Ratan Tata: ಪೋಷಕರ ವಿಚ್ಛೇದನ, ತಂದೆಯೊಂದಿಗೆ ಭಿನ್ನಾಭಿಪ್ರಾಯ, ಅಂದು ರತನ್ ಪಾಲಿಗೆ ಇದ್ದಿದ್ದು ಅಜ್ಜಿಯೊಬ್ಬರೇ

ಹಿರಿಯ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಅವರ ವೈಯಕ್ತಿಕ ಬದುಕು, ಅನುಭವಿಸಿದ ಕಷ್ಟಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ, ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸುವುದಿಲ್ಲ ಆದರೆ ರತನ್ ಹಾಗಿರಲಿಲ್ಲ. ಒಮ್ಮೆ ರತನ್ ಟಾಟಾ ತಮ್ಮ ವೈಯಕ್ತಿಕ ಜೀವನದ ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಿದ್ದರು.

Ratan Tata: ಪೋಷಕರ ವಿಚ್ಛೇದನ, ತಂದೆಯೊಂದಿಗೆ ಭಿನ್ನಾಭಿಪ್ರಾಯ, ಅಂದು ರತನ್ ಪಾಲಿಗೆ ಇದ್ದಿದ್ದು ಅಜ್ಜಿಯೊಬ್ಬರೇ
ರತನ್ ಟಾಟಾImage Credit source: Getty Images
Follow us
ನಯನಾ ರಾಜೀವ್
|

Updated on:Oct 10, 2024 | 8:52 AM

ಹಿರಿಯ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಅವರ ವೈಯಕ್ತಿಕ ಬದುಕು, ಅನುಭವಿಸಿದ ಕಷ್ಟಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ, ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕಗೊಳಿಸುವುದಿಲ್ಲ ಆದರೆ ರತನ್ ಹಾಗಿರಲಿಲ್ಲ. ಒಮ್ಮೆ ರತನ್ ಟಾಟಾ ತಮ್ಮ ವೈಯಕ್ತಿಕ ಜೀವನದ ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಿದ್ದರು.

ಅವರು ಹ್ಯೂಮನ್ಸ್​ ಆಫ್ ಬಾಂಬೆಗೆ ನೀಡಿದ ಸಂವಾದದಲ್ಲಿ ತಮ್ಮ ಪೋಷಕರ ವಿಚ್ಛೇದನವು ತಮ್ಮ ಹಾಗೂ ಸಹೋದರನ ಮೇಲೆ ಯಾವ ರೀತಿ ಪರಿಣಾಮ ಬೀರಿತ್ತು ಎಂಬುದನ್ನು ಹೇಳಿದ್ದರು. ರತನ್ ಟಾಟಾ ತಂದೆಯೊಂದಿಗೆ ಏಕೆ ಭಿನ್ನಾಭಿಪ್ರಾಯ ಹೊಂದಿದ್ದರು, ತಮ್ಮ ಜೀವನದುದ್ದಕ್ಕೂ ಅಜ್ಜಿಯ ಆಸ್ರಯದಲ್ಲೇ ಬೆಳೆದಿದ್ದೇಕೆ ಎಂಬುದರ ಬಗ್ಗೆ ಮಾತನಾಡಿದ್ದರು.

ರತನ್ ಟಾಟಾ ಬಾಲ್ಯ ಹೇಗಿತ್ತು? ತಮ್ಮ ಬಾಲ್ಯವನ್ನು ಸಂತೋಷದಿಂದ ಕಳೆದಿದ್ದೇನೆ, ಆದರೆ ದೊಡ್ಡವರಾಗುತ್ತಿದ್ದಂತೆ ಪೋಷಕರ ವಿಚ್ಛೇದನದಿಂದಾಗಿ ಅವರು ಹಾಗೂ ಅವರ ಸಹೋದರ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಯಿತು, ಅಂದಿನ ಕಾಲದಲ್ಲಿ ವಿಚ್ಛೇದನ ಇಷ್ಟು ಸಾಮಾನ್ಯವಾಗಿರಲಿಲ್ಲ ಎಂದು ಹೇಳಿದ್ದರು.

ರತನ್ ಟಾಟಾ ಅವರನ್ನು ಅವರ ಅಜ್ಜಿ ಎಲ್ಲಾ ರೀತಿಯಲ್ಲೂ ಬೆಂಬಲಿಸಿದ್ದರು, ಯಾವ ಬೆಲೆ ತೆತ್ತಾದರೂ ಆತ್ಮಗೌರವ ಕಾಪಾಡಬೇಕು ಎಂಬುದನ್ನು ಅಜ್ಜಿ ಕಲಿಸಿಕೊಟ್ಟಿದ್ದಾಗಿ ಹೇಳಿದ್ದರು.

ಶಾಲೆಯಲ್ಲಿ ಮಕ್ಕಳು ಕಿರುಕುಳ ನೀಡುತ್ತಿದ್ದರು ತನ್ನ ತಾಯಿ ಎರಡನೇ ಮದುವೆಯಾದ ಬಳಿಕ ಇದೇ ವಿಚಾರವಿಟ್ಟುಕೊಂಡು ಶಾಲೆಯಲ್ಲಿ ಸಹಪಾಠಿಗಳು ಕಿರುಕುಳ ಕೊಡುತ್ತಿದ್ದರು, ನಾವು ಹೇಗಾದರೂ ಆ ಪರಿಸ್ಥಿತಿಯಿಂದ ಹೊರಬರಬೇಕೆಂದು ಬಯಸಿದ್ದೆವು, ಆದರೆ, ನಾವು ಆ ಸಂದರ್ಭಗಳನ್ನು ಮೆಟ್ಟಿ ನಿಂತಿದ್ದೆವು ಎಂದಿದ್ದರು.

ಮತ್ತಷ್ಟು ಓದಿ: Ratan Tata: ಸಾಕು ನಾಯಿಗೋಸ್ಕರ ಬ್ರಿಟನ್ ರಾಜಮನೆತನದ ಪ್ರತಿಷ್ಠಿತ ಪ್ರಶಸ್ತಿ ತಿರಸ್ಕರಿಸಿದ್ದ ರತನ್ ಟಾಟಾ

ಎರಡನೇ ಮಹಾಯುದ್ಧದ ನಂತರ ಅವಳು ನನ್ನನ್ನು ಮತ್ತು ನನ್ನ ಸಹೋದರನನ್ನು ಬೇಸಿಗೆ ರಜೆಗೆ ಲಂಡನ್‌ಗೆ ಕರೆದೊಯ್ದಿದ್ದಳು, ಅಲ್ಲಿ ನಮ್ಮ ಸ್ವಾಭಿಮಾನಕ್ಕೆ ಮತ್ತಷ್ಟು ಘಾಸಿಯುಂಟಾಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದರು.

ರತನ್ ಟಾಟಾ ಅವರ ತಂದೆಯೊಂದಿಗೆ ಭಿನ್ನಾಭಿಪ್ರಾಯಗಳು ರತನ್ ಟಾಟಾ ಕೂಡ ತಮ್ಮ ತಂದೆಯೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ, ನಾನು ಪಿಟೀಲು ನುಡಿಸುವುದನ್ನು ಕಲಿಯಲು ಬಯಸಿದ್ದೆ, ಆದರೆ ನನ್ನ ತಂದೆ ನನಗೆ ಪಿಯಾನೋ ಕಲಿಯಲು ಹೇಳಿದ್ದರು. ನಾನು ಅಮೆರಿಕಾದಲ್ಲಿ ಕಾಲೇಜಿಗೆ ಹೋಗಲು ಬಯಸಿದ್ದೆ, ಆದರೆ ಅವರು ನನ್ನನ್ನು ಯುಕೆಗೆ ಹೋಗುವಂತೆ ಒತ್ತಾಯಿಸಿದರು. ನಾನು ವಾಸ್ತುಶಿಲ್ಪಿಯಾಗಬೇಕೆಂದು ಬಯಸಿದ್ದೆ, ಆದರೆ ಅವರು ನನ್ನನ್ನು ಎಂಜಿನಿಯರ್ ಆಗುವಂತೆ ಒತ್ತಾಯಿಸಿದರು.

ಅಜ್ಜಿಯ ಒತ್ತಾಸೆಯಿಂದಾಗಿ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಸಿಕ್ಕಿತು ಎಂದು ಸ್ಮರಿಸಿದರು. ಇದು ತನ್ನ ಅಜ್ಜಿಯ ಬೆಂಬಲ ಎಂದು ಟಾಟಾ ಹೇಳಿದರು, ಇದರಿಂದಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆದರೂ, ಅವರು ತಮ್ಮ ಕೋರ್ಸ್ ಅನ್ನು ಆರ್ಕಿಟೆಕ್ಚರ್‌ಗೆ ಬದಲಾಯಿಸಿದರು.

ಕಾಲೇಜು ಮುಗಿಸಿದ ನಂತರ ರತನ್ ಟಾಟಾ ಲಾಸ್ ಏಂಜಲೀಸ್ ನ ಆರ್ಕಿಟೆಕ್ಚರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಇಲ್ಲಿ ಅವರು ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಈ ನಗರದಲ್ಲಿಯೇ ಹುಡುಗಿಯೊಬ್ಬಳನ್ನು ಅವರು ಪ್ರೀತಿಸುತ್ತಿದ್ದರು. ಆದರೆ 1962 ರ ಭಾರತ-ಚೀನಾ ಯುದ್ಧದ ಕಾರಣ, ಆಕೆಯ ಕುಟುಂಬವು ಅವಳನ್ನು ಭಾರತಕ್ಕೆ ಕಳುಹಿಸಲು ಬಯಸಲಿಲ್ಲ ಮತ್ತು ಇಲ್ಲಿಯೇ ಸಂಬಂಧ ಕೊನೆಗೊಂಡಿತ್ತು ಎಂದು ಭಾವುಕರಾಗಿ ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:26 am, Thu, 10 October 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್