ಚೆನ್ನೈ: ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆ ಬಳ್ಳಾರಿಯಲ್ಲಿ ಅಮಾನವೀಯವಾಗಿ ಕೊರೊನಾ ಸೋಂಕಿತರ ಅಂತ್ಯಸಂಸ್ಕಾರ ನಡೆಸಿದ್ದಾರೆ. ಯಾವುದೇ ಗೌರವವಿಲ್ಲದೆ ಸೋಂಕಿತರ ಮೃತದೇಹಗಳನ್ನು ದರದರನೆ ಎಳೆದು ಒಂದೇ ಗುಂಡಿಗೆ ಹಾಕಿದ್ದಾರೆ. ಇನ್ನು ಯಾದಗಿರಿ ಜಿಲ್ಲೆಯಲ್ಲೂ ಸಹ ಅಂಥದ್ದೇ ಒಂದು ಘಟನೆ ನಡೆದಿದೆ. ಸೋಂಕಿತನ ಶವವನ್ನು ಕಟ್ಟಿಗೆಗೆ ಕಟ್ಟಿ ಗುಂಡಿಗೆ ಹಾಕಿದ್ದಾರೆ. ಇದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಆದ್ರೆ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸೋಂಕಿತರ ಅಂತ್ಯಕ್ರಿಯೆಗಾಗಿಯೇ ಹೊಸ ಯಂತ್ರವನ್ನು ಕಂಡುಹಿಡಿದಿದ್ದಾರೆ. ಚೆನ್ನೈ ಮೂಲದ MAUTO ಎಲೆಕ್ಟ್ರಿಕ್ ಮೊಬೈಲಿಟಿ ಮತ್ತು Zafi Robots ಈ ಆವಿಷ್ಕಾರವನ್ನು ಮಾಡಿವೆ. ಕೊರೊನಾದಿಂದ ಸತ್ತ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಯಾರ ಮಾನವರ ಸಹಾಯವಿಲ್ಲದೆ ಈ ಯಂತ್ರಗಳೇ ಮಾಡಲಿವೆ. ಆ್ಯಂಬುಲೆನ್ಸ್ನಿಂದ ನೇರವಾಗಿ ಯಂತ್ರದ ಮೇಲೆ ಸೋಂಕಿತರ ಶವವಿಟ್ರೆ, ಆ ಯಂತ್ರವು ನೇರವಾಗಿ ಗುಂಡಿಯೊಳಗೆ ಹಾಕುತ್ತದೆ. ಇದರಿಂದ ಯಾರೂ ಸಹ ಮೃತದೇಹವನ್ನು ಮುಟ್ಟುವ ಅವಶ್ಯಕತೆ ಇರುವುದಿಲ್ಲ.
#WATCH Tamil Nadu: 2 Chennai based companies MAUTO Electric Mobility & Zafi Robots claim that they have developed a 'rescuer ambulance' which can be used to cremate and bury people who have died due to #COVID19, without any human intervention. (In video, a model of the ambulance) pic.twitter.com/6fqKXoEPMs
— ANI (@ANI) June 30, 2020