ನೈವೇಲಿ ಥರ್ಮಲ್ ಘಟಕದಲ್ಲಿ ಬಾಯ್ಲರ್ ಸ್ಫೋಟ, 6 ಮಂದಿ ಸಾವು
ಚೆನ್ನೈ: ಕೊರೊನಾ ಸಂಕಷ್ಟದ ನಡುವೆ ಕೈಗಾರಿಕಾ ಅವಗಡಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಶಾಖಪಟ್ಟಣಂ ಮಹಾದುರಂತ ಸೇರಿದಂತೆ ಮೂರ್ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದರಿಂದ ಅಮಾಯಕ ಜೀವಗಳು ಬಲಿಯಾಗಿವೆ. ಮೂಕ ಪ್ರಾಣಿಗಳು ಸಹ ಜೀವ ತೆತ್ತಿವೆ. ಕೊರೊನಾ ಸಮಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ, ಲಾಕ್ಡೌನ್ ಮುಗಿದ ಬಳಿಕ ದಿಢೀರನೆ ಕೆಲಸ ಶುರು ಮಾಡಿದಾಗ ಸರಿಯಾದ ಮೈಂಟೆನೆನ್ಸ್ ಇಲ್ಲದೆ ಕೈಗಾರಿಕೆಗಳಲ್ಲಿ ಇಂತಹ ಅಚಾತುರ್ಯಗಳು ಸಂಭವಿಸುತ್ತಿವೆ. ಇದೇ ರೀತಿ ತಮಿಳುನಾಡಿನಲ್ಲಿ ನೈವೇಲಿ ಥರ್ಮಲ್ ಪ್ಲಾಂಟ್‌ನ ಘಟಕ 5 ಬಾಯ್ಲರ್ನಲ್ಲಿ ಸ್ಫೋಟಗೊಂಡು 6 ಮಂದಿ ಮೃತಪಟ್ಟಿರುವ […]
ಚೆನ್ನೈ: ಕೊರೊನಾ ಸಂಕಷ್ಟದ ನಡುವೆ ಕೈಗಾರಿಕಾ ಅವಗಡಗಳು ಹೆಚ್ಚಾಗಿ ವರದಿಯಾಗುತ್ತಿವೆ. ವಿಶಾಖಪಟ್ಟಣಂ ಮಹಾದುರಂತ ಸೇರಿದಂತೆ ಮೂರ್ನಾಲ್ಕು ಪ್ರಕರಣಗಳು ವರದಿಯಾಗಿವೆ. ಇದರಿಂದ ಅಮಾಯಕ ಜೀವಗಳು ಬಲಿಯಾಗಿವೆ. ಮೂಕ ಪ್ರಾಣಿಗಳು ಸಹ ಜೀವ ತೆತ್ತಿವೆ. ಕೊರೊನಾ ಸಮಯದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ, ಲಾಕ್ಡೌನ್ ಮುಗಿದ ಬಳಿಕ ದಿಢೀರನೆ ಕೆಲಸ ಶುರು ಮಾಡಿದಾಗ ಸರಿಯಾದ ಮೈಂಟೆನೆನ್ಸ್ ಇಲ್ಲದೆ ಕೈಗಾರಿಕೆಗಳಲ್ಲಿ ಇಂತಹ ಅಚಾತುರ್ಯಗಳು ಸಂಭವಿಸುತ್ತಿವೆ.
ಇದೇ ರೀತಿ ತಮಿಳುನಾಡಿನಲ್ಲಿ ನೈವೇಲಿ ಥರ್ಮಲ್ ಪ್ಲಾಂಟ್‌ನ ಘಟಕ 5 ಬಾಯ್ಲರ್ನಲ್ಲಿ ಸ್ಫೋಟಗೊಂಡು 6 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಹಾಗೂ ಸ್ಫೋಟದಿಂದ 17 ಜನರಿಗೆ ಗಾಯಗಳಾಗಿವೆ. ಇದೇ ಪ್ಲಾಂಟ್‌ನಲ್ಲಿ ಮೇ 7 ರಂದು ಸಹ ಸ್ಫೋಟ ಸಂಭವಿಸಿತ್ತು. ಇದು ಎರಡನೇ ಬಾರಿಗೆ ಸ್ಫೋಟಗೊಳ್ಳುತ್ತಿರುವುದು.
ಇಂದು ಬೆಳಿಗ್ಗೆ ಕಾರ್ಮಿಕರು ಕೆಲಸವನ್ನು ಪುನರಾರಂಭ ಮಾಡುವಾಗ ಈ ಅವಗಢ ಸಂಭವಿಸಿದೆ. ಮೃತರು ಗುತ್ತಿಗೆ ಕಾರ್ಮಿಕರು ಎಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನು ಎನ್‌ಎಲ್‌ಸಿ ಲಿಗ್ನೈಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 7 ರ ಘಟನೆಯಂತೆಯೇ ಅತಿಯಾದ ಉಷ್ಣತೆ ಮತ್ತು ಅಧಿಕ ಒತ್ತಡವು ಸ್ಫೋಟಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.