ಅರ್ಚನಾ ರೆಡ್ಡಿ ಕೊಲೆ ಕೇಸ್: ತಂದೆ ಜೊತೆ ಸೇರಿ ಸ್ಕೆಚ್, ಪುತ್ರಿ ಯುವಿಕಾ ರೆಡ್ಡಿ ಅರೆಸ್ಟ್

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಪುತ್ರಿ ಯುವಿಕಾ ರೆಡ್ಡಿ ಅರೆಸ್ಟ್ ಮಾಡಿದ್ದಾರೆ. ಹೀಗಾಗಿ ಅರ್ಚನಾ ರೆಡ್ಡಿ ಹತ್ಯೆ ಕೇಸ್ನಲ್ಲಿ ಬಂಧಿತರ ಸಂಖ್ಯೆ 7ಕ್ಕೇರಿಕೆಯಾಗಿದೆ.

ಅರ್ಚನಾ ರೆಡ್ಡಿ ಕೊಲೆ ಕೇಸ್: ತಂದೆ ಜೊತೆ ಸೇರಿ ಸ್ಕೆಚ್, ಪುತ್ರಿ ಯುವಿಕಾ ರೆಡ್ಡಿ ಅರೆಸ್ಟ್
ಅರ್ಚನಾ ರೆಡ್ಡಿ ಮತ್ತು ಯುವಿಕಾ ರೆಡ್ಡಿ
Follow us
TV9 Web
| Updated By: ಆಯೇಷಾ ಬಾನು

Updated on:Dec 30, 2021 | 1:46 PM

ಬೆಂಗಳೂರು: ಡಿಸೆಂಬರ್ 27ರ ರಾತ್ರಿ ಹೆದ್ದಾರಿಯಲ್ಲಿ ಕೊಲೆಯಾದ ಅರ್ಚನಾ ರೆಡ್ಡಿ ಕೇಸ್ ಸ್ಫೋಟಕ ತಿರುವು ಪಡೆದುಕೊಂಡಿದೆ. ಅರ್ಚನಾ ರೆಡ್ಡಿ ಪುತ್ರಿ ಯುವಿಕಾ ರೆಡ್ಡಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ವಿಚಾರಣೆ ಬಳಿಕ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಪುತ್ರಿ ಯುವಿಕಾ ರೆಡ್ಡಿಯವರನ್ನು ಅರೆಸ್ಟ್ ಮಾಡಿದ್ದಾರೆ. ಹೀಗಾಗಿ ಅರ್ಚನಾ ರೆಡ್ಡಿ ಹತ್ಯೆ ಕೇಸ್ನಲ್ಲಿ ಬಂಧಿತರ ಸಂಖ್ಯೆ 7ಕ್ಕೇರಿಕೆಯಾಗಿದೆ. ಅರ್ಚನಾ ಹತ್ಯೆಗೈದಿದ್ದ 3ನೇ ಪತಿ ನವೀನ್, ಅನೂಪ್ ಸೇರಿ 6 ಜನರ ಬಂಧಿಸಲಾಗಿತ್ತು. ಇಂದು ಅರ್ಚನಾ ರೆಡ್ಡಿ ಮಗಳನ್ನೂ ಅರೆಸ್ಟ್ ಮಾಡಲಾಗಿದೆ.

ಘಟನೆ ಹಿನ್ನೆಲೆ: ಜಿಗಣಿ ಮೂಲದ ಅರ್ಚನಾ ರೆಡ್ಡಿ(40), ಕೆಲ ದಿನಗಳಿಂದ ಬೆಳ್ಳಂದೂರಲ್ಲಿ ವಾಸವಿದ್ರು. ಮದ್ವೆಯಾಗಿ 2 ಮಕ್ಕಳಿದ್ದು, ಐದಾರು ವರ್ಷಗಳ ಹಿಂದೆ ಗಂಡನಿಗೆ ಡಿವೋರ್ಸ್ ಕೊಟ್ಟಿದ್ರು. ನಂತರ ಈಕೆ ಲೈಫ್ಗೆ ನವೀನ್ ಎಂಬುವವನ ಎಂಟ್ರಿಯಾಯ್ತು. ಬಾಡಿ ಬಿಲ್ಡರ್ ನವೀನ್ ಜತೆ ಅರ್ಚನಾಗೆ ಸ್ನೇಹ ಬೆಳೆದಿತ್ತು. ನಂತರ ಅರ್ಚನಾ ಈತನನ್ನ 2ನೇ ಮದ್ವೆ ಆದ್ರು. ಆದ್ರೆ, ಎರಡ್ಮೂರು ತಿಂಗಳ ಹಿಂದೆ, ಹಣ-ಆಸ್ತಿ ವಿಷ್ಯಕ್ಕೆ ಇಬ್ಬರ ನಡುವೆ ಕಿರಿಕ್ ನಡೆದಿದೆ.

