ಪೊಲೀಸ್​ ಠಾಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ; ಪೊಲೀಸ್​ ಅಧಿಕಾರಿ ಅಮಾನತು

| Updated By: Lakshmi Hegde

Updated on: Oct 10, 2021 | 1:07 PM

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಒತ್ತಾಯಿಸಿದ್ದಾರೆ.

ಪೊಲೀಸ್​ ಠಾಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ; ಪೊಲೀಸ್​ ಅಧಿಕಾರಿ ಅಮಾನತು
ಸಾಂದರ್ಭಿಕ ಚಿತ್ರ
Follow us on

ಅತ್ಯಾಚಾರಕ್ಕೆ ಒಳಗಾಗಿದ್ದ 55ವರ್ಷದ ಮಹಿಳೆಯೊಬ್ಬರು ಪೊಲೀಸ್​ ಠಾಣೆ (Police Station)ಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಅಜಂಗಢ್​​​ನಲ್ಲಿ ನಡೆದಿದೆ. ಪೊಲೀಸರು ಆರೋಪಿ ವಿರುದ್ಧ ಎಫ್​ಐಆರ್​ ದಾಖಲಿಸಲು ತುಂಬ ವಿಳಂಬ ಮಾಡಿದ್ದರಿಂದ ಬೇಸರಗೊಂಡ ಮಹಿಳೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ.  ಶನಿವಾರ ಆಕೆ ಪೊಲೀಸ್​ ಠಾಣೆಯಲ್ಲಿ ವಿಷ ಸೇವಿಸಿದ್ದು, ಅವರ ಬಳಿ ಯಾವುದೇ ಸೂಸೈಡ್​ ನೋಟ್​ ಕೂಡ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಅಜಂಗಢ್​​ ಠಾಣೆಯ ಹಿರಿಯ ಅಧಿಕಾರಿ (SHO)ಯನ್ನು ಅಮಾನತು ಮಾಡಲಾಗಿದ್ದು, ಕೂಡಲೇ ಅತ್ಯಾಚಾರ ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.  ಹಾಗೇ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಒತ್ತಾಯಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, ಜನಸಾಮಾನ್ಯರಿಗೆ ನಾವು ನ್ಯಾಯ ನೀಡುತ್ತೇವೆ ಎಂದು ಸದಾ ಪ್ರತಿಪಾದಿಸುವ ಬಿಜೆಪಿಗೆ ಈ ಘಟನೆ ಕಪಾಳ ಮೋಕ್ಷ ಮಾಡುವಂತಿದೆ. ಈ ಘಟನೆಯಲ್ಲಿ ಅತ್ಯಾಚಾರ ಆರೋಪಿಗಷ್ಟೇ ಅಲ್ಲದೆ, ಮಹಿಳೆಯ ಸಾವಿಗೆ ಕಾರಣರಾದ ಪೊಲೀಸ್​ ಸಿಬ್ಬಂದಿಯ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

‘ನನ್ನ ಪತ್ನಿಯ ಮೇಲೆ ಅನಿಲ್​ ಎಂಬಾತ ಅತ್ಯಾಚಾರ ಮಾಡಿದ್ದ. ಆ ಬಗ್ಗೆ ದೂರು ನೀಡಿದರೆ ಪೊಲೀಸರು ಎಫ್​ಐಆರ್​ ದಾಖಲಿಸಲಿಲ್ಲ. ಯಾವುದೇ ಕ್ರಮ ಕೈಗೊಳ್ಳಲೂ ಮುಂದಾಗಲಿಲ್ಲ.ಹಲವು ಬಾರಿ ನಾವು ಪೊಲೀಸ್​ ಠಾಣೆಗೆ ಬಂದಿದ್ದರೂ ಅವರು ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಆಕೆ ಪೊಲೀಸ್​ ಠಾಣೆಯಲ್ಲೇ ವಿಷ ಸೇವಿಸಿದಳು. ಆದರೆ ಪೊಲೀಸರು ಆಕೆ ಪೊಲೀಸ್​ ಸ್ಟೇಶನ್​​ನಲ್ಲಿ ಸತ್ತಳು ಎಂಬುದನ್ನೂ ಒಪ್ಪಿಕೊಳ್ಳುತ್ತಿಲ್ಲ’ ಎಂದು ಮಹಿಳೆ ಪತಿ ಹೇಳಿದ್ದಾಗಿ ಎಸ್​ಪಿ ಸುಧೀರ್​ ಕುಮಾರ್​ ತಿಳಿಸಿದ್ದಾರೆ. ಇನ್ನು ಠಾಣಾಧಿಕಾರಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದಿದ್ದಾರೆ. ಹಾಗೇ, ಮಹಿಳೆ ಪೊಲೀಸ್​ ಠಾಣೆಯಲ್ಲಿ ವಿಷ ಕುಡಿದಿದ್ದಳು. ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಸಾವನ್ನಪ್ಪಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: WhatsApp: ನಿಮ್ಮ ಮೊಬೈಲ್​ನಲ್ಲಿ ವಾಟ್ಸ್​ಆ್ಯಪ್ ಜೊತೆ ಈ ಆ್ಯಪ್ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

ಕಾಶ್ಮೀರದಲ್ಲಿ ಆತಂಕದ ವಾತಾವರಣ: ಕಣಿವೆ ತೊರೆಯುತ್ತಿದ್ದಾರೆ ಕಾಶ್ಮೀರಿ ಪಂಡಿತ್, ಸಿಖ್ ಸಮುದಾಯದ ಸರ್ಕಾರಿ ಸಿಬ್ಬಂದಿ