Coronavirus cases in India ಭಾರತದಲ್ಲಿ 18,166 ಹೊಸ ಕೊವಿಡ್ ಪ್ರಕರಣ ಪತ್ತೆ, 24 ಮಂದಿ ಸಾವು

TV9 Digital Desk

| Edited By: Rashmi Kallakatta

Updated on: Oct 10, 2021 | 10:44 AM

Covid 19: ದೇಶದಲ್ಲಿ ಒಂದೇ ದಿನ 18,166 ಕೊವಿಡ್ -19 ಸೋಂಕುಗಳ ಏರಿಕೆ ಕಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,30,971 ಕ್ಕೆ ಇಳಿದಿದೆ. ಇದೇ ಅವವಧಿಯಲ್ಲಿ 214 ಮಂದಿ ಸಾವಿಗೀಡಾಗಿದ್ದುಸಾವಿನ ಸಂಖ್ಯೆ 4,50,589ಕ್ಕೆ ತಲುಪಿದೆ.

Coronavirus cases in India ಭಾರತದಲ್ಲಿ 18,166 ಹೊಸ ಕೊವಿಡ್ ಪ್ರಕರಣ ಪತ್ತೆ, 24 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us

ದೆಹಲಿ: ಭಾರತದಲ್ಲಿ ಒಟ್ಟು ಕೊವಿಡ್ -19 (Covid-19) ಲಸಿಕೆ ವಿತರಣೆಯು ಶನಿವಾರ 94.62 ಕೋಟಿ ದಾಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಹೇಳಿದೆ. ಸಚಿವಾಲಯದ ಪ್ರಕಾರ ಶನಿವಾರ ಸಂಜೆ 7 ಗಂಟೆಯವರೆಗೆ 60 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 60,66,412 ಲಸಿಕೆ ಡೋಸ್‌ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ ಅದರಲ್ಲಿ 30,66,540 ಮೊದಲ ಡೋಸ್‌ಗಳು ಮತ್ತು 29,99,872 ಎರಡನೇ ಡೋಸ್‌ಗಳು ಸೇರಿವೆ. ಇಲ್ಲಿಯವರೆಗೆ 94,70,10,175 ಲಸಿಕೆ ಪ್ರಮಾಣವನ್ನು ದೇಶದ ಜನಸಂಖ್ಯೆಗೆ ನೀಡಲಾಗಿದೆ.  ಏತನ್ಮಧ್ಯೆ, ದೇಶದಲ್ಲಿ ಒಂದೇ ದಿನ 18,166 ಕೊವಿಡ್ -19 ಸೋಂಕುಗಳ ಏರಿಕೆ ಕಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,30,971 ಕ್ಕೆ ಇಳಿದಿದೆ. ಇದೇ ಅವವಧಿಯಲ್ಲಿ 214 ಮಂದಿ ಸಾವಿಗೀಡಾಗಿದ್ದುಸಾವಿನ ಸಂಖ್ಯೆ 4,50,589ಕ್ಕೆ ತಲುಪಿದೆ. 23,624 ಮಂದಿ ಚೇತರಿಸಿದ್ದು ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,32,71,915 ಆಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಶಾಲೆಗಳಲ್ಲಿ ಕೊವಿಡ್ -19 ಪ್ರೋಟೋಕಾಲ್‌ಗಳ ಪಾಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಉತ್ತರಾಖಂಡ ಸರ್ಕಾರ ಚಮೋಲಿ ಜಿಲ್ಲೆಯ ಗೋಪೇಶ್ವರ ಪ್ರದೇಶದ ವಿದ್ಯಾರ್ಥಿಯು ಕೊರೊನಾವೈರಸ್ ಧನಾತ್ಮಕ ಪರೀಕ್ಷೆ ಮಾಡಿದ ನಂತರ ರಾಜ್ಯದ ಶಾಲೆಗಳಲ್ಲಿ ಕೊವಿಡ್ -19 ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಉತ್ತರಾಖಂಡ ಸರ್ಕಾರವು ಶನಿವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಇದುವರೆಗೆ 166 ಸಕ್ರಿಯ ಪ್ರಕರಣಗಳು ಸೇರಿದಂತೆ 3,43,645 ಕೊವಿಡ್ -19 ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಇದುವರೆಗೆ ರಾಜ್ಯದಲ್ಲಿ 1,06,82,064 ಕೊವಿಡ್ -19 ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ರಾಜ್ಯದಲ್ಲಿ ವೈರಸ್‌ನಿಂದ 7,396 ಜನರು ಸಾವನ್ನಪ್ಪಿದ್ದಾರೆ.

ದೆಹಲಿಯಲ್ಲಿ 30 ಹೊಸ ಕೊವಿಡ್ -19 ಪ್ರಕರಣಧನಾತ್ಮಕ ದರ ಶೇ 0.05 ದೆಹಲಿಯಲ್ಲಿ ಶನಿವಾರ 30 ಹೊಸ ಕೊವಿಡ್ -19 ಪ್ರಕರಣಗಳನ್ನು ದಾಖಲಾಗಿದ್ದು , ಸಕಾರಾತ್ಮಕತೆಯ ಪ್ರಮಾಣವು ಶೇಕಡಾ 0.05 ರಷ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಸಾವುಗಳು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.

ಕೇರಳದಲ್ಲಿ ಕೊವಿಡ್ ಪ್ರಕರಣದಲ್ಲಿ ಇಳಿಕೆ ಕೇರಳವು ಶನಿವಾರ 9470 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಗ್ಯ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 101 ಹೊಸ ಸಾವುಗಳೊಂದಿಗೆ, ಸಾವಿನ ಸಂಖ್ಯೆ 26,173 ಕ್ಕೆ ಏರಿದೆ. ಪರೀಕ್ಷಾ ಸಕಾರಾತ್ಮಕತೆಯ ದರವು 10.72 ಶೇಕಡಾ ದಾಖಲಾಗಿದೆ. ಧನಾತ್ಮಕ ಪ್ರಕರಣಗಳ ಜಿಲ್ಲಾವಾರು ಅಂಕಿಅಂಶಗಳು: ಎರ್ನಾಕುಲಂ -1337, ತಿರುವನಂತಪುರಂ -1261, ತ್ರಿಶೂರ್ -930, ಕೋಯಿಕ್ಕೋಡ್ -921, ಕೊಲ್ಲಂ -696, ಮಲಪ್ಪುರಂ -660, ಪಾಲಕ್ಕಾಡ್ -631, ಕೋಟ್ಟಯಂ -569, ಕಣ್ಣೂರು -561, ಇಡುಕ್ಕಿ -522, ಪತ್ತನಂತಿಟ್ಟ -447, ಆಲಪ್ಪುಳ -432, ವಯನಾಡ್ -318 ಮತ್ತು ಕಾಸರಗೋಡು -158.

ಇದನ್ನೂ ಓದಿಕೊವಿಡ್ ಪರಿಹಾರ ಪಡೆಯಲು ಸ್ವಂತ ಡೆತ್ ಸರ್ಟಿಫಿಕೇಟ್ ನೀಡಿದ ಭೂಪ; ಪೊಲೀಸರಿಂದ ಪಾರಾಗಲೂ ಯೋಜನೆ ರೂಪಿಸಿದ್ದ

ತಾಜಾ ಸುದ್ದಿ

Related Stories

Click on your DTH Provider to Add TV9 Kannada