Ratan Tata: ರತನ್ ಟಾಟಾ ನಾಲ್ಕು ಬಾರಿ ಪ್ರೀತಿಯ ಬಲೆಗೆ ಸಿಲುಕಿದ್ದರೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇಕೆ?

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (86) ಬುಧವಾರ ಮಧ್ಯರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ರತನ್ ಟಾಟಾ ಅವರ ಬದುಕು, ಉದ್ಯಮ ಒಂದು ರೋಚಕ ಕಥನ. ಅಂದಹಾಗೆ, ರತನ್ ಟಾಟಾ ನಾಲ್ಕು ಬಾರಿ ಪ್ರೀತಿ-ಪ್ರೇಮದ ಬಲೆಗೆ ಬಿದ್ದಿದ್ದರಂತೆ. ಆದರೂ ಅಂತಿಮವಾಗಿ ಬ್ರಹ್ಮಚಾರಿಯಾಗಿಯೇ ಉಳಿದರು. ಇದಕ್ಕೆ ಕಾರಣವನ್ನು ಅವರೇ ತಿಳಿಸಿದ್ದರು.

Ratan Tata: ರತನ್ ಟಾಟಾ ನಾಲ್ಕು ಬಾರಿ ಪ್ರೀತಿಯ ಬಲೆಗೆ ಸಿಲುಕಿದ್ದರೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇಕೆ?
ರತನ್ ಟಾಟಾ
Follow us
Ganapathi Sharma
|

Updated on: Oct 10, 2024 | 7:42 AM

ಮುಂಬೈ, ಅಕ್ಟೋಬರ್ 10: ದೇಶದ ಪ್ರತಿಷ್ಠಿತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ವೃತ್ತಿಪರ, ಉದ್ಯಮ ಕ್ಷೇತ್ರದ ಸಾಧನೆಗಳ ಹೊರತಾಗಿ ವೈಯಕ್ತಿಕ ಜೀವನ ಕೂಡ ಜನರಲ್ಲಿ ಕುತೂಹಲ ಕೆರಳಿಸಿರುವುದು ನಿಜ. ಇದಕ್ಕೆ ಕಾರಣಗಳೂ ಇವೆ. ಹಲವು ಬಾರಿ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿದ್ದ ಅವರು ಜೀವನದ ಕೊನೆಯ ವರೆಗೂ ಅವಿವಾಹಿತರಾಗಿಯೇ ಉಳಿದಿದ್ದರು. ಟಾಟಾ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇಕೆ ಎಂಬುದು ಅನೇಕರಿಗೆ ತಿಳಿದಿಲ್ಲ.

ರತನ್ ಟಾಟಾ ಮದುವೆಯಾಗಿಲ್ಲ. ಆದರೆ ನಾಲ್ಕು ಬಾರಿ ಪ್ರೀತಿ ವಿಫಲವಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ್ದ ರತನ್ ಟಾಟಾ, ಪ್ರೀತಿ ತನ್ನ ಜೀವನದಲ್ಲಿ ಒಂದಲ್ಲ ನಾಲ್ಕು ಬಾರಿ ಬಾಗಿಲು ತಟ್ಟಿದೆ. ಆದರೆ ಕಷ್ಟಕರ ಸಂದರ್ಭಗಳು ಹಾಗೂ ಅನಿವಾರ್ಯ ಸನ್ನಿವೇಶಗಳಿಂದಾಗಿ ಪ್ರೀತಿ-ಪ್ರೇಮ ಮದುವೆಯ ಹಂತವನ್ನು ತಲುಪಲಿಲ್ಲ ಎಂದು ಹೇಳಿದ್ದರು. ಇದಾದ ನಂತರ ಮತ್ತೆ ಮದುವೆಯ ಬಗ್ಗೆ ಯೋಚಿಸಲಿಲ್ಲ. ದೇಶದಲ್ಲಿ ಟಾಟಾ ಗ್ರೂಪ್‌ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವುದರ ಮೇಲೆ ಇಡೀ ಜೀವನವು ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು ಎಂದು ಅವರು ವಿವರಿಸಿದ್ದರು.

ಅಮೆರಿಕದಲ್ಲಿ ಚಿಗುರಿದ ಪ್ರೀತಿ ಅಲ್ಲಿಯೇ ಕಮರಿತು

ಅಮೆರಿಕದಲ್ಲಿದ್ದ ಸಂದರ್ಭದಲ್ಲಿ ಟಾಟಾಗೆ ಅಲ್ಲಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಸಂದರ್ಶನ ಒಂದರಲ್ಲಿ ಮಾತಾಡಿದ್ದ ರತನ್‌ ಟಾಟಾ, ನನ್ನ ಜೀವನದಲ್ಲಿ ಆ 2 ವರ್ಷಗಳು ತುಂಬ ಕಲರ್‌ಫುಲ್‌ ಆಗಿದ್ದವು ಎಂದಿದ್ದರು. ಆದರೆ, ಭಾರತಕ್ಕೆ ಬರಬೇಕಾದ ಸಂದರ್ಭ ಬಂದಾಗ ಆಕೆಗೆ ಭಾರತಕ್ಕೆ ಬರಲು ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ ಭಾರತ-ಚೀನಾ ಯುದ್ಧವೂ ಪ್ರಾರಂಭವಾಯಿತು. ಕೊನೆಗೆ ಅಮೆರಿಕದಲ್ಲಿ ಬೇರೊಬ್ಬನನ್ನು ಮದುವೆಯಾದಳು. ಇದಾದ ನಂತರ ರತನ್ ಟಾಟಾ ತಮ್ಮ ಸಂಪೂರ್ಣ ಗಮನವನ್ನು ಟಾಟಾ ಗ್ರೂಪ್ ಮೇಲೆ ಕೇಂದ್ರೀಕರಿಸಿದ್ದರು. ಸಂದರ್ಶನವೊಂದರಲ್ಲಿ ಪ್ರೀತಿ ವಿಫಲವಾದ ಕಾರಣಗಳನ್ನು ವಿವರಿಸಿದ್ದ ಟಾಟಾ, ಆಕೆ ನನ್ನ ಜೀವನದಲ್ಲಿ ಇದ್ದಿದ್ದರೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತಿತ್ತು ಎಂದಿದ್ದರು.

ಇದನ್ನೂ ಓದಿ: ರತನ್ ಟಾಟಾ ಸರಳತೆಗೆ ಕನ್ನಡಿಯಾಯ್ತು ಅಂತಿಮ ದಿನಗಳ ಕಳೆದ ನಿವಾಸ!

ನನಗೆ ‘ಕ್ರಶ್’ ಇದ್ದಾರೆಯೇ ಎಂದು ನೀವು ಕೇಳಿದರೆ, ನಾನು ಮದುವೆಯ ಬಗ್ಗೆ ನಾಲ್ಕು ಬಾರಿ ಗಂಭೀರವಾಗಿ ಯೋಚಿಸಿದ್ದೆ ಎಂದು ಹೇಳುತ್ತೇನೆ. ಆದರೆ ಆಗೊಮ್ಮೆ ಈಗೊಮ್ಮೆ ಯಾವುದೋ ಭಯದಿಂದ ಹಿಂದೆ ಸರಿದಿದ್ದೆ ಎಂದೂ ಹೇಳುತ್ತೇನೆ. ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಪ್ರೀತಿಯ ಬಗ್ಗೆ ತುಂಬಾ ಗಂಭೀರವಾಗಿದ್ದೆ. ಭಾರತಕ್ಕೆ ಮರಳಿದ ನಂತರ ನಾವು ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದಿದ್ದರು.

ರತನ್ ಟಾಟಾ 1937 ರ ಡಿಸೆಂಬರ್ 28 ರಂದು ಜನಿಸಿದರು. ವ್ಯಕ್ತಿತ್ವದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸಿಕೊಂಡು ಉನ್ನತ ಶಿಖರಗಳನ್ನು ಏರಿದರು. ಅವರು ಟಾಟಾ ಗ್ರೂಪ್ ಆಫ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು. ಹಾಗಾಗಿಯೇ ಟಾಟಾ ಇಂದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ.

ಇದನ್ನೂ ಓದಿ: ರತನ್ ಟಾಟಾ ಜೀವನ ಯಾನ; ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿ ಮನಸು ಗೆದ್ದಿದ್ದ ಟಾಟಾ!

ಇಂದು ಅಡುಗೆಮನೆಯಲ್ಲಿ ಬಳಸುವ ಉಪ್ಪಿನಿಂದ ಹಿಡಿದು ಆಕಾಶದಲ್ಲಿ ವಿಮಾನ ಪ್ರಯಾಣದವರೆಗೆ ಟಾಟಾ ಗ್ರೂಪ್ ಕಂಪನಿಗಳು ತಮ್ಮ ಅಸ್ತಿತ್ವವನ್ನು ಸಾರಿವೆ. ಮದುವೆಯಾಗದಿದ್ದರೂ ರತನ್ ಟಾಟಾ ತುಂಬಾ ಸಂತೋಷದ ಜೀವನ ನಡೆಸುತ್ತಿದ್ದರು. ಕಾರುಗಳಿಂದ ಹಿಡಿದು ಪಿಯಾನೋ ನುಡಿಸುವವರೆಗೆ ಎಲ್ಲದರಲ್ಲೂ ಅವರಿಗೆ ಆಸಕ್ತಿಯಿತ್ತು. 2012 ರಲ್ಲಿ 75 ನೇ ವಯಸ್ಸಿನಲ್ಲಿ ಟಾಟಾ ಸನ್ಸ್‌ನಿಂದ ನಿವೃತ್ತರಾದ ನಂತರವೂ ಅವರು ವಿವಿಧ ಚಟುವಟಿಕೆಗಳ ಮೂಲಕ ಸಕ್ರಿಯರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