ಯಾವ ಸಹಾಯವನ್ನೂ ಮಾಡದ ನಿಮ್ಮದು ಇದೆಂಥಾ ಸರ್ಕಾರ?- ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಶ್ನೆ

ಸರ್ಕಾರ ರಚಿಸಿದರೆ ಸಾಕಾಗದು, ಸಂಕಷ್ಟದಲ್ಲಿರುವ ಜನರಿಗೆ ಸಹಕಾರ ನೀಡಬೇಕು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಯಾವ ಸಹಾಯವನ್ನೂ ಮಾಡದ ನಿಮ್ಮದು ಇದೆಂಥಾ ಸರ್ಕಾರ?- ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಶ್ನೆ
ರಾಹುಲ್​ ಗಾಂಧಿ
Follow us
TV9 Web
| Updated By: Lakshmi Hegde

Updated on: Nov 24, 2021 | 4:52 PM

ಪ್ರತಿದಿನವೂ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಆಯಾ ದಿನದ ಕೊವಿಡ್​ 19 ಕೇಸ್​​ಗಳ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡುತ್ತಿದೆ. ಒಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳು, ಸೋಂಕಿನಿಂದ ಸತ್ತವರ ಸಂಖ್ಯೆ, ಒಟ್ಟಾರೆ ಸೋಂಕಿತರ ಸಂಖ್ಯೆ, ಚೇತರಿಕೆ ರೇಟ್​ ಹೀಗೆ ಸಮಗ್ರ ಮಾಹಿತಿಯನ್ನೂ ನೀಡುತ್ತಿದೆ. ಆದರೆ ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳು ಈ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಅನುಮಾನ ವ್ಯಕ್ತಪಡಿಸುತ್ತ ಬಂದಿವೆ. ಕೇಂದ್ರ ಸರ್ಕಾರ ಸರಿಯಾದ ಡಾಟಾವನ್ನು ನೀಡುತ್ತಿಲ್ಲ ಎಂಬುದು ವಿಪಕ್ಷಗಳ ಆರೋಪ. ಈಗ ಕೂಡ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಕೊವಿಡ್​ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್​ ಗಾಂಧಿ ಕಾಂಗ್ರೆಸ್​ ಪಕ್ಷದ ಎರಡು ಬೇಡಿಕೆಗಳಿವೆ ಎಂದು ಹೇಳಿದ್ದಾರೆ. ಒಂದನೇಯದು, ಕೊವಿಡ್​ 19ನಿಂದ ಮೃತಪಟ್ಟವರ ನೈಜವಾದ ಅಂಕಿ-ಸಂಖ್ಯೆಯನ್ನುತಿಳಿಸಬೇಕು. ಎರಡನೇದಾಗಿ ಕೊವಿಡ್​19ನಿಂದ ಮೃತರಾದವರ ಕುಟುಂಬಕ್ಕೆ  4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ರಚಿಸಿದರೆ ಸಾಕಾಗದು, ಸಂಕಷ್ಟದಲ್ಲಿರುವ ಜನರಿಗೆ ಸಹಕಾರ ನೀಡಬೇಕು ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.  ಹಾಗೇ, ಒಂದು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಗುಜರಾತ್​ ಮಾದರಿಯಲ್ಲಿ ಅಭಿವೃದ್ಧಿಯೆಂಬುದು ಇತರ ರಾಜ್ಯಗಳಿಗೆ ಮಾನದಂಡವಾಗಬೇಕು ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಆದರೆ ಕೊವಿಡ್​ನಿಂದ ತತ್ತರಿಸುತ್ತಿರುವ ಜನರು ಆಸ್ಪತ್ರೆಗಳಲ್ಲಿ ಬೆಡ್​ಗಳಿಲ್ಲದೆ ಪರದಾಡುತ್ತಿದ್ದಾಗ ನೀವ್ಯಾರೂ ಸಹಾಯಕ್ಕೆ ಬಂದಿಲ್ಲ.. ಜನರು ತಮ್ಮ ಪ್ರೀತಿಪಾತ್ರರಿಗೆ ಚಿಕಿತ್ಸೆ ಕೊಡಿಸಲು 10-15 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬಂದಾಗಲೂ ನೀವು ನೆರವು ನೀಡಲಿಲ್ಲ. ಇದೀಗ ಮೃತರ ಕುಟುಂಬಕ್ಕೆ ಯೋಗ್ಯ ರೀತಿಯಲ್ಲಿ ಪರಿಹಾರ ನೀಡಲೂ ಮುಂದಾಗುತ್ತಿಲ್ಲ. ನಿಮ್ಮದು ಇದ್ಯಾವ ಮಾದರಿಯ ಸರ್ಕಾರ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪರಿಷತ್ ಚುನಾವಣೆ: ಜೆಡಿಎಸ್, ಬಿಜೆಪಿ ಹೊಂದಾಣಿಕೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ- ಬಿಎಸ್ ಯಡಿಯೂರಪ್ಪ ಹೇಳಿಕೆ