ಏರ್ಪೋರ್ಟ್ನಲ್ಲಿ ಚೆಕಿಂಗ್ ವೇಳೆ 40 ಲಕ್ಷದ ವಾಚ್ ತೆಗೆಯಲು ಪ್ರಯಾಣಿಕನ ಕಿರಿಕ್: ಮುಂದೇನಾಯ್ತು?
ದೆಹಲಿ ವಿಮಾನ ಹತ್ತಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸದರಿ ಪ್ರಯಾಣಿಕ ಡಿಪಾರ್ಚರ್ ವೇಳೆ ಸೆಕ್ಯೂರಿಟಿ ಚೆಕಿಂಗ್ಗೆ ಒಳಪಡಬೇಕಿತ್ತು. ಆ ವೇಳೆ ಬೆಲ್ಟ್, ಪರ್ಸ್, ಮೊಬೈಲ್ ಸೇರಿದಂತೆ ಎಲ್ಲವನ್ನೂ ಚೆಕಿಂಗ್ ಗಾಗಿ ನೀಡಿದ ಸದರಿ ಪ್ರಯಾಣಿಕ ಮುಂದೆ ತನ್ನ ಕೈಯಲ್ಲಿದ್ದ ದುಬಾರಿ ವಾಚ್ ಅನ್ನು ತಪಾಸಣಾ ಯಂತ್ರದಲ್ಲಿ ಚೆಕಿಂಗ್ ಗೆ ಇಡಲು ನಿರಾಕರಿಸಿದ್ದಾನೆ.
ಬೆಂಗಳೂರು ಗ್ರಾಮಾಂತರ: ಏರ್ಪೋರ್ಟ್ನಲ್ಲಿ ಭದ್ರತಾ ಅಧಿಕಾರಿಗಳು ಚೆಕಿಂಗ್ ಮಾಡುವ ವೇಳೆ ತನ್ನದು 40 ಲಕ್ಷ ರೂಪಾಯಿ ಮೌಲ್ಯದ ದುಬಾರಿ ವಾಚ್. ಅದನ್ನು ತೆಗೆದು ಪರಿಶೀಲನೆಗೆ ಒಪ್ಪಿಸಲು ಆಗದು ಎಂದು ಪ್ರಯಾಣಿಕರೊಬ್ಬರು ವರಾತ ತೆಗೆದಿದ್ದಾರೆ. ಏರ್ಪೋರ್ಟ್ನಲ್ಲಿ ವಿಮಾನ ಹತ್ತುವ ಮುನ್ನ ಚೆಕಿಂಗ್ ವೇಳೆ ತನ್ನ ಬಳಿಯಿರುವುದು ದುಬಾರಿ ವಾಚ್ ಅಂತಾ ವಾಚ್ ತೆಗೆಯಲು ನಿರಾಕರಿಸಿ, ಭದ್ರತಾ ಪಡೆಯೊಂದಿಗೆ ಪ್ರಯಾಣಿಕರೊಬ್ಬರು ಕಿರಿಕ್ ಮಾಡಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲು ಸಜ್ಜಾಗಿದ್ದ ಪ್ರಯಾಣಿಕ ಇವರು. ಹೀಗೆ ಕಿರಿಕ್ ಮಾಡಿಕೊಂಡ ಆ ಪ್ರಯಾಣಿಕನಿಗೆ ಭದ್ರತಾ ಸಿಬ್ಬಂದಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ದೆಹಲಿ ವಿಮಾನ ಹತ್ತಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸದರಿ ಪ್ರಯಾಣಿಕ ಡಿಪಾರ್ಚರ್ ವೇಳೆ ಸೆಕ್ಯೂರಿಟಿ ಚೆಕಿಂಗ್ಗೆ ಒಳಪಡಬೇಕಿತ್ತು. ಆ ವೇಳೆ ಬೆಲ್ಟ್, ಪರ್ಸ್, ಮೊಬೈಲ್ ಸೇರಿದಂತೆ ಎಲ್ಲವನ್ನೂ ಚೆಕಿಂಗ್ ಗಾಗಿ ನೀಡಿದ ಸದರಿ ಪ್ರಯಾಣಿಕ ಮುಂದೆ ತನ್ನ ಕೈಯಲ್ಲಿದ್ದ ದುಬಾರಿ ವಾಚ್ ಅನ್ನು ತಪಾಸಣಾ ಯಂತ್ರದಲ್ಲಿ ಚೆಕಿಂಗ್ ಗೆ ಇಡಲು ನಿರಾಕರಿಸಿದ್ದಾನೆ.
