Bengaluru Power Cut: ಬೆಂಗಳೂರಿನ ಬನಶಂಕರಿ, ಯಶವಂತಪುರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Bengaluru Power Cut: ಬೆಂಗಳೂರಿನ ಬನಶಂಕರಿ, ಯಶವಂತಪುರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್
ಸಾಂದರ್ಭಿಕ ಚಿತ್ರ

Power Cut in Bangalore: ಬೆಂಗಳೂರಿನ ಬನಶಂಕರಿ, ಜೆ.ಪಿ ನಗರ, ಯಶವಂತಪುರ, ಬಿಇಎಲ್​ ಸೇರಿ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ.

TV9kannada Web Team

| Edited By: Sushma Chakre

Dec 30, 2021 | 6:10 AM

ಬೆಂಗಳೂರು: ಬೆಸ್ಕಾಂನಿಂದ ಬೆಂಗಳೂರಿನಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿರುವುದರಿಂದ ಸಿಲಿಕಾನ್ ಸಿಟಿಯ (Bangalore) ಹಲವು ಏರಿಯಾಗಳಲ್ಲಿ ಇಂದು (ಡಿ. 30) ಮತ್ತು ನಾಳೆ (ಡಿ. 31) ಪವರ್ ಕಟ್ ಇರಲಿದೆ. ಬೆಂಗಳೂರಿನಾದ್ಯಂತ ಗುರುವಾರ (ಇಂದು) ಮತ್ತು ಶುಕ್ರವಾರ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ. ಬೆಂಗಳೂರಿನ ಬನಶಂಕರಿ, ಜೆ.ಪಿ ನಗರ, ಯಶವಂತಪುರ, ಬಿಇಎಲ್​ ಸೇರಿ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ.

ಇಂದು ಈ ಏರಿಯಾಗಳಲ್ಲಿ ಪವರ್ ಕಟ್: ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇಂದು (ಗುರುವಾರ) ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಸಂಗಮ್ ಸರ್ಕಲ್, ಎಲ್ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಬನಶಂಕರಿ 2ನೇ ಹಂತ, ಅಂಬೇಡ್ಕರ್ ನಗರ, ಎಸ್ಪಿ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ, ಜೆಪಿ ನಗರ 2 ನೇ ಹಂತ, 3 ನೇ ಹಂತ, 4 ನೇ ಹಂತ, 15 ನೇ ಹಂತ, ಕ್ರಾಸ್, ಡಾಲರ್ ಲೇಔಟ್, ಮುನಿರೆಡ್ಡಿ ಲೇಔಟ್, ಚಿಕ್ಕಲ್ಲಸಂದ್ರ ಬಸ್ ನಿಲ್ದಾಣ, ಸಿದ್ದಾಪುರ, ಈಜಿಪುರ, ಮಾರತ್​ಹಳ್ಳಿ, ಸಂಜಯನಗರ, ಮಂಜುನಾಥ ನಗರ, ಅಶ್ವಥ್ ನಗರ ಮತ್ತು ಕೆಆರ್‌ಬಿ ಲೇಔಟ್​ನಲ್ಲಿ ಪವರ್ ಕಟ್ ಇರಲಿದೆ.

ಹಾಗೇ, ಬೆಂಗಳೂರು ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಯಶವಂತಪುರ, ಅಂಬೇಡ್ಕರ್ ನಗರ, ಮಾಡೆಲ್ ಕಾಲೋನಿ, ಕೆಎನ್ ಎಕ್ಸ್‌ಟೆನ್ಷನ್, ಎಲ್‌ಎನ್ ಕಾಲೋನಿ, ಸಿದ್ದಾರ್ಥ ಸ್ಲಂ, ರಾಮಚಂದ್ರಾಪುರ ಗ್ರಾಮ, ಆದಿತ್ಯ ನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೇಟಹಳ್ಳಿ, ಮಾರುತಿ ನಗರ, ವಿದ್ಯಾರಣ್ಯಪುರ, ನಂಜಪ್ಪ ಸರ್ಕಲ್, ತಿಂಡ್ಲು ಗ್ರಾಮ, ಅಮೃತಹಳ್ಳಿ, ಜಕ್ಕೂರು, ಆನಂದನಗರ, ಎಸ್‌ಬಿಎಂ ಕಾಲೋನಿ, ಕುಂತಿ ಗ್ರಾಮ, ಹೆಬ್ಬಾಳ, ವಿನಾಯಕನಗರ, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಉತ್ತರಹಳ್ಳಿ ರಸ್ತೆ, ಕೋನಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ಶ್ರುಸ್ತಿ ನಗರ, ವೀರಭದ್ರೇಶ್ವರ ನಗರ, ಡಿ ಗ್ರೂಪ್ ಲೇಔಟ್, ಹೊಸಹಳ್ಳಿ ರಸ್ತೆ, ಗಂಟಕನದೊಡ್ಡಿ, ಅಪೂರ್ವ ಲೇಔಟ್, ಡಿ.ಎಸ್.ಎಸ್.ಎಸ್.ಬಿ. ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ ಮತ್ತು ಭವಾನಿನಗರದಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ. ಪೀಡಿತ ಪ್ರದೇಶಗಳಲ್ಲಿ ಜೋಗುಪಾಳ್ಯ ಮುಖ್ಯ ಚಾನಲ್ ರಸ್ತೆ, ಇಲ್ಪೆ ತೋಪು, ವೆಂಕಟೇಶ್ವರ ಲೇಔಟ್, ಬಿಳೇಶಿವಾಲೆ ಮತ್ತು ಕಾಫಿ ಬೋರ್ಡ್ ಲೇಔಟ್​ನಲ್ಲಿ ಪವರ್ ಕಟ್ ಇರಲಿದೆ.

