ಕೊವಿಡ್ ಪರಿಹಾರ ಪಡೆಯಲು ಸ್ವಂತ ಡೆತ್ ಸರ್ಟಿಫಿಕೇಟ್ ನೀಡಿದ ಭೂಪ; ಪೊಲೀಸರಿಂದ ಪಾರಾಗಲೂ ಯೋಜನೆ ರೂಪಿಸಿದ್ದ
ಸ್ಟಾವೆಲಿ ಆತನ ಸಹಚರ 53 ವರ್ಷದ ಡೇವಿಡ್ ಆಂಡ್ರ್ಯೂ ಬಟ್ಜಿಗರ್ ಜತೆಗೂಡಿ ಅಸಂಘಟಿತ ವ್ಯಾಪಾರ ವಿಭಾಗದಡಿ ಆರ್ಥಿಕ ಪರಿಹಾರಕ್ಕಾಗಿ ತಾವು ನಡೆಸುತ್ತಿದ್ದ ಮೂರು ರೆಸ್ಟೋರೆಂಟ್‌ಗಳು ನಷ್ಟಕ್ಕೊಳಗಾದವು ಎಂದು ಸುಳ್ಳು ಅರ್ಜಿ ಸಲ್ಲಿಸಿದ್ದರು. ವಾಸ್ತವವಾಗಿ ಮೂರೂ ರೆಸ್ಟೋರೆಂಟ್‌ಗಳು ಕೊವಿಡ್ ಸೋಂಕು ಹರಡುವ ಮುನ್ನವೇ ಮುಚ್ಚಿದ್ದವು.
ಕೊವಿಡ್ ಸೋಂಕಿನಿಂದ ಕಿರು ಉದ್ಯಮಗಳಿಗೆ ಆದ ನಷ್ಟವನ್ನು ಕಟ್ಟಿಕೊಡಲು ಸರ್ಕಾರ ಹಮ್ಮಿಕೊಂಡಿದ್ದ ಯೋಜನೆಯೊಂದನ್ನು ಪಡೆದುಕೊಳ್ಳಲು ಭೂಪನೋರ್ವ ಸ್ವತಃ ತನ್ನ ಮರಣ ಮರಣ ಪತ್ರವನ್ನೇ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದ ಡೇವಿಡ್ ಸ್ಟಾವೆಲಿ ಎಂಬಾತನೇ ಸ್ವತಃ ತಾನೇ ಮೃತಪಟ್ಟಿದ್ದೇನೆಂದು ತನ್ನ ಡೆತ್ ಸರ್ಟಿಫಿಕೇಟ್ ಸಲ್ಲಿಸಿದ ಮಹಾನುಭಾವ. ಈ ಮಹತ್ಕಾರ್ಯಕ್ಕಾಗಿ ಈತ 56 ತಿಂಗಳ ಜೈಲುವಾಸಕ್ಕೂ ಪಾತ್ರನಾಗಿದ್ದಾನೆ. $544,000 ರಷ್ಟು ದೊಡ್ಡ ಮೊತ್ತದ ಹಣವನ್ನು ಪಡೆಯಲೆಂದೇ ಡೇವಿಡ್ ಸ್ಟಾವೆಲಿ ಈ ಕಾರ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ, ಸರ್ಕಾರದ ಯೋಜನೆಯ ಫಲಾನುಭವಿಯಾಗಲಿಯಾಗಲು ಹೀಗೆ ಮೋಸವೆಸಗಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ.
ಸ್ಟಾವೆಲಿ ಮತ್ತು ಆತನ ಸಹಚರ 53 ವರ್ಷದ ಡೇವಿಡ್ ಆಂಡ್ರ್ಯೂ ಬಟ್ಜಿಗರ್ ಜತೆಗೂಡಿ ಅಸಂಘಟಿತ ವ್ಯಾಪಾರ ವಿಭಾಗದಡಿ ಆರ್ಥಿಕ ಪರಿಹಾರಕ್ಕಾಗಿ ತಾವು ನಡೆಸುತ್ತಿದ್ದ ಮೂರು ರೆಸ್ಟೋರೆಂಟ್‌ಗಳು ನಷ್ಟಕ್ಕೊಳಗಾದವು ಎಂದು ಸುಳ್ಳು ಅರ್ಜಿ ಸಲ್ಲಿಸಿದ್ದರು. ವಾಸ್ತವವಾಗಿ ಮೂರೂ ರೆಸ್ಟೋರೆಂಟ್‌ಗಳು ಕೊವಿಡ್ ಸೋಂಕು ಹರಡುವ ಮುನ್ನವೇ ಮುಚ್ಚಿದ್ದವು.
ಮಾರ್ಚ್ 2020 ಮತ್ತು ಮೇ 2021 ರ ನಡುವೆ ಕೊವಿಡ್ ಉಂಟುಮಾಡಿದ ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಸರ್ಕಾರ ಜಾರಿಗೊಳಿಸಿದ ಯುಎಸ್ ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ (ಪಿಪಿಪಿ) ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಸಣ್ಣ ಉದ್ಯಮಗಳಿಗೆ ಕಡಿಮೆ ಬಡ್ಡಿ ಖಾಸಗಿ ಸಾಲಗಳಿಗೆ ವೇತನದಾರರ ಪಟ್ಟಿ ಮತ್ತು ಇತರ ವೆಚ್ಚಗಳನ್ನು ಭರಿಸಲು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸ್ಟಾವೆಲಿ ಪೊಲೀಸರಿಂದ ತಪ್ಪಿಸಿಕೊಂಡು ಪಾರಾಗಲು ಮತ್ತೊಂದು ಯೋಜನೆ ರೂಪಿಸಿದ. ಸಮುದ್ರ ತೀರವೊಂದರ ಬಳಿ ತನ್ನ ಕಾರನ್ನು ನಿಲ್ಲಿಸಿ ಕಣ್ಮರೆಯಾಗಿಬಿಟ್ಟ. ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿ ಆತ ಸನ್ನಿವೇಷ ಸೃಷ್ಟಿಸಿ ಮಂಗಮಾಯವಾಗಿದ್ದ. ಆದರೆ ಇದನ್ನು ನಂಬದ ಪೊಲೀಸರು ಆತನಿಗಾಗಿ ಹುಟುಕಾಟ ನಡೆಸಿ ಅಂತೂ ಸ್ಟಾವೆಲಿಯನ್ನು ಪತ್ತೆಹಚ್ಚಿದರು.
ಈ ಪ್ರಕರಣದ ತನಿಖೆ ನಡೆಸಿದ ಕೋರ್ಟ್, ಕೊವಿಡ್ ಸಾಂಕ್ರಾಮಿಕವು ಸೃಷ್ಟಿಸಿದ ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಸಂಯುಕ್ತ ಸರ್ಕಾರವು ಜಾರಿಗೊಳಿಸಿದ ಯೋಜನೆಗಳಿಂದ ಹಣ ಗಳಿಸಿಕೊಳ್ಳಲು ಯತ್ನಿಸಬಾರದು. ಅಗತ್ಯವಿರುವವರು ಮಾತ್ರ ಅಂತಹ ಆರ್ಥಿಕ ಯೋಜನೆಗಳನ್ನು ಬಳಸಿಕೊಳ್ಳುವಂತಾಗಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿತು. ಮುಂದಿನ ತಿಂಗಳು ಕೋರ್ಟ್ ಈ ಪ್ರಕರಣದ ಅಂತಿಮ ತೀರ್ಪು ನೀಡಲಿದೆ.
ಇದನ್ನೂ ಓದಿ:
ಕಂದಾಯ ಸಚಿವ ಆರ್.ಅಶೋಕರಿಂದ ಪಿಂಡ ಪ್ರದಾನ ಕಾರ್ಯ; ಕೊವಿಡ್‌ನಿಂದ ಮೃತಪಟ್ಟ 1 ಸಾವಿರಕ್ಕೂ ಹೆಚ್ಚು ಜನರ ಅಸ್ಥಿ ವಿಸರ್ಜನೆ
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು
Published On - 5:24 pm, Sat, 9 October 21