Rat Bite: ಇಲಿ ಕಚ್ಚಿ 40 ದಿನದ ಹಸುಗೂಸು ಸಾವು

|

Updated on: Dec 25, 2023 | 10:56 AM

ಬಾಣಂತಿ ಲಕ್ಷ್ಮಿಕಲಾ ತನ್ನ ಹಸುಗೂಸಿನೊಂದಿಗೆ ನಾಗನೂಲು ಗ್ರಾಮದ ತವರು ಮನೆಯಲ್ಲಿ ವಾಸವಿದ್ದರು. ಆದರೆ ಎರಡು ದಿನಗಳ ಹಿಂದೆ ಮಗು ಮಲಗಿದ್ದಾಗ ಇಲಿಯೊಂದು ಮಗುವಿನ ಮೂಗಿಗೆ ಕಚ್ಚಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

Rat Bite: ಇಲಿ ಕಚ್ಚಿ 40 ದಿನದ ಹಸುಗೂಸು ಸಾವು
ಸಾಂದರ್ಭಿಕ ಚಿತ್ರ
Image Credit source: Pinterest
Follow us on

ತೆಲಂಗಾಣ: 40 ದಿನದ ಹಸುಗೂಸಿನ ಮೂಗಿಗೆ ಇಲಿ ಕಚ್ಚಿ ಮಗು ಸಾವನ್ನಪ್ಪಿರುವ ದಾರುಣ ಘಟನೆಯೊಂದು ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಇಲಿ ಮಗುವಿನ ಮೂಗಿಗೆ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿರುವುದು ಮೂಲಗಳಿಂದ ತಿಳಿದುಬಂದಿದೆ. ನಾಗನೂಲು ಗ್ರಾಮದ ಲಕ್ಷ್ಮೀಕಲಾ ಹಾಗೂ ಶಿವ ಎಂಬವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ 40 ದಿನಗಳ ಹಿಂದೆಯಷ್ಟೇ ಮಗು ಜನಿಸಿತ್ತು. ಇದೀಗಾ ಮಗುವಿನ ಸಾವಿನಿಂದಾಗಿ ಇಡೀ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ.

ಬಾಣಂತಿ ಲಕ್ಷ್ಮಿಕಲಾ ತನ್ನ ಹಸುಗೂಸಿನೊಂದಿಗೆ ನಾಗನೂಲು ಗ್ರಾಮದ ತವರು ಮನೆಯಲ್ಲಿ ವಾಸವಿದ್ದರು. ಆದರೆ ಎರಡು ದಿನಗಳ ಹಿಂದೆ ಮಗು ಮಲಗಿದ್ದಾಗ ಇಲಿಯೊಂದು ಮಗುವಿನ ಮೂಗಿಗೆ ಕಚ್ಚಿದೆ. ಮಗುವಿನ ಮೂಗಿನಿಂದ ತೀವ್ರ ರಕ್ತಸ್ರಾವ ಕಂಡು ಮಗುವಿನ ತಾಯಿ ಮತ್ತು ಕುಟುಂಬಸ್ಥರು ಸ್ಥಳೀಯ ನಾಗರ್ ಕರ್ನೂಲ್ ಜಿಲ್ಲಾಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಮಗುವಿನ ಸ್ಥಿತಿಯನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಬೇಕೆಂದು ಹೇಳಿದ್ದಾರೆ. ವೈದ್ಯರ ಸಲಹೆಯಂತೆ ಮಗುವನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಹೂಕೋಸು ಕಿತ್ತಿದ್ದಕ್ಕೆ ವಿದ್ಯುತ್ ಕಂಬಕ್ಕೆ ತಾಯಿಯನ್ನು ಕಟ್ಟಿ ಥಳಿಸಿದ ಮಗ

ಹೆರಿಗೆಗೆಂದು ತಾಯಿ ಮನೆಗೆ ಹೋಗಿದ್ದ ಲಕ್ಷ್ಮಿಕಲಾ.ಇನ್ನು ಕೆಲವೇ ದಿನಗಳಲ್ಲಿ ತನ್ನ ಮಗುವಿನೊಂದಿಗೆ ಪತಿಯ ಮನೆಗೆ ಹೋಗಬೇಕಿತ್ತು. ಆದರೆ ಅಷ್ಟೋತ್ತಿಗಾಗಲೇ ಈ ದುರಂತ ಸಂಭವಿಸಿದೆ. ಸಾಕಷ್ಟು ಮುತುವರ್ಜಿ ವಹಿಸಿದರೂ ಇಷ್ಟೊಂದು ಅನಾಹುತವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಮಗುವಿನ ಅಜ್ಜ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಸಾಕಷ್ಟು ಇಲಿಗಳು ಓಡಾಡುತ್ತಿದ್ದು, ಮಗುವಿನ ಬಗ್ಗೆ ಕಾಳಜಿ ವಹಿಸದ ಕಾರಣ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