ಡಿಸೆಂಬರ್ 31ರಂದು ಪವರ್ ಕಟ್ ಇರುವ ಪ್ರದೇಶಗಳು: ಇಂದು ಮಾತ್ರವಲ್ಲದೆ ನಾಳೆ (ಶುಕ್ರವಾರ) ಕೂಡ ಬೆಂಗಳೂರಿನ ಈ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ. ಶುಕ್ರವಾರ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತವಾಗಲಿದೆ. ಆರ್‌ಬಿಐ ಲೇಔಟ್, ಯಾದವ್ ಫಾರ್ಮ್, ಸಿದ್ದನ ಲೇಔಟ್, ಕರೆಸಂದ್ರ ಬನಶಂಕರಿ 2ನೇ ಹಂತ, ಕಿಡ್ನಿ ಫೌಂಡೇಶನ್, ಆರ್‌ಕೆ ಲೇಔಟ್, ಜೆಪಿ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ದೊರೆಸಾನಿಪಾಳ್ಯ, ಚಿಕ್ಕಲಸಂದ್ರ, ಅಶ್ವಿನಿ ಲೇಔಟ್ ಮತ್ತು ಕೆಆರ್‌ಬಿ ಲೇಔಟ್​ನಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರು ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತ್ತಿಕೆರೆ, ಎಸ್‌ಬಿಎಂ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಬಂಡೆಪ್ಪ ಗಾರ್ಡನ್, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಎಲ್‌ಕೆಆರ್ ನಗರ, ಜಕ್ಕೂರು ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ, ಬಾಬಾ ನಗರ, ವಿನಾಯಕನಗರ ಮತ್ತು ದ್ವಾರಕಾ ನಗರ ಸೇರಿದಂತೆ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಮಲಾನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಟಿಆರ್ ನಗರ, ಕೆಇಬಿ ಕ್ವಾರ್ಟರ್ಸ್ ಬಳಿ, ಬಾಲಶಾಪಲ್ಲಿಯ ರಸ್ತೆ, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಆಂಧ್ರಹಳ್ಳಿ, ವಿದ್ಯಾಮಾನ ನಗರ, ಎಸ್‌ಎಲ್‌ವಿ ಕೈಗಾರಿಕಾ ಪ್ರದೇಶ, ಪೊಲೀಸ್ ಕ್ವಾರ್ಟರ್ ಹೊಸಹಳ್ಳಿ, ಎಸ್‌ಐಆರ್ ಎಂವಿ ಲೇಔಟ್ 1 ಬ್ಲಾಕ್, ಬಿಡಿಎ ಏರಿಯಾ ಬ್ಲಾಕ್ 1, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ, ಎಸ್ ಐಆರ್ ಎಂವಿ ಲೇಔಟ್ 5ನೇ ಬ್ಲಾಕ್, ಎಸ್ ಐಆರ್ ಎಂವಿ ಲೇಔಟ್ 3ನೇ ಬ್ಲಾಕ್, ಕೆಂಗೇರಿ, ಮೈಲಾಸಂದ್ರದ ಕೆಲವು ಭಾಗಗಳಲ್ಲಿ ನಾಳೆ ಕರೆಂಟ್ ಇರುವುದಿಲ್ಲ.

ಬೆಂಗಳೂರು ಪೂರ್ವ ವಲಯದಲ್ಲಿ ನಾಳೆ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಾಗವಾರ ಪಾಳ್ಯ ರಸ್ತೆ, ಎನ್‌ಬಿಸಿ ಲೇಔಟ್ ಮತ್ತು ಬನ್ನಪ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನಲ್ಲಿ ಇನ್ನೆರಡು ದಿನ ಪವರ್ ಕಟ್; ಈ ಏರಿಯಾಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

Bengaluru Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದೆಯಾ?

Follow us on

Related Stories

Most Read Stories

Click on your DTH Provider to Add TV9 Kannada