Ratan Tata death: ರತನ್ ಟಾಟಾ ಸರಳತೆಗೆ ಕನ್ನಡಿಯಾಯ್ತು ಅಂತಿಮ ದಿನಗಳ ಕಳೆದ ನಿವಾಸ!

|

Updated on: Oct 10, 2024 | 6:38 AM

ರತನ್ ಟಾಟಾ ನಿಧನ: ಟಾಟಾ ಸಮೂಹದ ಗೌರವಾಧ್ಯಕ್ಷ ರತನ್ ಟಾಟಾ ಈಗ ನಮ್ಮೊಂದಿಗಿಲ್ಲ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ತಮ್ಮ 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೀವನದುದ್ದಕ್ಕೂ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಿರ್ವಹಿಸಿದ ಅವರು ಕೊನೆಯವರೆಗೂ ಸರಳತೆಯ ಉದಾಹರಣೆಯಾಗಿಯೇ ಉಳಿದರು. ಅವರ ಸರಳತೆಗೆ ಹಿಡಿದ ಕೈಗನ್ನಡಿಯ ಹಿನ್ನೋಟ ಇಲ್ಲಿದೆ.

Ratan Tata death: ರತನ್ ಟಾಟಾ ಸರಳತೆಗೆ ಕನ್ನಡಿಯಾಯ್ತು ಅಂತಿಮ ದಿನಗಳ ಕಳೆದ ನಿವಾಸ!
ರತನ್ ಟಾಟಾ ಸರಳತೆಗೆ ಕನ್ನಡಿಯಾಯ್ತು ಅಂತಿಮ ದಿನಗಳ ಕಳೆದ ನಿವಾಸ!
Follow us on

ದೇಶದ ಇತಿಹಾಸದಲ್ಲಿ ಅಕ್ಟೋಬರ್ 9 ಎಂಬುದು ಯಾವಾಗಲೂ ನೆನಪಿನಲ್ಲಿ ಉಳಿಯುವಂತಾಗಲಿದೆ. ಏಕೆಂದರೆ ಶತಕೋಟಿ ಮತ್ತು ಟ್ರಿಲಿಯನ್‌ಗಳಷ್ಟು ಮೌಲ್ಯದ ವ್ಯಾಪಾರ ಸಾಮ್ರಾಜ್ಯವನ್ನು ನಿರ್ವಹಿಸಿದ ರತನ್ ಟಾಟಾ ಇದೇ ದಿನ ಜಗತ್ತಿಗೆ ವಿದಾಯ ಹೇಳಿದ್ದಾರೆ. ರತನ್ ಟಾಟಾ ಅವರ ಇಡೀ ಜೀವನವು ‘ಸರಳತೆ’ಗೆ ಉದಾಹರಣೆಯಾಗಿದೆ. ಅವರ ಬದುಕನ್ನು ಅವಲೋಕಿಸಿದರೆ ‘ರಾಮಾಯಣ’ದಲ್ಲಿ ಜನಕ ರಾಜನ ಪಾತ್ರದಲ್ಲಿ ಕಾಣುವಂಥ ಅನೇಕ ಉದಾಹರಣೆಗಳು ಕಾಣಸಿಗುತ್ತವೆ!

ಪುಟ್ಟ ನ್ಯಾನೋ ಕಾರಲ್ಲೇ ಪ್ರಯಾಣ!

ರತನ್ ಟಾಟಾ ಅವರ ಕಂಪನಿ ಟಾಟಾ ಮೋಟಾರ್ಸ್ ವಿಶ್ವದ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾದ ‘ಜಾಗ್ವಾರ್’ ಮತ್ತು ‘ಲ್ಯಾಂಡ್ ರೋವರ್’ ಅನ್ನು ತಯಾರಿಸುತ್ತದೆ. ಜಗತ್ತಿನ ಯಾವುದೇ ಕಾರನ್ನು ಖರೀದಿಸಬಹುದಾದಷ್ಟು ಸಂಪತ್ತು ಅವರಲ್ಲಿತ್ತು. ಆದರೆ ಅವರ ಕೊನೆಯ ದಿನಗಳಲ್ಲಿ ಅವರು ಯಾವಾಗಲೂ ನ್ಯಾನೋದಲ್ಲಿ ಪ್ರಯಾಣಿಸುವುದನ್ನು ಜನತೆ ಗಮನಿಸಿದೆ!

ಕೆಲವು ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಬಂದಾಗ ಜನರು ಅವರ ಸಾವಿನ ಬಗ್ಗೆ ಊಹಾಪೋಹಗಳನ್ನು ಹರಡಿದ್ದರು. ಆದರೆ ಅವರೇ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಅದನ್ನು ನಿರಾಕರಿಸಿದರು. ನಂತರ ಆ ಬಗ್ಗೆ ಯಾವುದೇ ಗೊಂದಲ, ಗದ್ದಲ ಸೃಷ್ಟಿಯಾಗಿಲ್ಲ

ಕೊನೆಯ ಕ್ಷಣಗಳಿಗೆ ‘ಬಖ್ತಾವರ್’ ಸಾಕ್ಷಿಯಾಯಿತು

ಸುಮಾರು 3 ದಶಕಗಳ ಕಾಲ ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿದ್ದ ರತನ್ ಟಾಟಾ ಅವರು ತಮ್ಮ ಜೀವನದ ಕೊನೆಯ ಕ್ಷಣಗಳನ್ನು ‘ಬಖ್ತಾವರ್’ ಎಂಬ ಮನೆಯಲ್ಲಿ ಕಳೆದರು. ಈ ಮನೆಯನ್ನು ನೋಡಿದರೆ ಸಾಕು, ಅದರಲ್ಲಿ ಶ್ರೀಮಂತಿಕೆಯ ಕುರುಹು ಇಲ್ಲ ಎಂಬುದರ ಅರಿವು ನಿಮಗೆ ಆಗದೇ ಇರದು.

ರತನ್ ಟಾಟಾ ಅವರ ಈ ಮನೆ ಮುಂಬೈನ ಕೊಲಾಬಾ ಪ್ರದೇಶದಲ್ಲಿದೆ. ‘ಬಖ್ತಾವರ್’, ಅಂದರೆ ಅದೃಷ್ಟವನ್ನು ತರುವವನು ಎಂಬರ್ಥವಂತೆ. ಇದು ರತನ್ ಟಾಟಾ ಅವರ ಇಡೀ ಜೀವನಕ್ಕೂ ಅನ್ವಯಿಸುತ್ತದೆ. ಟಾಟಾ ಗ್ರೂಪ್‌ನ ಚುಕ್ಕಾಣಿ ಹಿಡಿದಾಗ, ಅವರು ಇಡೀ ಗುಂಪಿಗೆ ಅದೃಷ್ಟವನ್ನು ತಂದ ಅನೇಕ ನಿರ್ಧಾರಗಳನ್ನು ತೆಗೆದುಕೊಂಡರು. ಲಂಡನ್ ಸ್ಟೀಲ್ ಕಂಪನಿ ‘ಕೋರಸ್’ ಮತ್ತು ಟೀ ಕಂಪನಿ ‘ಟೆಟ್ಲಿ’ ಸ್ವಾಧೀನಪಡಿಸಿಕೊಳ್ಳುವುದು ಇದರಲ್ಲಿ ಸೇರಿದೆ.

‘ಬಖ್ತಾವಾರ್’ನಲ್ಲಿದೆ ರತನ್ ಟಾಟಾ ಛಾಪು

ರತನ್ ಟಾಟಾ ಕೊನೆಯ ಕ್ಷಣಗಳನ್ನು ಕಳೆದ ‘ಬಖ್ತಾವರ್’ ಮನೆಯಲ್ಲಿ ಅವರ ಸ್ಪಷ್ಟವಾದ ಪ್ರಭಾವವು ಗೋಚರಿಸುತ್ತದೆ. ಈ ಮನೆಯು ಸಮುದ್ರಕ್ಕೆ ಎದುರಾಗಿದ್ದು, ಇದು ಕೊಲಾಬಾ ಪೋಸ್ಟ್ ಆಫೀಸ್‌ಗೆ ನಿಖರವಾಗಿ ವಿರುದ್ಧವಾಗಿದೆ. ಇದು 13,350 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಬಂಗಲೆಯು 3 ಮಹಡಿಗಳನ್ನು ಹೊಂದಿದೆ ಮತ್ತು 10-15 ಕಾರುಗಳಿಗೆ ಪಾರ್ಕಿಂಗ್ ಸ್ಥಳವಿದೆ.

ಇದನ್ನೂ ಓದಿ: ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ನಿಧನ

ಈ ಮನೆಯು ಅತ್ಯಂತ ಸರಳ ಮತ್ತು ಕನಿಷ್ಠ ವಿನ್ಯಾಸವನ್ನು ಹೊಂದಿದೆ. ಇದನ್ನು ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಚಿತ್ರಿಸಲಾಗಿದೆ. ಮನೆಯಲ್ಲಿ ಸಾಕಷ್ಟು ಸೂರ್ಯನ ಬೆಳಕನ್ನು ಖಚಿತಪಡಿಸಿಕೊಳ್ಳಲು ದೊಡ್ಡ ಕಿಟಕಿಗಳನ್ನು ಬಳಸಲಾಗಿದೆ. ಇವು ಮನೆಯ ಲಿವಿಂಗ್ ರೂಮ್ ನಿಂದ ಬೆಡ್ ರೂಮ್ ವರೆಗೂ ಕಾಣಸಿಗುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 am, Thu, 10 October 24