ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದೆ ಎಲ್‌ಪಿಜಿ ಹೊತ್ತ 2 ಹಡಗುಗಳು
ಭಾರತೀಯ ನೌಕಾಪಡೆಯು ಹಡಗನ್ನು ಬೆಂಗಾವಲು ಮಾಡುತ್ತಿದೆ. ಇದರ ನಡುವೆ ಹಾರ್ಮುಜ್ ಜಲಸಂಧಿಯನ್ನು ದಾಟಿದ ಪೈನ್ ಗ್ಯಾಸ್ ಎಲ್‌ಪಿಜಿ ವಾಹಕದ ಮೊದಲ ದೃಶ್ಯಗಳು ವೈರಲ್ ಆಗಿವೆ. ಈ ಹಡಗುಗಳು ಭಾರತಕ್ಕೆ ಬರಲಿವೆ ಮತ್ತು ಮಾರ್ಚ್ 26 ಮತ್ತು 28, 2026 ರ ನಡುವೆ ಬಂದರುಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ. ಜಗ್ ವಸಂತ್ ಹಡಗಿನಲ್ಲಿ 33 ಮತ್ತು ಪೈನ್ ಗ್ಯಾಸ್ ಹಡಗಿನಲ್ಲಿ 27 ಭಾರತೀಯ ನಾವಿಕರು ಇದ್ದಾರೆ.
ನವದೆಹಲಿ, ಮಾರ್ಚ್ 24: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ಯುದ್ಧದ ನಡುವೆ ಮತ್ತೆರಡು ಎಲ್‌ಪಿಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿ ಭಾರತದತ್ತ ಆಗಮಿಸುತ್ತಿವೆ. ಹೀಗಾಗಿ, ದೇಶದಲ್ಲಿ ಎಲ್‌ಪಿಜಿ ಬಿಕ್ಕಟ್ಟಿನ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. 92,612.59 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಎರಡು ಭಾರತೀಯ ಎಲ್‌ಪಿಜಿ ವಾಹಕಗಳಾದ ಜಗ್ ವಸಂತ್ ಮತ್ತು ಪೈನ್ ಗ್ಯಾಸ್ ಹಾರ್ಮುಜ್ ಜಲಸಂಧಿಯ ಮೂಲಕ ಭಾರತದತ್ತ ಸಾಗಿವೆ. ಜಗ್ ವಸಂತ್ ಹಡಗಿನಲ್ಲಿ 33 ಮತ್ತು ಪೈನ್ ಗ್ಯಾಸ್ ಹಡಗಿನಲ್ಲಿ 27 ಭಾರತೀಯ ನಾವಿಕರು ಇದ್ದಾರೆ. ಈ ಹಡಗುಗಳು ಮಾರ್ಚ್ 26 ಮತ್ತು 28ರ ನಡುವೆ ಭಾರತದ ಬಂದರುಗಳನ್ನು ತಲುಪುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Mar 24, 2026 04:08 PM
Follow Us

