AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಪಿಎನ್​ಜಿ ಕನೆಕ್ಷನ್ ಇದ್ದರೂ ಬಳಸದಿದ್ದರೆ ಎಲ್​ಪಿಜಿ ಪೂರೈಕೆ ಸ್ಥಗಿತ; ಸರ್ಕಾರದಿಂದ ಎಚ್ಚರಿಕೆ

ಇರಾನ್ ಹಾಗೂ ಇಸ್ರೇಲ್-ಅಮೆರಿಕದ ನಡುವೆ ಯುದ್ಧ ಆರಂಭವಾದಾಗಿನಿಂದ ಭಾರತದಲ್ಲೂ ಇಂಧನ, ಗ್ಯಾಸ್​ ಬಿಕ್ಕಟ್ಟು ಎದುರಾಗಿದೆ. ಇದೀಗ ಹಾರ್ಮುಜ್ ಜಲಸಂಧಿಯ ಮೂಲಕ ಭಾರತದ ತೈಲ ಟ್ಯಾಂಕರ್​ಗಳ ಸಾಗಾಟಕ್ಕೆ ಇರಾನ್ ಅನುಮತಿ ನೀಡಿದ್ದರೂ ಎಲ್​ಪಿಜಿ ಬಿಕ್ಕಟ್ಟು ಪೂರ್ತಿಯಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇನ್ನುಮುಂದೆ ಪಿಎನ್​ಜಿ ಸಂಪರ್ಕ ಇರುವವರು ಎಲ್​ಪಿಜಿಯನ್ನು ಬಳಸುವಂತಿಲ್ಲ. ಪಿಎನ್​ಜಿ ಬಳಸದಿದ್ದರೆ ಎಲ್​ಪಿಜಿ ಪೂರೈಕೆಯೂ ಸ್ಥಗಿತಗೊಳ್ಳುತ್ತದೆ. ಹೀಗಾಗಿ, ಇನ್ಮುಂದೆ ಪಿಎನ್​ಜಿ ಸಂಪರ್ಕ ಬಳಸುವುದು ಅಥವಾ ಬಿಡುವುದು ನಿಮ್ಮ ಇಚ್ಛೆಗೆ ಬಿಟ್ಟ ವಿಷಯವಾಗಿರುವುದಿಲ್ಲ. ನಿಮ್ಮ ಏರಿಯಾದಲ್ಲಿ ಪಿಎನ್​ಜಿ ಪೈಪ್ ಲೈನ್ ಇದ್ದರೆ ನೀವು ಅದನ್ನು ಬಳಸಲೇಬೇಕು. ಈ ಸಂಪರ್ಕ ಪಡೆಯಲು 3 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.

ಮನೆಯಲ್ಲಿ ಪಿಎನ್​ಜಿ ಕನೆಕ್ಷನ್ ಇದ್ದರೂ ಬಳಸದಿದ್ದರೆ ಎಲ್​ಪಿಜಿ ಪೂರೈಕೆ ಸ್ಥಗಿತ; ಸರ್ಕಾರದಿಂದ ಎಚ್ಚರಿಕೆ
Lpg CylindersImage Credit source: PTI
ಸುಷ್ಮಾ ಚಕ್ರೆ
|

Updated on:Mar 25, 2026 | 4:36 PM

Share

ನವದೆಹಲಿ, ಮಾರ್ಚ್ 25: ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಇಂಧನ ಹಾಗೂ ಎಲ್​ಪಿಜಿ ಸಂಗ್ರಹವಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಎಲ್​ಪಿಜಿ (LPG) ಬುಕ್ ಮಾಡಿದ ಹಲವು ದಿನಗಳ ಬಳಿಕ ಸಿಲಿಂಡರ್​ಗಳು ಸಿಗುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಪೈಪ್ಡ್ ಗ್ಯಾಸ್ (ಪಿಎನ್​ಜಿ) ಕನೆಕ್ಷನ್ ಇದ್ದರೂ ನೀವು ಅದನ್ನು ಬಳಸದಿದ್ದರೆ ನಿಮ್ಮ ಎಲ್​ಪಿಜಿ ಪೂರೈಕೆ ಕೂಡ ಕಟ್ ಆಗುತ್ತದೆ. ಪಿಎನ್​ಜಿ ಹಾಗೂ ಎಲ್​ಪಿಜಿ ಎರಡನ್ನೂ ಬಳಸುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಮ್ಮ ಏರಿಯಾದಲ್ಲಿ ಪೈಪ್​ಲೈನ್ ಇದ್ದರೂ ನೀವು ಸಂಪರ್ಕ ಪಡೆಯದಿದ್ದರೆ 3 ತಿಂಗಳೊಳಗೆ ಸಂಪರ್ಕ ಪಡೆಯಲು ಗಡುವು ನೀಡಲಾಗಿದೆ. ಈ ಕುರಿತು ನೋಟಿಸ್ ಮೂಲಕ ಆ ಮನೆಯ ಗಮನಕ್ಕೆ ತಂದ 3 ತಿಂಗಳ ನಂತರ ಆ ಮನೆಗಳಿಗೆ ಎಲ್​ಪಿಜಿ ಪೂರೈಕೆಯನ್ನು ನಿಲ್ಲಿಸಲಾಗುತ್ತದೆ.

