ವರ್ಷಾಚರಣೆಗೆ ಬ್ರೇಕ್ ಹಾಕಲು ‘ಖಾಕಿ’ ತಯಾರಿ: ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ, ಎಂಜಿ ರೋಡ್ ಹಾಗೂ ಬ್ರಿಗೇಡ್ ರಸ್ತೆಗಳು ಬಂದ್

ವರ್ಷಾಚರಣೆಗೆ ಬ್ರೇಕ್ ಹಾಕಲು ‘ಖಾಕಿ’ ತಯಾರಿ: ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ, ಎಂಜಿ ರೋಡ್ ಹಾಗೂ ಬ್ರಿಗೇಡ್ ರಸ್ತೆಗಳು ಬಂದ್
ಸಾಂದರ್ಭಿಕ ಚಿತ್ರ

ನಾಳೆ ರಾತ್ರಿ 10 ಗಂಟೆಯ ಒಳಗೆ ಸಂಪೂರ್ಣ ಬಂದ್ ಆಗಬೇಕು. ನಿಗದಿತ ಸಮಯದಲ್ಲಿಯೂ ಕೂಡ ಡಿಜೆಗಳನ್ನ ಬಳಸುವಂತಿಲ್ಲ. ರಾತ್ರಿ 10 ಗಂಟೆಯ ಬಳಿಕ ಅನಗತ್ಯವಾಗಿ ಓಡಾಡಿದರೆ ಕ್ರಮ ಕೈಗೊಳ್ಳಲಾಗುತ್ತೆ. -ಡಿಸಿಪಿ‌ ಅನುಚೇತ್

TV9kannada Web Team

| Edited By: Ayesha Banu

Dec 30, 2021 | 3:16 PM

ಬೆಂಗಳೂರು: ಇನ್ನು ಒಂದು ದಿನ ಕಳೆದ್ರೆ ಇಡೀ ಜಗತ್ತು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಲಿದೆ. ಆದ್ರೆ ಕಳೆದ ಬಾರಿಯಂತೆ ಈ ಬಾರಿ ಕೂಡ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಕೊರೊನಾ, ಒಮಿಕ್ರಾನ್ ಆತಂಕ ಹಿನ್ನೆಲೆ ನಗರದ ಗಲ್ಲಿ ಗಲ್ಲಿಯಲ್ಲಿ ಪೊಲೀಸರು ಬಂದೋಬಸ್ತ್ ತಯಾರಿ ನಡೆಸುತ್ತಿದ್ದಾರೆ.

ಸದ್ಯ ನಾಳಿನ ಬಂದೋಬಸ್ತ್ ಕುರಿತು ಬೆಂಗಳೂರಿನಲ್ಲಿ ಕೇಂದ್ರ ವಿಭಾಗದ ಡಿಸಿಪಿ‌ ಅನುಚೇತ್ ಮಾಹಿತಿ ನೀಡಿದ್ದು ಹೊಸ ವರ್ಷಾಚರಣೆ ಹಿನ್ನೆಲೆ ಕುಡಿದು ಟೈಟ್ ಆಗಿ ರೂಲ್ಸ್ ಬ್ರೇಕ್ ಮಾಡ್ಕೊಂಡು ಬೀದಿಗಿಳಿದು ರಂಪಾಟ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ನಾಳೆ ರಾತ್ರಿ 10 ಗಂಟೆಯ ಒಳಗೆ ಸಂಪೂರ್ಣ ಬಂದ್ ಆಗಬೇಕು. ನಿಗದಿತ ಸಮಯದಲ್ಲಿಯೂ ಕೂಡ ಡಿಜೆಗಳನ್ನ ಬಳಸುವಂತಿಲ್ಲ. ರಾತ್ರಿ 10 ಗಂಟೆಯ ಬಳಿಕ ಅನಗತ್ಯವಾಗಿ ಓಡಾಡಿದರೆ ಕ್ರಮ ಕೈಗೊಳ್ಳಲಾಗುತ್ತೆ. ಸಾರ್ವಜನಿಕವಾಗಿ ಯಾರೂ ಸಂಭ್ರಮಾಚರಣೆ ಮಾಡುವಂತಿಲ್ಲ. ಸಂಭ್ರಮಾಚರಣೆ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ವಿಧಿಸಲಾಗುತ್ತೆ. ನಾಳೆಯೂ ಎಂದಿನಂತೆ ನೈಟ್ ಕರ್ಫ್ಯೂ ನಿಯಮ ಇರುತ್ತೆ ಎಂದು ತಿಳಿಸಿದ್ದಾರೆ.

ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಇನ್ನು ಕೇಂದ್ರ ವಿಭಾಗದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿಶೇಷವಾಗಿ ಎಂಜಿ ರೋಡ್, ಬ್ರಿಗೇಡ್ ಹಾಗೂ ರೆಸಿಡೆನ್ಸಿ ರಸ್ತೆ ಬಂದ್ ಮಾಡಲಾಗಿದೆ. ಹೆಚ್ಚುವರಿಯಾಗಿ ಚೆಕ್ ಪೋಸ್ಟ್ ಹಾಗೂ ನಾಕಬಂದಿಗಳನ್ನು ಹಾಕಲಾಗಿದೆ. ಸರ್ಕಾರದ ಆದೇಶ ಪಾಲಿಸುವಂತೆ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಸೂಚಿಸಲಾಗಿದೆ. ಹೊಸ ವರ್ಷಕ್ಕೆ ಚರ್ಚ್ ಸ್ಟ್ರೀಟ್, ಎಂಜಿ ರೋಡ್ ಹಾಗೂ ಬ್ರಿಗೇಡ್ ರಸ್ತೆಗೆ ನಿರ್ಬಂಧ ಹೇರಲಾಗಿದೆ.

ಈಗಾಗಲೇ ನೈಟ್ ಕರ್ಫ್ಯೂ ಜಾರಿಯಾಗಿದೆ. ರಾತ್ರಿ 10 ಗಂಟೆಯಾಗ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ಸ್ತಬ್ಧವಾಗ್ತಿವೆ. ವ್ಯಾಪಾರ ವಹಿವಾಟು ಬಂದ್ ಆಗ್ತಿವೆ. ಮಾಲ್, ಥಿಯೇಟರ್, ಪಬ್, ಕ್ಲಬ್ಗಳೆಲ್ಲ ಕ್ಲೋಸ್ ಆಗ್ತಿವೆ. ಬೆಳಗ್ಗೆ ಐದು ಗಂಟೆ ತನಕವೂ ಸಿಟಿಯಲ್ಲಿ ಟಫ್ ರೂಲ್ಸ್ ಜಾರಿಯಾಗ್ತಿದ್ದು ಬೇಕಾಬಿಟ್ಟಿಯಾಗಿ ಹೊರಗೆ ಬಂದ್ರೆ ಪೊಲೀಸ್ರು ಬಿಸಿಮುಟ್ಟಿಸುತ್ತಿದ್ದಾರೆ. ನೈಟ್ ಕರ್ಫ್ಯೂ ಜೊತೆಗೆ ಖಾಕಿ ಪಡೆ ಹೊಸ ವರ್ಷಕ್ಕೂ ಸಿದ್ಧತೆ ಮಾಡ್ಕೊಂಡಿದೆ. ಪಾರ್ಟಿ ಸ್ಪಾಟ್ಗಳಾದ ಎಂಜಿರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೊರಮಂಗಲ, ಇಂದಿರಾನಗರ ಸೇರಿದಂತೆ ಪ್ರತಿಷ್ಟಿತ ಏರಿಯಾಗಳಲ್ಲಿ ಸಿಸಿಟಿವಿ ಫಿಕ್ಸ್ ಮಾಡಿದ್ದಾರೆ. ವಿಶೇಷ ಅಂದ್ರೆ ಆಗ್ನೇಯ ವಿಭಾಗವೊಂದರಲ್ಲೇ 1410 ಪೊಲೀಸರ ನಿಯೋಜನೆ ಮಾಡಲಾಗಿದೆ.

ಡಿಸೆಂಬರ್ 30ರಿಂದ ಜನವರಿ 2ರ ತನಕ 50:50 ರೂಲ್ಸ್ ಡಿಸೆಂಬರ್ 30ರಿಂದ ಜನವರಿ 2ರ ತನಕ ಪಬ್, ಬಾರ್, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ 50:50 ರೂಲ್ಸ್ ಇರಲಿದೆ. ಹತ್ತು ಗಂಟೆ ನಂತರವೂ ಬಾಗಿಲು ತೆರೆದಿದ್ರೆ ಪೊಲೀಸ್ರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: T20I Player of the Year: ವರ್ಷದ ಟಿ20 ಪ್ಲೇಯರ್​ ಪಟ್ಟಿಯಲ್ಲಿ ನಾಲ್ವರ ಹೆಸರು..!

Follow us on

Related Stories

Most Read Stories

Click on your DTH Provider to Add TV9 Kannada