T20I Player of the Year: ವರ್ಷದ ಟಿ20 ಪ್ಲೇಯರ್ ಪಟ್ಟಿಯಲ್ಲಿ ನಾಲ್ವರ ಹೆಸರು..!
ICC Men's T20I Player of the Year: ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಅವರು ಕೂಡ ಈ ವರ್ಷ ಉತ್ತಮ ಪ್ರದರ್ಶನ ನೀಡಿದ್ದರು . 20 ಪಂದ್ಯಗಳಲ್ಲಿ 12ರ ಸರಾಸರಿಯಲ್ಲಿ 36 ವಿಕೆಟ್ ಪಡೆದಿದ್ದರು.
ಐಸಿಸಿ ವರ್ಷದ ಟಿ20 ಅಂತಾರಾಷ್ಟ್ರೀಯ ಆಟಗಾರ ನಾಮನಿರ್ದೇಶಿತರ ಪಟ್ಟಿಯನ್ನು ಪ್ರಕಟಿಸಿದೆ. 2021 ರ ಅತ್ಯುತ್ತಮ ಟಿ20 ಆಟಗಾರರ ಅಂತಿಮ ಪಟ್ಟಿಯಲ್ಲಿ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರನ ಹೆಸರು ಕೂಡ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಇನ್ನು ಈ ನಾಮನಿರ್ದೇಶಿತರ ಪಟ್ಟಿಯಲ್ಲಿ ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಗಳು ಹಾಗೂ ಇಬ್ಬರು ಆಲ್ರೌಂಡರ್ಗಳು ಸ್ಥಾನ ಪಡೆದಿದ್ದಾರೆ. ಐಸಿಸಿ ವರ್ಷದ ಟಿ20 ಅಂತಾರಾಷ್ಟ್ರೀಯ ಆಟಗಾರ ನಾಮನಿರ್ದೇಶಿತರ ಪಟ್ಟಿ ಈ ಕೆಳಗಿಂತಿವೆ.
1- ಮೊಹಮ್ಮದ್ ರಿಜ್ವಾನ್: ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 29 ಟಿ 20 ಪಂದ್ಯಗಳಲ್ಲಿ 74 ರ ಸರಾಸರಿಯಲ್ಲಿ 1326 ರನ್ ಗಳಿಸಿದ್ದಾರೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಅಜೇಯ 79 ರನ್ ಗಳಿಸಿದ್ದು ಅವರ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ.
2- ವನಿಂದು ಹಸರಂಗ: ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಅವರು ಕೂಡ ಈ ವರ್ಷ ಉತ್ತಮ ಪ್ರದರ್ಶನ ನೀಡಿದ್ದರು . 20 ಪಂದ್ಯಗಳಲ್ಲಿ 12ರ ಸರಾಸರಿಯಲ್ಲಿ 36 ವಿಕೆಟ್ ಪಡೆದಿದ್ದರು. ಇದಲ್ಲದೇ ಒಂದು ಅರ್ಧಶತಕದೊಂದಿಗೆ ಒಟ್ಟು 196 ರನ್ ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಹ್ಯಾಟ್ರಿಕ್ ವಿಕೆಟ್ ಸಾಧನೆಯನ್ನೂ ಮಾಡಿದ್ದರು.
3- ಮಿಚೆಲ್ ಮಾರ್ಷ: ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಕೂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವರ್ಷ ಮಾರ್ಷ್ 27 ಪಂದ್ಯಗಳಲ್ಲಿ 37 ರ ಸರಾಸರಿಯಲ್ಲಿ 627 ರನ್ ಗಳಿಸಿದರು. ಹಾಗೆಯೇ ವೇಗದ ಬೌಲಿಂಗ್ ಮೂಲಕ 8 ವಿಕೆಟ್ ಪಡೆದಿದ್ದರು. ಇನ್ನು ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಅವರು 50 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
4- ಜೋಸ್ ಬಟ್ಲರ್: ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಕೂಡ ಈ ವರ್ಷ ಭರ್ಜರಿ ಪ್ರದರ್ಶನ ನೀಡಿದ್ದರು. 14 ಪಂದ್ಯಗಳಲ್ಲಿ ಒಂದು ಶತಕದೊಂದಿಗೆ 65.44 ಸರಾಸರಿಯಲ್ಲಿ 589 ರನ್ ಕಲೆಹಾಕಿದ್ದರು. ಅಷ್ಟೇ ಅಲ್ಲದೆ ವಿಕೆಟ್ ಕೀಪಿಂಗ್ ಮೂಲಕ 13 ಯಶಸ್ಸನ್ನೂ ಕೂಡ ಪಡೆದಿದ್ದರು.
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(Nominees for ICC Men’s T20I Player of the Year revealed)