ಗ್ರಾಹಕರು ಪೈಪ್ಡ್ ನೈಸರ್ಗಿಕ ಅನಿಲ (PNG)ದ ಕನೆಕ್ಷನ್ ಇದ್ದರೂ ಬಳಸದಿದ್ದರೆ 3 ತಿಂಗಳ ನಂತರ ಆ ಮನೆಗಳಿಗೆ LPG ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಪೈಪ್‌ಲೈನ್ ಗ್ಯಾಸ್ ಜಾಲದ ವಿಸ್ತರಣೆಯನ್ನು ವೇಗಗೊಳಿಸಲು ಮತ್ತು ಒಂದೇ ಇಂಧನ ಮೂಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೂ ತಟ್ಟಿದ LPG ಅಭಾವ: ಕರಾವಳಿ ಖಾದ್ಯಗಳಿಗೆ ಬ್ರೇಕ್; ಪ್ರವಾಸಿಗರಿಗೆ ನಿರಾಶೆ​

ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳು PNG ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇದನ್ನು ಪೈಪ್‌ಲೈನ್‌ಗಳ ಮೂಲಕ ಅಡುಗೆಮನೆಯ ಬರ್ನರ್‌ಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಇದು ಗ್ಯಾಸ್ ಬುಕಿಂಗ್ ರೀಫಿಲ್ಲಿಂಗ್ ಅಗತ್ಯವನ್ನು ನಿವಾರಿಸುತ್ತದೆ. ಪೈಪ್‌ಲೈನ್‌ಗಳಿಲ್ಲದ ಪ್ರದೇಶಗಳಿಗೆ LPG ಅನ್ನು ಪೂರೈಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಪೈಪ್‌ಲೈನ್‌ಗಳನ್ನು ಹಾಕಲು ಅನುಮತಿಗಳನ್ನು ಇನ್ನು ನಿಗದಿತ ಸಮಯದೊಳಗೆ ನೀಡಬೇಕು. ಒಂದುವೇಳೆ ನೀವು ಅನುಮತಿ ನೀಡದಿದ್ದರೆ ಅವುಗಳನ್ನು ಅನುಮೋದಿಸಲಾಗಿದೆ ಎಂದೇ ಪರಿಗಣಿಸಲಾಗುತ್ತದೆ. ಅಧಿಕಾರಿಗಳು ಸೂಚಿಸಿದ ಶುಲ್ಕಗಳನ್ನು ಮೀರಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದನ್ನು ನಿಷೇಧಿಸಲಾಗಿದೆ. ವಸತಿ ಸಂಕೀರ್ಣಗಳಲ್ಲಿ 3 ಕೆಲಸದ ದಿನಗಳಲ್ಲಿ ಒಳಗೆ ಪ್ರವೇಶವನ್ನು ನೀಡಬೇಕು, ಪಿಎನ್​ಜಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ ಎಂದು ಕೂಡ ಸರ್ಕಾರ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Wed, 25 March 26

Follow Us
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
Video: ಟೆಕ್ ಸ್ಯಾವಿ ಮಂಗನ ಸೆಲ್ಫೀ ಕ್ರೇಜ್! ವಿಡಿಯೋ ವೈರಲ್
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ: ಸಿದ್ದರಾಮಯ್ಯ
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಬಳಕೆಯ LPG ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಉದ್ದದ ಕ್ಯೂ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಬೆಂಗಳೂರಿಗರೇ ಪೆಟ್ರೋಲ್-ಡೀಸೆಲ್ ಸಮಸ್ಯೆ ಎದುರಿಸಲು ಸಿದ್ಧರಾಗಿ!
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಕಾಂಗ್ರೆಸ್​ನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡವ್ರೆ: ಸಾದಿಕ್ ಪೈಲ್ವಾನ್ ಕಿಡಿ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಆಟೋದಲ್ಲಿ ಮಕ್ಕಳ ಅಪಹರಿಸಲು ಯತ್ನ, ಚಲಿಸುತ್ತಿರುವ ವಾಹನದಿಂದ ಹಾರಿದ ಮಕ್ಕಳು
ಆಟೋದಲ್ಲಿ ಮಕ್ಕಳ ಅಪಹರಿಸಲು ಯತ್ನ, ಚಲಿಸುತ್ತಿರುವ ವಾಹನದಿಂದ ಹಾರಿದ ಮಕ್ಕಳು