AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಮಾಗಿ ನಕ್ಸಲರನ್ನು ಸೋಲಿಸುವುದೇ ಮುಂದಿನ ಗುರಿ: ರಾಹುಲ್ ಗಾಂಧಿ ಟೀಕೆಗೆ ಕಿರಣ್ ರಿಜಿಜು ತಿರುಗೇಟು

ಕಿರಣ್ ರಿಜಿಜು ರಾಹುಲ್ ಗಾಂಧಿಗೆ ತಿರುಗೇಟು ನೀಡಿ, ಸಶಸ್ತ್ರ ನಕ್ಸಲಿಸಂ ನಿಯಂತ್ರಣ ಮೋದಿ ಸರ್ಕಾರದ ಸಾಧನೆ ಎಂದಿದ್ದಾರೆ. ಈಗ 'ದಿಮಾಗಿ ನಕ್ಸಲರ' ಸೋಲು ಮುಂದಿನ ಗುರಿ ಎಂದರು. ಮೋದಿ ಅವರ ಈ ಪದವನ್ನು ರಾಹುಲ್ ಗಾಂಧಿ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಳಸಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ದಿಮಾಗಿ ನಕ್ಸಲರನ್ನು ಸೋಲಿಸುವುದೇ ಮುಂದಿನ ಗುರಿ: ರಾಹುಲ್ ಗಾಂಧಿ ಟೀಕೆಗೆ ಕಿರಣ್ ರಿಜಿಜು ತಿರುಗೇಟು
ಕಿರಣ್ ರಿಜಿಜುImage Credit source: PTI
ನಯನಾ ರಾಜೀವ್
|

Updated on: Nov 10, 2026 | 5:19 PM

Share

ನವದೆಹಲಿ, ನವೆಂಬರ್ 10: ದೇಶದಲ್ಲಿ ಸಶಸ್ತ್ರ ನಕ್ಸಲಿಸಂ ಅನ್ನು ನಿಯಂತ್ರಣಕ್ಕೆ ತಂದಿರುವುದೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಇದರ ಬೆನ್ನಲ್ಲೇ, ಮುಂದಿನ ಗುರಿ “ದಿಮಾಗಿ ನಕ್ಸಲರನ್ನು” ಸೋಲಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ “ದಿಮಾಗಿ ನಕ್ಸಲರು” ಎಂಬ ಹೇಳಿಕೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ರಿಜಿಜು ಈ ಮೂಲಕ ತಿರುಗೇಟು ನೀಡಿದ್ದಾರೆ.

ರಿಜಿಜು ತಮ್ಮ ಎಕ್ಸ್‌ ಖಾತೆಯಲ್ಲಿ, “ಸಶಸ್ತ್ರ ಮಾವೋವಾದಿಗಳನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಗೆ ಧನ್ಯವಾದ ಹೇಳಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ನಕ್ಸಲಿಸಂ ಅನ್ನು ದೇಶದ ಅತಿದೊಡ್ಡ ಆಂತರಿಕ ಭದ್ರತಾ ಬೆದರಿಕೆ ಎಂದು ಹೇಳಿದ್ದರು. ಈಗ ಮುಂದಿನ ಗುರಿ ದಿಮಾಗಿ ನಕ್ಸಲರನ್ನು ಸೋಲಿಸುವುದು” ಎಂದು ಬರೆದಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ನವೆಂಬರ್ 8ರಂದು ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕಾಡುಗಳಲ್ಲಿ ಸಶಸ್ತ್ರ ನಕ್ಸಲರು ಇಲ್ಲದಂತಾಗಿದ್ದಾರೆ. ಆದರೆ, ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿ “ದಿಮಾಗಿ ನಕ್ಸಲರು” ಸೇರಿಕೊಂಡಿದ್ದಾರೆ. ಇವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.ಇಂತಹ ಶಕ್ತಿಗಳನ್ನು ಗುರುತಿಸಿ ಸೋಲಿಸುವ ಅಗತ್ಯವಿದೆ ಎಂದೂ ಮೋದಿ ಹೇಳಿದ್ದರು.