ಈ ವೇಳೆ ಭದ್ರತಾ ಪಡೆ ವಾಚ್ ಸಹ ಇಡುವಂತೆ ಸೂಚಿಸಿದಾಗ ಇದು 40 ಲಕ್ಷ ರೂಪಾಯಿ ಬೆಲೆಯ ದುಬಾರಿ ವಾಚ್. ನಾ ಬಿಚ್ಚೋಲ್ಲ ಅಂತಾ ಕಿರಿಕ್ ಮಾಡಿದ್ದಾನೆ. ಅಲ್ಲದೆ ಈ ವೇಳೆ ಎಷ್ಟೇ ಒತ್ತಾಯ ಮಾಡಿದರೂ ವಾಚ್ ಹೋದ್ರೆ ಯಾರು ಕೊಡ್ತಾರೆ? ಅಂತಾನೂ ಭದ್ರತಾ ಪಡೆಯನ್ನು ದಬಾಯಿಸಿದ್ದಾನೆ. ಸೆಕ್ಯುರಿಟಿ ಚೆಕ್ ಆಗದಿದ್ರೆ ಫ್ಲೈಟ್ ಹತ್ತುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ವಿಮಾನನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುವ ಸಿಐಎಸ್ಎಫ್ ಸಿಬ್ಬಂದಿ ಗರಂ ಆಗಿದ್ದಾರೆ.
ಮತ್ತೊಮ್ಮೆ ಇಂತಹ ಐಷಾರಾಮಿ ವಾಚ್ಗಳನ್ನ ಕಟ್ಟಿಕೊಂಡು ಬಂದರೆ.. ಅಷ್ಟೇಯಾ! ಇನ್ನೂ ಇದೇ ರೀತಿ ಕೆಲ ಕಾಲ ಸಿಐಎಸ್ಎಫ್ ಸಿಬ್ಬಂದಿ ಜೊತೆ ಪ್ರಯಾಣಿಕ ಕಿರಿಕ್ ಮುಂದುವರಿಸಿದ್ದು ನಂತರ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸೆಕ್ಯೂರಿಟಿ ಚೆಕಿಂಗ್ ಗೆ ಸ್ವಂದಿಸದಿದ್ರೆ ಕ್ರಮ ಕೈಗೊಳ್ಳೋದಾಗಿ ವಾರ್ನಿಂಗ್ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ವಾರ್ನಿಂಗ್ ನಂತರ ತಣ್ಣಗಾದ ಪ್ರಯಾಣಿಕ ನಂತರ ವಾಚ್ ಅನ್ನು ಚೆಕಿಂಗ್ ಗೆ ನೀಡಿ ನಂತರ ಏರ್ಪೋರ್ಟ್ನಿಂದ ದೆಹಲಿಗೆ ಹಾರಿದ್ದಾರೆ.
ಮತ್ತೊಮ್ಮೆ ಇಂತಹ ಐಷಾರಾಮಿ ವಾಚ್ಗಳನ್ನ ಕಟ್ಟಿಕೊಂಡು ಬಂದು ಏರ್ಪೋರ್ಟ್ ನಿಯಮಗಳಿಗೆ ಸ್ಬಂದಿಸಲ್ಲ ಅಂತಾ ಕಿರಿಕ್ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳೋದಾಗಿ ಏರ್ಪೋರ್ಟ್ ಅಧಿಕಾರಿಗಳು ಖಡಕ್ ಸೂಚನೆ ನೀಡಿ ಕಳಿಸಿದ್ದಾರೆ. ಏರ್ಪೋರ್ಟ್ ನಲ್ಲಿ ನಡೆದ ಈಘಟನೆಯನ್ನೆಲ್ಲ ಕಂಡ ಸಹ ಪ್ರಯಾಣಿಕನೋರ್ವ ಭದ್ರತಾ ಪಡೆಯ ಜೊತೆ ವಾಚ್ಗಾಗಿ ನಡೆಸಿದ ಕಿರಿಕ್ ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು ಅದೀಗ ವೈರಲ್ ಆಗಿದೆ.