
ನವದೆಹಲಿ, ಮಾರ್ಚ್ 25: ಕಮರ್ಷಿಯಲ್ ಎಲ್ಪಿಜಿಯ ಬಿಕ್ಕಟ್ಟು (LPG Crisis) ಶುರುವಾದಾಗಿನಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಅಡುಗೆ ಮಾಡಲು ಪರದಾಡುತ್ತಿವೆ. ಕೆಲವು ರೆಸ್ಟೋರೆಂಟ್ಗಳು ಬಾಯ್ಲರ್, ಎಲೆಕ್ಟ್ರಿಕ್ ಸ್ಟೌವ್ಗಳನ್ನು ಬಳಸುತ್ತಿವೆ. ಕೆಲವು ಹೋಟೆಲ್ಗಳಲ್ಲಿ ಗ್ಯಾಸ್ ಅಭಾವದ ನೆಪ ಹೇಳಿ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ (CCPA) ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ಒಂದುವೇಳೆ ನೀವು ಹೋಗುವ ಹೋಟೆಲ್ ಬಿಲ್ಗಳಲ್ಲಿ ಗ್ಯಾಸ್ ಚಾರ್ಜ್ ಅಥವಾ ಎಲ್ಪಿಜಿ ಚಾರ್ಜ್ ಎಂದು ನಮೂದಿಸಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ರೀತಿ ಹಣ ವಸೂಲಿ ಮಾಡುವುದು ಅಕ್ರಮ. ಗ್ಯಾಸ್ ಸರ್‌ಚಾರ್ಜ್, ಇಂಧನ ರಿಕವರಿ ಹೆಸರಿನಲ್ಲಿ ಬಿಲ್ ಮಾಡೋದು ಶಿಕ್ಷಾರ್ಹ ಅಪರಾಧ. ಮೆನುವಿನಲ್ಲಿ ಉಲ್ಲೇಖಿಸಲಾದ ಬೆಲೆಗೆ ಅನ್ವಯವಾಗುವ ತೆರಿಗೆಗಳನ್ನು ಮಾತ್ರ ಸೇರಿಸಬಹುದು ಎಂದು ಸೂಚಿಸಿದೆ. ಹೆಚ್ಚುವರಿ ಶುಲ್ಕದಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗುತ್ತದೆ. ಆಹಾರದ ಬೆಲೆಯಲ್ಲೇ ವೆಚ್ಚ ಸೇರಿರಬೇಕು ಎಂದು ಸಿಸಿಪಿಎ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಮನೆಯಲ್ಲಿ ಪಿಎನ್ಜಿ ಕನೆಕ್ಷನ್ ಇದ್ದರೂ ಬಳಸದಿದ್ದರೆ ಎಲ್ಪಿಜಿ ಪೂರೈಕೆ ಸ್ಥಗಿತ; ಸರ್ಕಾರದಿಂದ ಎಚ್ಚರಿಕೆ
ಇಂಧನ, LPG, ವಿದ್ಯುತ್ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳಂತಹ ಇನ್‌ಪುಟ್ ವೆಚ್ಚಗಳು ವ್ಯವಹಾರವನ್ನು ನಡೆಸುವ ವೆಚ್ಚದ ಭಾಗವಾಗಿದೆ. ಅದು ಮೆನು ಐಟಂಗಳ ಬೆಲೆಯಲ್ಲಿ ಸೇರಿಸಬೇಕು ಎಂದು CCPA ಸ್ಪಷ್ಟಪಡಿಸಿದೆ.
ಆಹಾರದ ಬೆಲೆಯಲ್ಲೇ ಇಂಧನ ಮತ್ತು ಸೇವೆಯ ವೆಚ್ಚ ಸೇರಿರಬೇಕೆಂದು ಸೂಚಿಸಲಾಗಿದೆ. ಬೆಲೆ ಮತ್ತು ಅನ್ವಯವಾಗುವ ತೆರಿಗೆ ಹೊರತುಪಡಿಸಿ ಬೇರೆ ಶುಲ್ಕ ವಿಧಿಸುವಂತಿಲ್ಲ. ಗ್ಯಾಸ್ ದರ ಏರಿಕೆಯ ನೆಪವೊಡ್ಡಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕದಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಹಾಗೇ, ಕಾನೂನಿನಿಂದ ಪಾರಾಗಲು ಹೊಸ ಹೆಸರಲ್ಲಿ ಹಣ ಪಡೆಯುವುದು ಕೂಡ ಅಪರಾಧವಾಗಿದೆ. ಸೇವಾ ಶುಲ್ಕದ ನಿಯಮ ತಪ್ಪಿಸಲು ಹಣ ಪಡೆಯುವುದು ಅಪರಾಧ.
ಇದನ್ನೂ ಓದಿ: ಪಿಎನ್ಜಿ ಗ್ಯಾಸ್ಗೂ ಎಲ್ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್ಜಿ ಕನೆಕ್ಷನ್ ಪಡೆಯುವುದು ಹೇಗೆ?
ಹೆಚ್ಚು ಹಣ ಪಡೆದರೆ ನೀವೇನು ಮಾಡಬೇಕು?:
ಅನಗತ್ಯ ಚಾರ್ಜ್‌ಗಳ ವಿರುದ್ಧ ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ನೀಡಬಹುದು. ಹೆಲ್ಪ್ಲೈನ್ 1915 ಅಥವಾ ಇ-ಜಾಗೃತಿ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. ಡಿಸಿ ಅಥವಾ ಸಿಸಿಪಿಎಗೆ ಇ-ಮೇಲ್ ಮೂಲಕವೂ ದೂರು ನೀಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 pm, Wed, 25 March 26