ಕಾಶ್ಮೀರದಲ್ಲಿ ಆತಂಕದ ವಾತಾವರಣ: ಕಣಿವೆ ತೊರೆಯುತ್ತಿದ್ದಾರೆ ಕಾಶ್ಮೀರಿ ಪಂಡಿತ್, ಸಿಖ್ ಸಮುದಾಯದ ಸರ್ಕಾರಿ ಸಿಬ್ಬಂದಿ

TV9 Digital Desk

| Edited By: Rashmi Kallakatta

Updated on:Oct 10, 2021 | 12:04 PM

Kashmir Valley: 1990 ರಲ್ಲಿಯೂ ಕಾಶ್ಮೀರ ತೊರೆಯದ ಕಾಶ್ಮೀರಿ ಪಂಡಿತರು ಕಾದು ನೋಡುವ ಕ್ರಮವನ್ನು ಅನುಸರಿಸುತ್ತಿದ್ದಾರೆ. ಕಳೆದ ವಾರದಿಂದ ಹೆಚ್ಚಿದ ಭಯದ ಭಾವನೆ ಅವರನ್ನು ಬಹಳ ಎಚ್ಚರಿಕೆಯಿಂದ ಇರುವಂತೆ ಮಾಡಿದೆ.

ಕಾಶ್ಮೀರದಲ್ಲಿ ಆತಂಕದ ವಾತಾವರಣ: ಕಣಿವೆ ತೊರೆಯುತ್ತಿದ್ದಾರೆ ಕಾಶ್ಮೀರಿ ಪಂಡಿತ್, ಸಿಖ್ ಸಮುದಾಯದ ಸರ್ಕಾರಿ ಸಿಬ್ಬಂದಿ
ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತರಿಂದ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ
Follow us

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ (Kashmir Valley )ವಾಸಿಸುತ್ತಿರುವ ಅಲ್ಪಸಂಖ್ಯಾತರಲ್ಲಿ ಆತಂಕ ಮತ್ತು ಭಯದ ಭಾವನೆ ಆವರಿಸಿದೆ. ಕಾಶ್ಮೀರಿ ಪಂಡಿತ್ (Kashimiri Pandit) ಮತ್ತು ಸಿಖ್ ಸಮುದಾಯಕ್ಕೆ ( Sikh communities) ಸೇರಿದ ಹಲವಾರು ಸರ್ಕಾರಿ ಉದ್ಯೋಗಿಗಳು ಮತ್ತು ಶಿಕ್ಷಕರು ಜಮ್ಮುವಿಗೆ ಮರಳಿದ್ದಾರೆ. ಕೆಲವರು ವರ್ಗಾವಣೆಯನ್ನು ಬಯಸುತ್ತಾರೆ ಮತ್ತು ಅನೇಕರು ಕೆಲಸದಿಂದ ದೂರ ಉಳಿದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಶ್ರೀನಗರದ ಶಿಕ್ಷಣ ಇಲಾಖೆಯ ಕಿರಿಯ ಸಹಾಯಕರಾದ ಸುಶೀಲ್ ಶುಕ್ರವಾರ ಮುಂಜಾನೆ ಜಮ್ಮುವಿಗೆ ಮರಳಿದರು. “ಹಮ್ ಕಾಶ್ಮೀರ್ ಸೆ ಬೈಕ್ ಪರ್ ಭಾಗೇ ಹೈ (ನಾವು ಕಾಶ್ಮೀರದಿಂದ ಬೈಕಿನಲ್ಲಿ ಓಡಿ ಬಂದೆವು)” ಎಂದು ಅವರು ಹೇಳಿದರು. ಸಿಖ್ ಮಹಿಳಾ ಪ್ರಾಂಶುಪಾಲರು ಮತ್ತು ಶ್ರೀನಗರದಲ್ಲಿ ಕಾಶ್ಮೀರಿ ಹಿಂದೂ ಶಿಕ್ಷಕರ “ಉದ್ದೇಶಿತ ಹತ್ಯೆ” ಅವರನ್ನು ಹತಾಶರನ್ನಾಗಿಸಿದೆ ಮತ್ತು ಎಲ್ಲರನ್ನೂ ಅನುಮಾನಿಸುವಂತೆ ಮಾಡಿದೆ. “ಕಾಶ್ಮೀರ ಮೇ ಸಡಕ್ ಪರ್ ಚಲ್ತೇ ಹುಯೇ ಹಮೇ ಏಕ್ ಹಿ ಖಯಾಲ್ ಆತಾ ರಹ ಕೇ ಜೋ ಕೋಯಿ ಭೀ ಹುಮರಿ ತರಫ್ ದೇಖ್ ರಹಾ ಹೈ, ವೋ ಹಮೇ ಗೋಲಿ ಮಾರ್ ದೇಗಾ (ಕಾಶ್ಮೀರದ ರಸ್ತೆಗಳ ಉದ್ದಕ್ಕೂ ನಮ್ಮನ್ನು ನೋಡುವವರನ್ನು ನಾವು ಅವಮಾನಿಸುವಂತಾಗಿದೆ ಆತ ನಮ್ಮ ಮೇಲೆ ಗುಂಡು ಹಾರಿಸುತ್ತಾನೆ ಎಂಬ ಯೋಚನೆ ಬರುತ್ತದೆ) ಅಂತಾರೆ ಸುಶೀಲ್.

ಜಮ್ಮುವಿಗೆ ಹಿಂದಿರುಗುವವರಿಗೆ ಸುರಕ್ಷತೆಯು ಅತ್ಯಂತ ಮುಖ್ಯವಾದ ಕಾಳಜಿಯಾಗಿದೆ. 1990 ರಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಬೆದರಿಕೆಗಳ ಬೆನ್ನಲ್ಲೇ ಸುಮಾರು ಒಂದು ಲಕ್ಷದಷ್ಟು ಪಂಡಿತರು ಕಾಶ್ಮೀರದಿಂದ ಪಲಾಯನ ಮಾಡಿದಾಗ ಅದರಲ್ಲಿ ಸಿದ್ಧಾರ್ಥ್ ರೈನಾ (ಹೆಸರು ಬದಲಾಗಿದೆ)ಅವರ ಕುಟುಂಬವೂ ಇತ್ತು. ರೈನಾಗೆ ಆಗ ಎರಡು ವರ್ಷ. ಎರಡೂವರೆ ದಶಕಗಳ ನಂತರ ಅಂದರೆ 2015 ರಲ್ಲಿ ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಜೆ ಆಂಡ್ ಕೆ ಶಿಕ್ಷಣ ಇಲಾಖೆಯಲ್ಲಿ ನೌಕರಿ ಪಡೆದು ಶ್ರೀನಗರಕ್ಕೆ ಮರಳಿದ್ದರು.

ಶುಕ್ರವಾರ ಸಿದ್ಧಾರ್ಥ್ ತನ್ನ ಹೆಂಡತಿಯೊಂದಿಗೆ ಅನಂತನಾಗ್‌ ತೊರೆದು ಜಮ್ಮುವಿಗೆ ಬಂದಿದ್ದು “ನಿದ್ದೆಯಿಲ್ಲದ ಮತ್ತು ಭಯಭೀತ ರಾತ್ರಿ”ಯನ್ನು ವಿವರಿಸಿದ್ದಾರೆ. “ನಾನು ಇಡೀ ರಾತ್ರಿ ಮಲಗಲು ಸಾಧ್ಯವಾಗಲಿಲ್ಲ ಮತ್ತು ಮರುದಿನ ಬೆಳಿಗ್ಗೆ ಜಮ್ಮುವಿಗೆ ಹೊರಟೆ. ಸಾಮರಸ್ಯ ಮತ್ತು ಶಾಂತಿಯ ಬಗ್ಗೆ  ಮಾತುಗಳಿವೆ, ಆದರೆ ಯಾವುದೇ ಭದ್ರತೆಯನ್ನು ಖಾತರಿಪಡಿಸಲಾಗಿಲ್ಲ. ಗುರುತಿನ ಚೀಟಿಗಳನ್ನು ನೋಡಿದ ನಂತರ ಅವರು ಶಿಕ್ಷಕರ ಬಳಿ ಹೋಗಿ ಅವರನ್ನು ಕೊಲ್ಲಲು ಸಾಧ್ಯವಾದರೆ, ನನ್ನಂತಹ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಗೆ ಯಾರು ಭದ್ರತೆಯನ್ನು ಖಾತರಿಪಡಿಸುತ್ತಾರೆ “ಎಂದು ಜಮ್ಮುವಿನಿಂದ ಇಂಡಿಯನ್ ಎಕ್ಸ್​​ಪ್ರೆಸ್ ಜತೆ ದೂರವಾಣಿ ಮೂಲಕ ಮಾತನಾಡಿದ ಸಿದ್ಧಾರ್ಥ್ ಕೇಳುತ್ತಾರೆ.

ತನ್ನ ಮುಸ್ಲಿಂ ಸಹೋದ್ಯೋಗಿಗಳು ಸಹಾಯ ಮಾಡುತ್ತಿದ್ದಾರೆ. ಆದರೆ ಇಂತಹ ಸಂದರ್ಭಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳು ಸುರಕ್ಷತೆಯನ್ನು ಅನುಭವಿಸಬಹುದೇ ಎಂದು ಸರ್ಕಾರ ಯೋಚಿಸಬೇಕು.”ಅಲ್ಪಸಂಖ್ಯಾತ ಸಮುದಾಯದ ಶಿಕ್ಷಕರನ್ನು ಕಣಿವೆಯ ಗುಡ್ಡಗಾಡು ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಜಮ್ಮುವಿಗೆ ಮರಳುವುದಲ್ಲದೆ ಅವರಿಗೇನು ಮಾಡಲಾಗುತ್ತದೆ? ಎಂದು ಸುಶೀಲ್ ಪ್ರಶ್ನಿಸಿದ್ದಾರೆ.

ಪಿಎಂ ಪ್ಯಾಕೇಜ್ ಅಡಿಯಲ್ಲಿ ಕಣಿವೆಯಲ್ಲಿ ನೇಮಕಗೊಂಡ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳ ಯಾವುದೇ ಹಿಂದಕ್ಕೆ ಮರಳುವ ವಲಸೆ (reverse migration) ಅನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿರಾಕರಿಸಿದೆ. “ನಾವು ಈ ವಿಷಯವನ್ನು ಕಾಶ್ಮೀರ ವಿಭಾಗೀಯ ಆಯುಕ್ತರೊಂದಿಗೆ ಚರ್ಚಿಸಿ ಕಣಿವೆಯ ಎಲ್ಲಾ ಡೆಪ್ಯುಟಿ ಕಮೀಷನರ್‌ಗಳಿಗೆ ನಿರ್ದೇಶನಗಳನ್ನು ಕೋರಿ ತಮ್ಮ ತಮ್ಮ ಜಿಲ್ಲೆಗಳಲ್ಲಿ ಸುರಕ್ಷಿತ ಸರ್ಕಾರಿ ವಸತಿಗಳಲ್ಲಿ ವಾಸಿಸುವ ಉದ್ಯೋಗಿಗಳಿಗೆ ಹೆಚ್ಚಿನ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ” ಎಂದು ಜಮ್ಮು ಮತ್ತು ಕಾಶ್ಮೀರ ಪರಿಹಾರ ಮತ್ತು ಪುನರ್ವಸತಿ ಆಯುಕ್ತ ಅಶೋಕ್ ಪಂಡಿತ ಹೇಳಿದರು.

ಆದರೆ ವಾಸ್ತವ ಸ್ಥಿತಿಗತಿ ನೋಡಿದರೆ ಅನೇಕರು ಮರಳುತ್ತಿದ್ದಾರೆ ಎಂದು ಸೂಚಿಸುತ್ತದೆ. ಜಮ್ಮುವಿನ ನಗ್ರೋಟಾ ಬಳಿಯ ವಲಸಿಗ ಕಾಶ್ಮೀರಿ ಪಂಡಿತರು ವಾಸಿಸುತ್ತಿದ್ದ ಜಗ್ತಿ ಟೌನ್‌ಶಿಪ್‌ನಲ್ಲಿನ ದಿನಸಿ ಅಂಗಡಿ ಮಾಲೀಕರಾದ ರಮೇಶ್ ಕುಮಾರ್, ಪಿಎಂ ಪ್ಯಾಕೇಜ್ ಅಡಿಯಲ್ಲಿ ಕಾಶ್ಮೀರದಲ್ಲಿ ನಿಯೋಜಿಸಲಾದ ಅನೇಕ ಉದ್ಯೋಗಿಗಳು ಮರಳಿದ್ದಾರೆ ಎಂದು ಹೇಳಿದರು. “ಅವರು 2-3 ತಿಂಗಳ ನಂತರ ಶಾಪಿಂಗ್‌ಗೆ ಬಂದಿದ್ದರಿಂದ ನಾನು ಇಂದು ಕನಿಷ್ಠ 30 ಜನರನ್ನು ಭೇಟಿ ಮಾಡಿದೆ. ಅವರು ಕಣಿವೆಯಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಿದರು. ಕೆಲವರು ಮಧ್ಯರಾತ್ರಿ 12 ರ ಸುಮಾರಿಗೆ ಹೊರಟಿದ್ದಾರೆ ಎಂದು ಹೇಳಿದರು.

Kashmir

ಮನೆ ಖಾಲಿ ಮಾಡಿ ಜಗ್ತಿ ವಲಸೆ ಶಿಬಿರಕ್ಕೆ ಬಂದ ಕಾಶ್ಮೀರಿ ಪಂಡಿತರ ಕುಟುಂಬ (ಪಿಟಿಐ ಚಿತ್ರ)

“ಜೋ ಹೆಲ್ತಿ ಲಡ್ಕೆ ತೇ ನಾ, ವೋ ಭೀ ಆಜ್ ಬೆಚಾರೆ ಹಾರ್ ಗಯೇ (ಆರೋಗ್ಯವಂತ ಪುರುಷರು ಕೂಡ ಧೈರ್ಯ ಕಳೆದುಕೊಂಡರು)” ಎಂದು ಅಂಗಡಿ ಮಾಲೀಕ ರಮೇಶ್ ಕುಮಾರ್ ಹೇಳಿದರು. ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುತ್ತಿದ್ದಾಗಲೇ ಎರಡು ಕುಟುಂಬಗಳು ಕಣಿವೆಯಿಂದ ಪ್ರತ್ಯೇಕ ವಾಹನಗಳಲ್ಲಿ ಬಂದವು. ಅವರು ಮಾತನಾಡಲು ಹಿಂಜರಿದರು. ಕಣಿವೆಯಲ್ಲಿ ತಮ್ಮ ಕರ್ತವ್ಯಗಳಿಗೆ ಮರಳಲು ಸರ್ಕಾರದ ಒತ್ತಡಕ್ಕೆ ಅವರು ಹೆದರುತ್ತಾರೆ ಎಂದು ನೆರೆಹೊರೆಯವರು ವಿವರಿಸಿದ್ದಾರೆ.

ಪುಲ್ವಾಮಾದ ಹಣಕಾಸು ಇಲಾಖೆಯ ಉದ್ಯೋಗಿ ಶನಿವಾರ ಮಧ್ಯಾಹ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮರಳಿದರು. “ನಾನು ಹಿಂತಿರುಗಲು ಇಷ್ಟವಿರಲಿಲ್ಲ, ಆದರೆ ಜಮ್ಮುವಿನಲ್ಲಿರುವ ನನ್ನ ಹೆತ್ತವರು ಪರಿಸ್ಥಿತಿ ಸಾಮಾನ್ಯವಾಗುವವರೆಗೆ ನಾವು ಕೆಲವು ದಿನಗಳವರೆಗೆ ಬರಬೇಕು ಎಂದು ಒತ್ತಾಯಿಸಿದರು” ಎಂದು ಅವರು ಹೆಸರು ಬಹಿರಂಗಪಡಿಸಲು ಒಪ್ಪಲಿಲ್ಲ.

ಇನ್ನೊಬ್ಬ ವಲಸಿಗ ಕಾಶ್ಮೀರಿ ಪಂಡಿತ್ ತನ್ನ ಮಗ ಮತ್ತು ಆತನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳು ಕುಪ್ವಾರವನ್ನು ತೊರೆದಿದ್ದಾರೆ ಎಂದು ಹೇಳಿದರು. “ಅವರು ಸಂಜೆಯ ವೇಳೆಗೆ ಇಲ್ಲಿಗೆ ತಲುಪುತ್ತಾರೆ. ಈಗಿನ ಸನ್ನಿವೇಶದಲ್ಲಿ ವಿಶೇಷವಾಗಿ ಸುರಕ್ಷಿತವಾಗಿರುವ ಬಾಡಿಗೆ ಸ್ಥಳದಲ್ಲಿರುವುದೇ ಸರಿ ಎಂದು ಅವರು ಹೇಳಿದ್ದಾರೆ. 1990 ರಲ್ಲಿಯೂ ಕಾಶ್ಮೀರ ತೊರೆಯದ ಕಾಶ್ಮೀರಿ ಪಂಡಿತರು ಕಾದು ನೋಡುವ ಕ್ರಮವನ್ನು ಅನುಸರಿಸುತ್ತಿದ್ದಾರೆ. ಕಳೆದ ವಾರದಿಂದ ಹೆಚ್ಚಿದ ಭಯದ ಭಾವನೆ ಅವರನ್ನು ಬಹಳ ಎಚ್ಚರಿಕೆಯಿಂದ ಇರುವಂತೆ ಮಾಡಿದೆ. “1990ನಂತೆ ಅಲ್ಲ ಹೆಚ್ಚಿನ ಭಯವಿದೆ ಮತ್ತು ನನ್ನ ಸುತ್ತಲಿನ ಎಲ್ಲರನ್ನು ನಾನು ಅನುಮಾನಿಸುತ್ತೇನೆ. ಪಿಸ್ತೂಲ್‌ಗಳಿಂದ ಕೊಲ್ಲುವ ಕೃತ್ಯಗಳು ಹಿಂದಿನ ಕಾಲದಂತೆ ಶಸ್ತ್ರಾಸ್ತ್ರ ತರಬೇತಿಯನ್ನು ಸಹ ಕೈಗೊಳ್ಳುತ್ತಿಲ್ಲ ಎಂದು ತೋರುತ್ತದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಹೊರಗಿನವರ ವಿರುದ್ಧ ಅಸಮಾಧಾನವು ಹೆಚ್ಚಾಗಲು ಆರಂಭವಾಯಿತು ಮತ್ತು ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ, “ಎಂದು ಶ್ರೀನಗರದ ಉನ್ನತ ಸ್ಥಳವೊಂದರಲ್ಲಿ 54 ವರ್ಷದ ಅಂಗಡಿ ಮಾಲೀಕ ರೋಹಿತ್ ಪಂಡಿತ (ಹೆಸರು ಬದಲಿಸಲಾಗಿದೆ) ಹೇಳಿದರು.

