ನವದೆಹಲಿ: ಭಾನುವಾರ ಸಂಜೆ ಜಮ್ಮು ಕಾಶ್ಮೀರದ (Jammu Kashmir) ರಿಯಾಸಿಯಲ್ಲಿ ಮಾತಾ ವೈಷ್ಣೋದೇವಿ ದೇವಾಲಯದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಪಾಕಿಸ್ತಾನಿ ಉಗ್ರರು ಗುಂಡಿನ ದಾಳಿ (Terrorists Attack) ನಡೆಸಿದ್ದರು. ಇದರಿಂದ ಬಸ್ ಕಣಿವೆಗೆ ಉರುಳಿಬಿದ್ದು 9 ಜನ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ನೆದರ್‌ಲ್ಯಾಂಡ್ಸ್‌ನ ಬಲಪಂಥೀಯ ಪಿವಿವಿ ಫ್ರೀಡಂ ಪಾರ್ಟಿಯ ಮುಖ್ಯಸ್ಥ ಗೀರ್ಟ್ ವೈಲ್ಡರ್ಸ್ (Geert Wilders) ಪ್ರತಿಕ್ರಿಯಿಸಿದ್ದಾರೆ.
“ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಗೆ ಹಿಂದೂಗಳನ್ನು ಕೊಲ್ಲಲು ಬಿಡಬೇಡಿ. ನಿಮ್ಮ ಜನರನ್ನು ಭಾರತವನ್ನು ರಕ್ಷಿಸಿಕೊಳ್ಳಿ!” ಎಂದು ವೈಲ್ಡರ್ಸ್ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Don’t allow Pakistani terrorists in the Kashmir Valley killing Hindus.
Protect your people India! #AllEyesOnReasi— Geert Wilders (@geertwilderspvv) June 10, 2024
ವೈಲ್ಡರ್ಸ್ ಹಲವಾರು ಸಂದರ್ಭಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ವಿಷಯವನ್ನು ಎತ್ತಿ ತೋರಿಸಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡರಲ್ಲೂ ಹಿಂದೂಗಳ ದುಃಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ನಂತರ ವಿವಾದದಲ್ಲಿ ಸಿಲುಕಿದ ನಂತರ ಅವರನ್ನು ವೈಲ್ಡರ್ಸ್ ಬೆಂಬಲಿಸಿದ್ದರು. ಅವರು ಈ ವರ್ಷದ ಆರಂಭದಲ್ಲಿ ನೂಪುರ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. “ಆಕೆ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸ್ವಾತಂತ್ರ್ಯದ ಸಂಕೇತ” ಎಂದು ಕರೆದಿದ್ದರು.
ವೈಲ್ಡರ್ಸ್ ಅವರು ಇಸ್ಲಾಂ ವಿರುದ್ಧ ನೀಡುವ ಬಹಿರಂಗ ಹೇಳಿಕೆಗಳ ಪರಿಣಾಮವಾಗಿ ಹಲವಾರು ಸಾವಿನ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಪೊಲೀಸ್ ರಕ್ಷಣೆಯಲ್ಲಿ ವಾಸಿಸುತ್ತಿದ್ದಾರೆ. ಸ್ಕೈ ನ್ಯೂಸ್ ವರದಿಯ ಪ್ರಕಾರ, ವೈಲ್ಡರ್ಸ್ ಸುಮಾರು 20 ವರ್ಷಗಳಿಂದ ಒಂದು ಸುರಕ್ಷಿತ ಮನೆಯಿಂದ ಇನ್ನೊಂದಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ.
“ನಾನು ಪಾಕಿಸ್ತಾನ ಮತ್ತು ಅರಬ್ ಇಮಾಮ್‌ಗಳಿಂದ ಹಲವಾರು ಫತ್ವಾಗಳನ್ನು ಸ್ವೀಕರಿಸಿದ್ದೇನೆ, ಆದರೆ ನಾನು ಹೆದರುವುದಿಲ್ಲ” ಎಂದು ಅವರು ಕಳೆದ ವರ್ಷ ಹೇಳಿದ್ದರು.
ಇದನ್ನೂ ಓದಿ: ಆ ಒಂದು ಬುಲೆಟ್ನಿಂದ ಕಂದಕಕ್ಕೆ ಬಿದ್ದಿತ್ತು ಬಸ್, ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದ್ದು ಹೇಗೆ?
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 9 ಜನರು ಸಾವನ್ನಪ್ಪಿದ್ದರು. ಬಲಿಯಾದವರಲ್ಲಿ 2 ವರ್ಷದ ಬಾಲಕ ಸೇರಿದಂತೆ ನಾಲ್ವರು ರಾಜಸ್ಥಾನದ ಸ್ಥಳೀಯರು ಮತ್ತು ಮೂವರು ಉತ್ತರ ಪ್ರದೇಶದವರು ಇದ್ದಾರೆ. 41 ಯಾತ್ರಾರ್ಥಿಗಳಲ್ಲಿ ಗುಂಡೇಟಿನಿಂದ ಗಾಯಗೊಂಡ 10 ಜನರು ಉತ್ತರ ಪ್ರದೇಶದವರಾಗಿದ್ದಾರೆ. ಗಾಯಾಳುಗಳು ಜಮ್ಮು ಮತ್ತು ರಿಯಾಸಿ ಜಿಲ್ಲೆಗಳ 3 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸಂಜೆ 6.10ರ ಸುಮಾರಿಗೆ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