ಪ್ರಧಾನಿ ಮತ್ತೆ ಯೋಧರ ಮುಂದೆ ನಿಲ್ಲಲು ಸಾಧ್ಯವಾಗುವುದಿಲ್ಲ

ಚರ್ಚೆಯ ಬಳಿಕ ಪ್ರಧಾನಿ ಮೋದಿ ಒಬ್ಬ ಯೋಧನ ಮುಂದೆಯೂ ನಿಲ್ಲುವ ಧೈರ್ಯ ತೋರಿಸುವುದಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಈ ಮೂಲಕ ಮೋದಿ ಅವರ ಹೇಳಿಕೆಯನ್ನು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಳಸಲಾಗುತ್ತಿದೆ ಎಂಬ ಆಕ್ಷೇಪವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

‘ಭಾರತದ ಶತ್ರುಗಳ ಅಜೆಂಡಾವನ್ನು ರಾಹುಲ್ ಗಾಂಧಿ ಮುನ್ನಡೆಸುತ್ತಿದ್ದಾರೆ’; ಪ್ರಧಾನಿ ಮೋದಿ ವಿರುದ್ಧದ ಆರೋಪಕ್ಕೆ ಕಿರಣ್ ರಿಜಿಜು ತಿರುಗೇಟು

“ದಿಮಾಗಿ ನಕ್ಸಲ್” ಪದದ ಬಗ್ಗೆ ವಿವಾದವೇನು?

“ದಿಮಾಗಿ ನಕ್ಸಲ್” ಎಂಬ ಪದವನ್ನು ಪ್ರಧಾನಿ ಮೋದಿ ಸಶಸ್ತ್ರ ನಕ್ಸಲಿಸಂನ ಸೈದ್ಧಾಂತಿಕ ಬೆಂಬಲಿಗರು ಅಥವಾ ನಕ್ಸಲ್ ಮನಸ್ಥಿತಿಯುಳ್ಳವರು ಎಂಬ ಅರ್ಥದಲ್ಲಿ ಬಳಸಿದ್ದಾರೆ. ಆದರೆ, ಈ ಪದವನ್ನು ರಾಜಕೀಯ ವಿರೋಧಿಗಳು ಮತ್ತು ಸರ್ಕಾರದ ನೀತಿಗಳನ್ನು ಟೀಕಿಸುವವರನ್ನು ಗುರಿಯಾಗಿಸಲು ಬಳಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪಿಸಿವೆ.

ಇದಕ್ಕೂ ಮೊದಲು ಸ್ವಾತಂತ್ರ್ಯ ದಿನದ ಭಾಷಣದಲ್ಲಿಯೂ ಮೋದಿ ಈ ಪದವನ್ನು ಬಳಸಿದ್ದರು. ಹೀಗಾಗಿ, ನಕ್ಸಲಿಸಂ ವಿರುದ್ಧದ ಹೋರಾಟದ ವಿಚಾರ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ, ಸಶಸ್ತ್ರ ನಕ್ಸಲಿಸಂ ವಿರುದ್ಧದ ಕಾರ್ಯಾಚರಣೆಗಳ ಸಾಧನೆ ಮತ್ತು ಅದರ ನಂತರವೂ ಉಳಿದಿದೆ ಎನ್ನಲಾದ ಸೈದ್ಧಾಂತಿಕ ಬೆಂಬಲದ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ನಡುವೆ ಹೊಸ ರಾಜಕೀಯ ಸಂಘರ್ಷ ಆರಂಭವಾಗಿದೆ.

ಪೋಸ್ಟ್​

ಪ್ರಧಾನಿ ಹೇಳಿಕೆಗೆ ನವೆಂಬರ್ 9ರಂದು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಸಿಆರ್‌ಪಿಎಫ್ ಯೋಧರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದರು.ನಿಮ್ಮ ಮುಖಗಳೇ ಎಲ್ಲವನ್ನೂ ಹೇಳುತ್ತಿದ್ದವು. ಪ್ರಧಾನಿಯವರ ಮಾತುಗಳನ್ನು ನೀವು ನಂಬಲಿಲ್ಲ. ಅವರು ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ ಎಂದು ಬರೆದಿದ್ದರು.

ಅಲ್ಲದೆ, ಯಾರು ದೇಶವಿರೋಧಿಗಳು ಮತ್ತು ಯಾರು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯದ ಬಗ್ಗೆ ಪ್ರಧಾನಿ ತಮ್ಮೊಂದಿಗೆ ಬಹಿರಂಗ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದರು. ಈ ಚರ್ಚೆ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನಡೆಯಲಿ ಎಂದೂ ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More