ಟ್ರಾಫಿಕ್ ಪೊಲೀಸರಿಗೆ ಅತ್ಯಾಧುನಿಕ ಬಾಡಿ ಕ್ಯಾಮೆರಾ: ದಾಖಲಾಗುತ್ತೆ ಸಂಚಾರ ನಿಯಮ ಉಲ್ಲಂಘನೆ
ಬೆಂಗಳೂರು ಸಂಚಾರ ಪೊಲೀಸರಿಗೆ ₹ 32 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ಸೌಲಭ್ಯ ಒದಗಿಸಲಾಗಿದೆ.
ಬೆಂಗಳೂರು: ಸುಗಮ ಸಂಚಾರಕ್ಕಾಗಿ ಆಧುನಿಕ ತಂತ್ರಜ್ಞಾನ ಆಧರಿತ ಸೌಲಭ್ಯಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಲೋಕಾರ್ಪಣೆ ಮಾಡಿದರು. ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಾರಿ ಬೀಟ್ ವ್ಯವಸ್ಥೆ, ಸಂಚಾರ ಪೊಲೀಸರ ಕಾರ್ಯನಿರ್ವಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಸುರೇಶ್ ಕುಮಾರ್, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿ ಹಲವರು ಪಾಲ್ಗೊಂಡಿದ್ದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಬೆಂಗಳೂರು ಸಂಚಾರ ಪೊಲೀಸರಿಗೆ ₹ 32 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ಸೌಲಭ್ಯ ಒದಗಿಸಲಾಗಿದೆ. 2,028 ಜಿಪಿಎಸ್ ಆಧರಿತ ಬಾಡಿ ಕ್ಯಾಮೆರಾ ಒದಗಿಸಲಾಗುತ್ತಿದೆ ಎಂದರು. ಈ ಸುಧಾರಿತ ಕ್ಯಾಮೆರಾಗಳು ವಾಹನಗಳ ನಿಯಮ ಉಲ್ಲಂಘನೆ ಮತ್ತು ಕಳುವಾದ ವಾಹನಗಳ ಬಗ್ಗೆ ಮಾಹಿತಿ ನೀಡುತ್ತದೆ. ಸಂಚರಿಸುವಾಗ ನಿಯಮ ಉಲ್ಲಂಘಿಸುವ ವಾಹನಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ ಎಂದರು.
ಇತರ ವಾಹನಗಳನ್ನು ಅಡ್ಡಗಟ್ಟುವುದು, ವಿನಾಕಾರಣ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುವುದನ್ನು ನಿಯಂತ್ರಿಸಲು ಇದು ಸಹಕರಿಸುತ್ತದೆ. ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆ ರೂಪಿಸಿದ್ದರು. ಇದೀಗ ಅವರೇ ಮುಖ್ಯಮಂತ್ರಿಯಾಗಿ ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ನುಡಿದರು.
ಇದನ್ನೂ ಓದಿ: Karnataka Covid Update: 707 ಮಂದಿಗೆ ಸೋಕು, 8223 ಸಕ್ರಿಯ ಪ್ರಕರಣಗಳು ಇದನ್ನೂ ಓದಿ: ಬೆಂಗಳೂರು: ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಿಗೆ, ಕಾಂಗ್ರೆಸ್ಗೆ ಜಿಗಣಿ, ಬಿಜೆಪಿಗೆ ಚಂದಾಪುರ ಪುರಸಭೆ