Bengaluru Power Cut: ಬೆಂಗಳೂರಿಗರಿಗೆ ವರ್ಷಾಂತ್ಯಕ್ಕೆ ಪವರ್ ಕಟ್ ಶಾಕ್; ಕೆಂಗೇರಿ, ಮತ್ತಿಕೆರೆ ಸೇರಿ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ

Powercut in Bangalore: ಬೆಂಗಳೂರಿನ ಬನಶಂಕರಿ, ಮತ್ತಿಕೆರೆ, ಕಮಲಾನಗರ, ಕೆಂಗೇರಿ, ​ ಸೇರಿ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ.

Bengaluru Power Cut: ಬೆಂಗಳೂರಿಗರಿಗೆ ವರ್ಷಾಂತ್ಯಕ್ಕೆ ಪವರ್ ಕಟ್ ಶಾಕ್; ಕೆಂಗೇರಿ, ಮತ್ತಿಕೆರೆ ಸೇರಿ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 31, 2021 | 6:10 AM

ಬೆಂಗಳೂರು: ಈ ವರ್ಷಾಂತ್ಯದ ಸಂಭ್ರಮದಲ್ಲಿರುವ ಬೆಂಗಳೂರಿಗರಿಗೆ ಬೆಸ್ಕಾಂ (BESCOM) ಪವರ್ ಕಟ್ (Power Cut) ಶಾಕ್ ನೀಡಿದೆ. ಬೆಂಗಳೂರಿನಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿರುವುದರಿಂದ ಬೆಂಗಳೂರಿನ (Bangalore) ಹಲವು ಏರಿಯಾಗಳಲ್ಲಿ ಇಂದು (ಡಿ. 31) ಪವರ್ ಕಟ್ ಇರಲಿದೆ. ಬೆಂಗಳೂರಿನಾದ್ಯಂತ ಶುಕ್ರವಾರ (ಇಂದು) ವಿದ್ಯುತ್ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ. ಬೆಂಗಳೂರಿನ ಬನಶಂಕರಿ, ಮತ್ತಿಕೆರೆ, ಕಮಲಾನಗರ, ಕೆಂಗೇರಿ, ​ ಸೇರಿ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ.

ಇಂದು (ಶುಕ್ರವಾರ) ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ. ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಆರ್‌ಬಿಐ ಲೇಔಟ್, ಯಾದವ್ ಫಾರ್ಮ್, ಸಿದ್ದನ ಲೇಔಟ್, ಕರೆಸಂದ್ರ ಬನಶಂಕರಿ 2ನೇ ಹಂತ, ಕಿಡ್ನಿ ಫೌಂಡೇಶನ್, ಆರ್‌ಕೆ ಲೇಔಟ್, ಜೆಪಿ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ದೊರೆಸಾನಿಪಾಳ್ಯ, ಚಿಕ್ಕಲಸಂದ್ರ, ಅಶ್ವಿನಿ ಲೇಔಟ್ ಮತ್ತು ಕೆಆರ್‌ಬಿ ಲೇಔಟ್​ನಲ್ಲಿ ಪವರ್ ಕಟ್ ಉಂಟಾಗಲಿದೆ.

ಬೆಂಗಳೂರು ಉತ್ತರ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತ್ತಿಕೆರೆ, ಎಸ್‌ಬಿಎಂ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಬಂಡೆಪ್ಪ ಗಾರ್ಡನ್, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಎಲ್‌ಕೆಆರ್ ನಗರ, ಜಕ್ಕೂರು ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ, ಬಾಬಾ ನಗರ, ವಿನಾಯಕನಗರ ಮತ್ತು ದ್ವಾರಕಾ ನಗರ ಸೇರಿದಂತೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಪಶ್ಚಿಮ ವಲಯದಲ್ಲಿ ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಮಲಾನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಟಿಆರ್ ನಗರ, ಕೆಇಬಿ ಕ್ವಾರ್ಟರ್ಸ್ ಬಳಿ, ಬಾಲಶಾಪಲ್ಲಿಯ ರಸ್ತೆ, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಆಂಧ್ರಹಳ್ಳಿ, ವಿದ್ಯಾಮಾನ ನಗರ, ಎಸ್‌ಎಲ್‌ವಿ ಕೈಗಾರಿಕಾ ಪ್ರದೇಶ, ಪೊಲೀಸ್ ಕ್ವಾರ್ಟರ್ ಹೊಸಹಳ್ಳಿ, ಎಸ್‌ಐಆರ್ ಎಂವಿ ಲೇಔಟ್ 1 ಬ್ಲಾಕ್, ಬಿಡಿಎ ಏರಿಯಾ ಬ್ಲಾಕ್ 1, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯದಲ್ಲಿ ಕೆಲವು ಭಾಗಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

ಹಾಗೇ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ, ಎಸ್​ಐಆರ್ ಎಂವಿ ಲೇಔಟ್ 5ನೇ ಬ್ಲಾಕ್, ಎಸ್​ಐಆರ್ ಎಂವಿ ಲೇಔಟ್ 3ನೇ ಬ್ಲಾಕ್, ಕೆಂಗೇರಿ, ಮೈಲಾಸಂದ್ರದಲ್ಲಿ ಪವರ್ ಕಟ್ ಇರಲಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಾಗವಾರ ಪಾಳ್ಯ ರಸ್ತೆ, ಎನ್‌ಬಿಸಿ ಲೇಔಟ್ ಮತ್ತು ಬನ್ನಪ್ಪ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಬನಶಂಕರಿ, ಯಶವಂತಪುರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Bengaluru Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ?