ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಮೋದಿ ಸರ್ಕಾರ ರದ್ದು ಮಾಡುವ ಸಾಧ್ಯತೆ ಎಂಬ ಮಾಧ್ಯಮ ವರದಿ ಸುಳ್ಳು

ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಪಡಿಸುವ ಸಾಧ್ಯತೆಯಿದೆ ಮತ್ತು ಅದನ್ನು ವಿಲೀನಗೊಳಿಸುತ್ತದೆ ಎಂದು ಡೆಕ್ಕನ್ ಹೆರಾಲ್ಡ್​ನಲ್ಲಿ ಪ್ರಕಟವಾದ ಮಾಧ್ಯಮ ವರದಿ ಸುಳ್ಳು ಎಂದು ಟ್ವೀಟ್ ಮಾಡಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಮೋದಿ ಸರ್ಕಾರ ರದ್ದು ಮಾಡುವ ಸಾಧ್ಯತೆ ಎಂಬ ಮಾಧ್ಯಮ ವರದಿ ಸುಳ್ಳು
Edited By:

Updated on: Oct 03, 2022 | 6:30 PM

2006 ರಲ್ಲಿ ಯುಪಿಎ (UPA) ಸರ್ಕಾರ ಸ್ಥಾಪಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು(Ministry of Minority Affairs ) ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸುವ ಸಾಧ್ಯತೆಯಿದೆ. ಈ ಸಚಿವಾಲಯವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದೊಂದಿಗೆ ವಿಲೀನಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿರುವ ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾದುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು. ಈ ವರದಿಯ ಚಿತ್ರವನ್ನು ಟ್ವೀಟ್ ಮಾಡಿದ ಪಿಐಬಿ ಫ್ಯಾಕ್ಟ್ ಚೆಕ್, ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಪಡಿಸುವ ಸಾಧ್ಯತೆಯಿದೆ ಮತ್ತು ಅದನ್ನು ವಿಲೀನಗೊಳಿಸುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ನಲ್ಲಿ ಪ್ರಕಟವಾದ ಮಾಧ್ಯಮ ವರದಿ ಸುಳ್ಳು ಎಂದು ಟ್ವೀಟ್ ಮಾಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಪ್ರಸ್ತುತ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಜುಲೈನಲ್ಲಿ ತಮ್ಮ ರಾಜ್ಯಸಭೆಯ ಅವಧಿ ಮುಗಿದ ನಂತರ ರಾಜೀನಾಮೆ ನೀಡಿದರು. ಮೋದಿ ಸರ್ಕಾರದಲ್ಲಿದ್ದ ಏಕೈಕ ಮುಸ್ಲಿಂ ನಾಯಕರಾಗಿದ್ದರು ನಖ್ವಿ.

Published On - 6:20 pm, Mon, 3 October 22