ಕಂದಾಯ ಸಚಿವ ಆರ್.ಅಶೋಕರಿಂದ ಪಿಂಡ ಪ್ರದಾನ ಕಾರ್ಯ; ಕೊವಿಡ್‌ನಿಂದ ಮೃತಪಟ್ಟ 1 ಸಾವಿರಕ್ಕೂ ಹೆಚ್ಚು ಜನರ ಅಸ್ಥಿ ವಿಸರ್ಜನೆ

ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಪೂಜಾ ಕೈಂಕರ್ಯದಲ್ಲಿ ಕಂದಾಯ ಸಚಿವ ಆರ್.ಅಶೋಕ ಪಾಲ್ಗೊಂಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಜನರಿಗೆ ಸಾಮೂಹಿಕವಾಗಿ ಪಿಂಡ ಪ್ರಧಾನ ಕಾರ್ಯ ಮಾಡಲಾಗಿದೆ. ಈ ಹಿಂದೆಯೂ ಕೂಡ ರಾಜ್ಯ ಸರ್ಕಾರದ ಪರವಾಗಿ ಸಚಿವ ಆರ್. ಅಶೋಕ ಅವರು ಜೂನ್ 2 ರಂದು ಅಸ್ತಿ ವಿಸರ್ಜನೆ ಮಾಡಿದ್ದರು.

ಕಂದಾಯ ಸಚಿವ ಆರ್.ಅಶೋಕರಿಂದ ಪಿಂಡ ಪ್ರದಾನ ಕಾರ್ಯ; ಕೊವಿಡ್‌ನಿಂದ ಮೃತಪಟ್ಟ 1 ಸಾವಿರಕ್ಕೂ ಹೆಚ್ಚು ಜನರ ಅಸ್ಥಿ ವಿಸರ್ಜನೆ
1 ಸಾವಿರಕ್ಕೂ ಹೆಚ್ಚು ಜನರಿಗೆ ಸಾಮೂಹಿಕವಾಗಿ ಪಿಂಡ ಪ್ರಧಾನ ಕಾರ್ಯ
Follow us
TV9 Web
| Updated By: preethi shettigar

Updated on:Oct 04, 2021 | 12:44 PM

ಮಂಡ್ಯ: ಕೊವಿಡ್‌ನಿಂದ ಮೃತಪಟ್ಟವರ ಪಿಂಡ ಪ್ರದಾನ ಕಾರ್ಯವನ್ನು ಕಂದಾಯ ಸಚಿವ ಆರ್.ಅಶೋಕ ಮಾಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಮೃತರ ಪಿಂಡ ಪ್ರದಾನ ಕಾರ್ಯ ಮಾಡಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಘೋಸಾಯಿ ಘಾಟ್‌ ಬಳಿಯ ಕಾವೇರಿ ನದಿಯಲ್ಲಿ ಇಂದು (ಅಕ್ಟೋಬರ್ 4) ಪಿಂಡ ಪ್ರದಾನ ಕಾರ್ಯ ನಡೆದಿದೆ.

ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಪೂಜಾ ಕೈಂಕರ್ಯದಲ್ಲಿ ಕಂದಾಯ ಸಚಿವ ಆರ್.ಅಶೋಕ ಪಾಲ್ಗೊಂಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಜನರಿಗೆ ಸಾಮೂಹಿಕವಾಗಿ ಪಿಂಡ ಪ್ರಧಾನ ಕಾರ್ಯ ಮಾಡಲಾಗಿದೆ. ಈ ಹಿಂದೆಯೂ ಕೂಡ ರಾಜ್ಯ ಸರ್ಕಾರದ ಪರವಾಗಿ ಸಚಿವ ಆರ್. ಅಶೋಕ ಅವರು ಜೂನ್ 2 ರಂದು ಅಸ್ತಿ ವಿಸರ್ಜನೆ ಮಾಡಿದ್ದರು. ಬೆಳಕವಾಡಿ ಗ್ರಾಮದ ಬಳಿಯ ಕಾವೇರಿ ನದಿ ದಡದಲ್ಲಿ ಅಸ್ತಿ ವಿಸರ್ಜನೆ ಮಾಡಲಾಗಿತ್ತು. ಕುಟುಂಬದವರು ಅಸ್ಥಿ ಕೊಂಡೊಯ್ಯದೇ ಬಾಕಿ ಉಳಿದಿದ್ದ ಸುಮಾರು 950 ಜನರ ಅಸ್ಥಿ ವಿಸರ್ಜನೆ ಮಾಡಲಾಗಿತ್ತು. ಈಗ ಪಿತೃ ಪಕ್ಷದ ಸಂದರ್ಭದಲ್ಲಿ ಮತ್ತೆ ಇನ್ನುಳಿದ ಜನರ ಅಂತಿಮ‌ ವಿಧಿ ವಿಧಾನಕ್ಕೆ ರಾಜ್ಯ ಸರ್ಕಾರ ತಿರ್ಮಾನ ಮಾಡಿದೆ.

ಮಂಡ್ಯ: ಸತ್ತವರು ಅನಾಥರಲ್ಲ, ಒಂದೊಂದು ಕಾರಣಕ್ಕೆ ಅಸ್ತಿ ವಿಸರ್ಜನೆ ಮಾಡಿಲ್ಲ:  ಆರ್.ಅಶೋಕ್ ಹಲವು ಕಾರಣಗಳಿಂದಾಗಿ ಮೃತರ ಕುಟುಂಬಸ್ಥರು ಅಸ್ಥಿ ವಿಸರ್ಜಿಸಿರಲಿಲ್ಲ. ಅನಾಥ ಅಸ್ಥಿಗಳನ್ನು ವಿಸರ್ಜಿಸುವ ಕೆಲಸ ಸರ್ಕಾರ ಮಾಡಿತ್ತು. ಈಗ ಸತ್ತವರಿಗೆ ಸದ್ಗತಿ ದೊರಕಿಸುವ ಕಾರ್ಯ ಮಾಡಲಾಗ್ತಿದೆ. ಪಿಂಡ ಪ್ರಧಾನ ಮಾಡಿದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವ ನಂಬಿಕೆ ಹಿಂದೂ ಧರ್ಮದಲ್ಲಿದೆ. ಹಾಗಾಗಿ ಸತ್ತವರು ಅನಾಥರಾಗಬಾರದೆಂದು ಸರ್ಕಾರ ಈ ಕೆಲಸ ಮಾಡುತ್ತಿದೆ. ಪ್ರಚಾರ ಸಿಗಲಿ ಎಂದು ನಾನು ಮಾಡುತ್ತಿಲ್ಲ. ಈ ಪುಣ್ಯದ ಕಾರ್ಯದಿಂದ ಆತ್ಮತೃಪ್ತಿ ಸಿಕ್ಕಿದೆ ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗೋಸಾಯ್ ಘಾಟ್‌ನಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿಯೂ ಕಟ್ಟುನಿಟ್ಟಾಗಿ‌ ಇದ್ದೀನಿ. ಮೂರು ದಿನಗಳ‌ ಕಟ್ಟು ನಿಟ್ಟಾಗಿ ಇರಬೇಕು ಎಂದು ಹೇಳಿದ್ದಾರೆ. ಇವತ್ತು ಅವಲಕ್ಕಿ ಬಿಟ್ಟು ಬೇರೆ ಏನು ಸೇವನೆ ಮಾಡಿಲ್ಲ. ಸತ್ತವರೆಲ್ಲರೂ ನಮ್ಮವರೇ ಎಂದು ಈ ಕಾರ್ಯ ಮಾಡುತ್ತಿದ್ದೇವೆ. ಈ ಪುಣ್ಯದ ಕೆಲಸಗಳಿಗೆ ಮಹಾತ್ಮ ಗಾಂಧೀಜಿ ನನಗೆ ಪ್ರೇರಣೆ. ಅವರಿಗೂ ಪೂಜೆ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಬಲಿಯಾದ ಅನಾಥ ಮೃತ ಶವಗಳಿಗೆ ಸರ್ಕಾರದಿಂದ ಮೋಕ್ಷ

ಬೆಂಗಳೂರು ನಗರದಲ್ಲಿ 185 ಶಿಥಿಲ ಕಟ್ಟಡಗಳು: ಕಂದಾಯ ಸಚಿವ ಆರ್.ಅಶೋಕ್

Published On - 11:43 am, Mon, 4 October 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?