ಗಲಾಟೆ ಬಳಿಕ ಅರ್ಚನಾ, ನವೀನ್ ವಿರುದ್ಧ ಜಿಗಣಿ ಸ್ಟೇಷನ್ಗೆ ದೂರು ಕೊಟ್ಟಿದ್ರು. ನಂತರ ರೋಹಿತ್ ಅನ್ನೋ ಮತ್ತೊಬ್ಬನ ಪರಿಚಯವಾಗಿದೆ. ಆತನ ಜತೆ ಸಲುಗೆಯಿಂದ ಇದ್ದ ಅರ್ಚನಾ, ಇತ್ತ ನವೀನ್ ಕಥೆ ಮುಗಿಸೋಕೆ ಪ್ಲ್ಯಾನ್ ಮಾಡ್ತಿದ್ರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದ್ರೆ, ಈ ವಿಷ್ಯ ತಿಳಿದ ನವೀನ್ ಅರ್ಚನಾಳ ಕಥೆ ಮುಗಿಸಿದ್ದಾನೆ. ನಿನ್ನೆ ಜಿಗಣಿ ಪುರಸಭೆ ಚುನಾವಣೆಯಲ್ಲಿ, ವೋಟ್ ಮಾಡೋಕೆ ಅಂತ ಅರ್ಚನಾ ಬಂದಿದ್ರು. ಸಂಬಂಧಿಕರ ಮನೆಗಳಿಗೆ ತೆರಳಿ ರಾತ್ರಿ ಮಗನ ಜತೆ ಕಾರಲ್ಲಿ ಹೋಗ್ತಿದ್ರು. ಈ ವೇಳೆ, ಹೊಸೂರು ಜಂಕ್ಷನ್ ಬಳಿ, ನವೀನ್ ಅಂಡ್ ಗ್ಯಾಂಗ್ ಅಡ್ಡಹಾಕಿದೆ. ಡ್ರೈವರ್ ಸೀಟ್ನ ಪಕ್ಕದಲ್ಲಿ ಕೂತಿದ್ದ ಅರ್ಚನಾಳನ್ನ ಹೊರಗೆಳೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

ರಾತ್ರಿ 10:30ರ ಹೊತ್ತಲ್ಲಿ ಅರ್ಚನಾಳನ್ನ ಕೊಂದು ಕಿರಾತಕರು ಎಸ್ಕೇಪ್ ಆಗಿದ್ರು. ಬಳಿಕ ಅರ್ಚನಾ ಪುತ್ರ ಅರವಿಂದ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ರು. ಕೆಲವೇ ಹೊತ್ತಲ್ಲಿ ಪೊಲೀಸರು ನವೀನ್ನನ್ನ ಬಂಧಿಸಿದ್ರು. ಶಾಕಿಂಗ್ ಸಂಗತಿ ಏನಂದ್ರೆ, ಅರ್ಚನಾ ಸಹವಾಸ ಮಾಡಿದ್ದ ನವೀನ್, ಆಕೆ ಮಗಳ ಮೇಲೂ ಕಣ್ಣಿಟ್ಟಿದ್ನಂತೆ. ಅಲ್ಲದೆ ನವೀನ್, ಯುವಿಕಾ ಜೊತೆ ಬಹಳ ಸಲುಗೆಯಿಂದಿದ್ದ. ಸದ್ಯ ಈಗ ಯುವಿಕಾಳನ್ನು ಅರೆಸ್ಟ್ ಮಾಡಲಾಗಿದ್ದು ಕೊಲೆಯಲ್ಲಿ ಅವಳ ಪಾತ್ರ ಇರುವುದು ಬಯಲಾಗಿದೆ.

ಇದನ್ನೂ ಓದಿ: Crime News: 21 ವರ್ಷದ ಮಗಳ ಮುಂದೆಯೇ ಮಹಿಳೆಯ ಹತ್ಯೆ ಪ್ರಕರಣ: 3ನೇ ಪತಿ ಸೇರಿ ಇಬ್ಬರ ಬಂಧನ

Published On - 11:34 am, Thu, 30 December 21