ನಾವು ತೊರೆಯುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದ ಪಂಡಿತ. “ನಾನು ಮೊದಲು 4-5 ಅಂಗಡಿಗಳನ್ನು ಹೊಂದಿದ್ದೆ ಮತ್ತು ಈಗ ಒಂದು ಅಂಗಡಿಯನ್ನು ನಡೆಸುತ್ತಿದ್ದೆ. ನಾನು ಇಷ್ಟು ವರ್ಷ ಇದ್ದೆ ಮತ್ತು ಇರುತ್ತೇನೆ. ವಿಭಜನೆಯ ಎರಡೂ ಬದಿಗಳಲ್ಲಿ ಕೊಲೆಗಳು ನಡೆಯುತ್ತಿವೆ, ಆದರೆ ಸರ್ಕಾರ ಮೌನವಾಗಿದೆ”ಎಂದು ಅವರು ಹೇಳಿದರು.

1990 ರ ದಶಕದಲ್ಲಿ ಉಳಿದುಕೊಂಡಿದ್ದ ಶ್ರೀನಗರದ ಸಿಖ್ ಉದ್ಯಮಿ ಕೆಎಲ್ ಸಿಂಗ್ (ಹೆಸರು ಬದಲಿಸಲಾಗಿದೆ), ಸಿಖ್ಖರು ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಹೆದರುತ್ತಿದ್ದಾರೆ ಎಂದು ಹೇಳಿದರು. “ನಮ್ಮ ಮನಸ್ಸಿನಲ್ಲಿ ಭಯ ಹುಟ್ಟಿಕೊಂಡಿದೆ. ಮೊದಲ ಬಾರಿಗೆ, ನಮ್ಮ ಸಮುದಾಯದ ಮಹಿಳೆ ಖಾಲಿ ಜಾಗದಲ್ಲಿ ಕೊಲ್ಲಲ್ಪಟ್ಟರು. ಅವಳು ಮುಸ್ಲಿಂ ಹುಡುಗಿಯ ಶಿಕ್ಷಣಕ್ಕೆ ಸಹಾಯ ಮಾಡುವ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಳು ಆದರೆ ಹತ್ಯೆಗೀಡಾದಳು . ಇದು ವಿಪರೀತವಾದ ಕೃತ್ಯವಾಗಿದ್ದು, ಇದನ್ನು ನಾವು ಸಹಿಸುವುದಿಲ್ಲ ಎಂದು ಶ್ರೀನಗರದ ಗುರುದ್ವಾರ ಪ್ರಬಂಧಕ್ ಸಮಿತಿಯ ಸದಸ್ಯರೂ ಆಗಿರುವ ಸಿಂಗ್ ಹೇಳಿದ್ದಾರೆ.

“ಕಾಶ್ಮೀರದ ದೂರದ ಪ್ರದೇಶಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುವ ನನ್ನ ಸೊಸೆಯರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. ಅವರು ಸುರಕ್ಷಿತ ಪೋಸ್ಟಿಂಗ್‌ಗಳನ್ನು ಕೇಳುತ್ತಿದ್ದಾರೆ. ಆಗಸ್ಟ್ 15 ರಂದು ಧ್ವಜಗಳನ್ನು ಹಾರಿಸುವ ಇತ್ತೀಚಿನ ನಿರ್ದೇಶನವು ಮುಸ್ಲಿಮರು ಸೇರಿದಂತೆ ಎಲ್ಲರಿಗೂ ಮತ್ತು ಸಿಖ್ಖರಿಗೆ ಅಥವಾ ಇತರ ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಕರಿಗೆ ಮಾತ್ರವಾಗಿರಲಿಲ್ಲ. ಆದರೆ ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಲಾಗಿದೆ. ನಾನು ಇಷ್ಟು ವರ್ಷಗಳಲ್ಲಿ ಈ ಮಟ್ಟದ ಭಯ ಮತ್ತು ಮೌನವನ್ನು ನೋಡಿಲ್ಲ. ಅಲ್ಪಸಂಖ್ಯಾತರ ಹತ್ಯೆಗಳನ್ನು ಎಲ್ಲ ಸಮುದಾಯದವರು ಬಹಿರಂಗವಾಗಿ ಖಂಡಿಸಬೇಕಾಗಿದೆ”ಎಂದು ಅವರು ಹೇಳಿದರು.

ಸಿಖ್ ನಾಯಕರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಮುದಾಯದ ಸದಸ್ಯರ ಹತ್ಯೆಯಿಂದ ಸಿಖ್ ಸಮುದಾಯವನ್ನು ತಡೆಯಲಾಗುವುದಿಲ್ಲ ಎಂದು ಹೇಳಿದರು. “ಅವರು (ಕೊಲೆಗಾರರು) ನಾಲ್ಕು ಸಿಖ್ಖರು ಅಥವಾ ಹತ್ತು ಸಿಖ್ಖರನ್ನು ಕೊಲ್ಲುವ ಮೂಲಕ, ಸಿಖ್ಖರು ಕಾಶ್ಮೀರವನ್ನು ತೊರೆಯುತ್ತಾರೆ ಎಂದು ಯೋಚಿಸುತ್ತಿರಬಹುದು” ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಲ್ಪಸಂಖ್ಯಾತ ವ್ಯವಹಾರಗಳ ಕಾರ್ಯದರ್ಶಿ ಮತ್ತು ಪ್ರಮುಖ ಸಿಖ್ ನಾಯಕ ಜೋಗಿಂದರ್ ಸಿಂಗ್ ಶಾನ್ ಹೇಳಿದರು. “ಈ ಕೊಲೆಗಳಿಂದ ನಾವು ಕಾಶ್ಮೀರವನ್ನು ಬಿಡಲು ಹೋಗುವುದಿಲ್ಲ. ಇದು ನಮ್ಮ ಕಾಶ್ಮೀರ. 1947 ರಲ್ಲಿ, 33,000 ಸಿಖ್ಖರು ಅದಕ್ಕಾಗಿ ಪ್ರಾಣ ನೀಡಿದ್ದಾರೆ ಎಂದು ಹೇಳಿದರು.

ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರುತಿಸಿ ಕೊಲ್ಲುವುದು ತಮಗೆ ಆಘಾತ ತಂದಿದೆ ಎಂದು ಸಿಖ್ ನಾಯಕರು ಹೇಳಿದ್ದಾರೆ . “ನಮ್ಮ ಅಳಲು ಏನೆಂದರೆ (ಮುಸ್ಲಿಂ ಸಮುದಾಯದೊಂದಿಗೆ) ನಾವು ಶವ ಸಂಸ್ಕಾರಕ್ಕಾಗಿ ಮೆರವಣಿಗೆಯನ್ನು ತೆಗೆದುಕೊಂಡು (ಸಿವಿಲ್) ಸೆಕ್ರೆಟರಿಯೇಟ್ ಹೊರಗೆ ಪ್ರತಿಭಟನೆ ಮಾಡಿದಾಗ, ಅವರು ನಮ್ಮೊಂದಿಗೆ ಸೇರಲಿಲ್ಲ. ಸರ್ಕಾರದೊಂದಿಗಿನ ನಮ್ಮ ಅಳಲು ಏನೆಂದರೆ ಸಮುದಾಯದ ಇಬ್ಬರು ಅಥವಾ ಮೂವರು ಸದಸ್ಯರು ಈಗಾಗಲೇ ಹತ್ಯೆಹಗೀಡಾಗಿದ್ದರೂ ಅವರು ಅಲ್ಪಸಂಖ್ಯಾತ ಉದ್ಯೋಗಿಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ “ಎಂದು ಮತ್ತೊಬ್ಬ ಸಿಖ್ ನಾಯಕ ನವತೇಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Analysis: ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆ: ಕಾಶ್ಮೀರದ ಸ್ಥಿರತೆಗೆ ಧಕ್ಕೆಯಾದೀತು, ಆದರೆ 90ರ ದಶಕದಷ್ಟು ಪರಿಸ್ಥಿತಿ ಹದಗೆಡದು

ತಾಜಾ ಸುದ್ದಿ

Related Stories

Click on your DTH Provider to Add TV9 Kannada