೇಲೆ ನವೀನ್ ಹಾಗೂ ಯುವಿಕಾಗೆ ಹಣದ ಸಮಸ್ಯೆ ಎದುರಾಯ್ತು.

ಈ ಹಿಂದೆ ಅರ್ಚನಾ ರೆಡ್ಡಿ ಜೊತೆಗೆ ಇದ್ದಾಗ ನವೀನ್ಗೆ ತಿಂಗಳಿಗೆ ಒಂದು ಲಕ್ಷ ಹಣ ಬರುತ್ತಿತ್ತು. ಯುವಿಕಾ ರೆಡ್ಡಿಗೂ ತಿಂಗಳಿಗೆ ಐವತ್ತು ಸಾವಿರಕ್ಕಿಂತ ಹೆಚ್ಚು ಹಣವನ್ನು ಖರ್ಚಿಗಾಗಿ ನೀಡ್ತಿದ್ರು. ಖಾಸಗಿ ಕಾಲೇಜ್ನಲ್ಲಿ ಬಿ.ಕಾಂ ವ್ಯಾಸಂಗ ಮಾಡ್ತಿದ್ದ ಯುವಿಕಾ ಕಾಲೇಜಿಗೆ ಹೋಗಲು ಸ್ವತಃ ತಾಯಿ ಅರ್ಚನಾ ರೆಡ್ಡಿನೇ ಕಾರು ಓಡಿಸಿ ಕರೆದುಕೊಂಡು ಬರುತ್ತಿದ್ರು. ಇಷ್ಟೆಲ್ಲಾ ಪ್ರೀತಿ ಇಟ್ಟಿದ್ದ ತಾಯಿ ಮೋಸ ಮಾಡಿದ ಮೇಲೆ ಯುವಿಕಾಳಿಗೆ ಖರ್ಚಿಗೆ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಅರ್ಚನಾ ರೆಡ್ಡಿಯನ್ನು ಮುಗಿಸೋದಕ್ಕೆ ಯುವಿಕ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ.

ಮಗಳಿಂದಲೇ ತಾಯಿಯ ಕೊಲೆಗೆ ಸಂಚು ಅರ್ಚನಾ ಸತ್ತರೆ ಎಲ್ಲವೂ ನಮಗೆ ಸಿಗತ್ತೆ ಎಂದು ಕೊಲೆಗೆ ಪ್ಲ್ಯಾನ್ ಮಾಡಿದ್ದಾರೆ. ಯುವಿಕಾ ಮಾತನ್ನು ಒಪ್ಪಿಕೊಂಡ ನವೀನ್ ನವೆಂಬರ್ನಿಂದ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ನವೀನ್ ಬಗ್ಗೆ ಅನುಮಾನ ಇದ್ದ ಅರ್ಚನಾ, ನವೀನ್ ಪರಿಚಯ ಮಾಡಿಸಿದ್ದ ರೌಡಿ ರೋಹಿತ್ಗೆ ವಿಚಾರ ತಿಳಿಸಿದ್ದರು. ಆಗ ರೋಹಿತ್ ನೀವು ಬೆಳ್ಳಂದೂರು ಕಡೆ ಮನೆ ಮಾಡಿಕೊಂಡಿರೆ ಏನು ಆಗಲ್ಲ ಎಂದು ಧೈರ್ಯ ತುಂಬಿದ್ದ. ನವೀನ್ ವಿಚಾರದಲ್ಲಿ ಭಯ ಪಟ್ಟುಕೊಂಡಿದ್ದ ಅರ್ಚನಾ ಯಾವಾಗಲೂ ಹುಡುಗರನ್ನು ಬಾಡಿ ಗಾರ್ಡ್ ಆಗಿ ಜೊತೆಯಲ್ಲಿ ಇಟ್ಟುಕೊಂಡಿರುತ್ತಿದ್ದರು. ಕೊನೆಗೆ ಹುಡುಗರು ಇದ್ರೂ ಕೊಲೆ ಮಾಡೇಬಿಡಲು ನವೀನ್ ತೀರ್ಮಾನ ಮಾಡಿದ್ದ.

ಅರ್ಚನಾ ಮನೆ ಗೊತ್ತಿಲ್ಲದ ಕಾರಣ ಆಕೆಯ ಕಾರು ಹಿಂಬಾಲಿಸಿ ಮನೆ ಹುಡುಕಿದ್ದ. ಬಳಿಕ ಒಟ್ಟು ಮೂರು ಬಾರಿ ಕೊಲೆ ಮಾಡಲು ಯತ್ನಿಸಿದ್ದ. ಹೆಚ್ಎಸ್ಆರ್ ಲೇಔಟ್ನ ಬ್ಯೂಟಿ ಪಾರ್ಲರ್, ಜಿಗಣಿ ರಸ್ತೆಯಲ್ಲಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಒಂದರಲ್ಲಿ ಕೊಲೆ ಪ್ರಯತ್ನ ಮಾಡಲು ಮುಂದಾಗಿದ್ರು. ಆದ್ರೆ ಕೊಲೆ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ಹೊಸೂರು ರೋಡ್ ಜಂಕ್ಷನ್ ಬಳಿ ನವೀನ್ ಟೀಂ ಡಿಯೋ ಸ್ಕೂಟರ್ ಅನ್ನು ಇನೋವಾ ಕಾರಿಗೆ ಅಡ್ಡ ಹಾಕಿ ಅಟ್ಯಾಕ್ ಮಾಡಿ ತಲ್ವಾರ್ ನಿಂದ ಕಾರಿನ ಟಯರ್ಗಳನ್ನು ಪಂಚರ್ ಮಾಡಿ ಕಾರ್ನಲ್ಲಿದ್ದ ಅರ್ಚನಾರನ್ನು ಹೊರಗೆ ಎಳೆದು ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ಅರ್ಚನಾ ರೆಡ್ಡಿ ಕೊಲೆ ಕೇಸ್: ತಂದೆ ಜೊತೆ ಸೇರಿ ಸ್ಕೆಚ್, ಪುತ್ರಿ ಯುವಿಕಾ ರೆಡ್ಡಿ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada