ವಾರಾಣಸಿಯಿಂದ ಮುಂಬೈಗೆ ತೆರಳಬೇಕಿದ್ದ ಆಕಾಶ ವಿಮಾನ ಐದು ಗಂಟೆ ವಿಳಂಬವಾಗಿದೆ. ಬೋರ್ಡಿಂಗ್ ಪ್ರಕ್ರಿಯೆ ವೇಳೆ ಮಾನಯಾನ ಸಂಸ್ಥೆಯು ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ ಮುಂಬೈಗೆ ಹೋಗುವ ಆಕಾಶ ಏರ್ ವಿಮಾನವು ಭಾನುವಾರ ಐದು ಗಂಟೆಗಳಿಗೂ ಹೆಚ್ಚು ವಿಳಂಬವಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಮತ್ತು ಸ್ಥಳೀಯ ಅಧಿಕಾರಿಗಳು ಅಗತ್ಯ ಭದ್ರತಾ ತಪಾಸಣೆಗಳನ್ನು ನಡೆಸಿದರು ಎಂದು ಆಕಾಶ ಏರ್ ಭಾನುವಾರ ರಾತ್ರಿ ಟ್ವೀಟ್‌ನಲ್ಲಿ ತಿಳಿಸಿದೆ.
ಅಕ್ಟೋಬರ್ 1 ರಂದು ಮಧ್ಯಾಹ್ನ 14:50 ಕ್ಕೆ ವಾರಾಣಸಿಯಿಂದ ಮುಂಬೈಗೆ ಹಾರಲು ನಿಗದಿಯಾಗಿದ್ದ ಆಕಾಶ ಏರ್ ವಾರಾಣಸಿ ಫ್ಲೈಟ್ ಕ್ಯೂಪಿ 1497, ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಿದೆ.
ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ನಲ್ಲಿ ತುರ್ತು ಭೂಸ್ಪರ್ಶ
ನಂತರ, ವಿಮಾನವನ್ನು ಕಾರ್ಯಾಚರಣೆಗಾಗಿ ಬಿಡುಗಡೆ ಮಾಡಲಾಯಿತು, ಆಕಾಶ ಏರ್ ತನ್ನ ತಂಡವು ಪ್ರಯಾಣಿಕರಿಗೆ ಉಪಾಹಾರ ವ್ಯವಸ್ಥೆಯನ್ನು ಕೂಡ ಮಾಡಿತ್ತು. ವಿಮಾನವು ರಾತ್ರಿ 8:06 ಕ್ಕೆ ಹೊರಟಿತು ಎಂದು ಅದು ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