ಮುಂಬೈ: ಮಕ್ಕಳಗೆ ಸಾಮಾನ್ಯವಾಗಿ ತಮ್ಮ ತಾಯಿಯ ಹಳೇ ಸೀರೆಯನ್ನು ಕಂಡರೆ ಕೂಡಲೇ ನೆನಪಾಗೋದು ಬಾಲ್ಯದಲ್ಲಿ ಆಕೆಯೊಂದಿಗೆ ಕಳೆದ ಆ ಮಧುರ ಕ್ಷಣಗಳು. ಹೌದು, ಅಮ್ಮನ ಹಳೇ ಸೀರೆ ಒಂಥರಾ ಮಧುರ ನೆನಪುಗಳ ಆಗರ. ಅಂಥದ್ದೇ ಒಂದು ಇಂಟರೆಸ್ಟಿಂಗ್ ನೆನಪನ್ನು ಮೆಲುಕು ಹಾಕುತ್ತಾ ಬಾಲಿವುಡ್ ನಟ ರಿತೇಶ್ ದೇಶಮುಖ್ ಮಾಡಿರುವ ಐಡಿಯಾ ನೋಡಿ!
ದೀಪಾವಳಿಯ ಅಂಗವಾಗಿ ರಿತೇಶ್ ತಮ್ಮ ತಾಯಿ ವೈಶಾಲಿ ದೇಶಮುಖ್ ತೊಡುತ್ತಿದ್ದ ಹಳೇ ಸೀರೆಯಿಂದ ಉಡುಪೊಂದನ್ನು ತಯಾರಿಸಿದ್ದಾರೆ. ತಮ್ಮ ತಾಯಿಯ ಆಗಸ ಬಣ್ಣದ ಸೀರೆಯಿಂದ ತಮಗೆ ಹಾಗೂ ತಮ್ಮ ಮಕ್ಕಳಿಗೆ ಹೊಸ ಕುರ್ತಾಗಳನ್ನು ಸ್ಟಿಚ್ ಮಾಡಿಸಿಕೊಂಡಿದ್ದಾರೆ.
ಹಳೇ ಸೀರೆಯಿಂದ ತಯಾರಿಸಿದ ಈ ಹೊಸ ಉಡುಪುಗಳನ್ನು ರಿತೀಶ್ ಹಾಗೂ ಅವರ ಮಕ್ಕಳು ಹಬ್ಬದ ದಿನದಂದು ಧರಿಸಿ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರುವ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ, ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ, ತಮ್ಮ ಟ್ವಿಟರ್ ಖಾತೆಯಲ್ಲಿ ಅಮ್ಮನ ಹಳೆಯ ಸೀರೆ ದೀಪಾವಳಿಯಂದು ಮಕ್ಕಳಿಗೆ ಹೊಸ ಬಟ್ಟೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
माँ की पुरानी साड़ी, बच्चों के लिए दिवाली के नए कपड़े। Happy Diwali …. shot by Baiko @geneliad – Song credit @sujoy_g #Recycle pic.twitter.com/hfSvLBXdjG
— Riteish Deshmukh (@Riteishd) November 14, 2020