ದೇಶದ ಆರ್ಥಿಕತೆ ಮೇಲೆ ಕೊರೊನಾ ಕರಿಛಾಯೆ: ತಾಂತ್ರಿಕ ಹಿಂಜರಿತದ ಸುಳಿಯಲ್ಲಿ ಭಾರತ

ದೆಹಲಿ: ಕೊರೊನಾ ಅಟ್ಟಹಾಸದಿಂದ ದೇಶ ಅಕ್ಷರಶಃ ನಲುಗಿ ಹೋಗಿದ್ದು ಅದರ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾದ ಲಾಕ್​ಡೌನ್​ನಿಂದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ನಡುವೆ, ಭಾರತೀಯ ರಿಸರ್ವ್​ ಬ್ಯಾಂಕ್​ನ ಅಧಿಕಾರಿಯೊಬ್ಬರು ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಕುಸಿತದ ಬಗ್ಗೆ ಮಾಹಿತಿ ನೀಡಿದ್ದಾರೆ. 2020-21ರ ಹಣಕಾಸು ವರ್ಷದ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಶೇ. 8.6 ರಷ್ಟು ಕುಸಿದಿದೆ ಎಂದು ಇತ್ತೀಚಿನ ಬಿಡುಗಡೆಯಾದ RBIನ ಮಾಸಿಕ ಬುಲೆಟಿನ್​ನಲ್ಲಿ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ. ಹೀಗಾಗಿ, ಭಾರತವು 2020-21ರ […]

ದೇಶದ ಆರ್ಥಿಕತೆ ಮೇಲೆ ಕೊರೊನಾ ಕರಿಛಾಯೆ: ತಾಂತ್ರಿಕ ಹಿಂಜರಿತದ ಸುಳಿಯಲ್ಲಿ ಭಾರತ
Follow us
KUSHAL V
|

Updated on: Nov 15, 2020 | 5:23 PM

ದೆಹಲಿ: ಕೊರೊನಾ ಅಟ್ಟಹಾಸದಿಂದ ದೇಶ ಅಕ್ಷರಶಃ ನಲುಗಿ ಹೋಗಿದ್ದು ಅದರ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾದ ಲಾಕ್​ಡೌನ್​ನಿಂದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ನಡುವೆ, ಭಾರತೀಯ ರಿಸರ್ವ್​ ಬ್ಯಾಂಕ್​ನ ಅಧಿಕಾರಿಯೊಬ್ಬರು ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಕುಸಿತದ ಬಗ್ಗೆ ಮಾಹಿತಿ ನೀಡಿದ್ದಾರೆ.

2020-21ರ ಹಣಕಾಸು ವರ್ಷದ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಶೇ. 8.6 ರಷ್ಟು ಕುಸಿದಿದೆ ಎಂದು ಇತ್ತೀಚಿನ ಬಿಡುಗಡೆಯಾದ RBIನ ಮಾಸಿಕ ಬುಲೆಟಿನ್​ನಲ್ಲಿ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ. ಹೀಗಾಗಿ, ಭಾರತವು 2020-21ರ ಮೊದಲಾರ್ಧದಲ್ಲಿ ತಾಂತ್ರಿಕ ಹಿಂಜರಿತದಿಂದ ಹೊಸ ಇತಿಹಾಸವನ್ನೇ ಸೃಷ್ಟಿಸುವ ಸಾಧ್ಯತೆಯಿದೆ. ಇದಲ್ಲದೆ, ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ (NSO) ಕಳೆದ ಆಗಸ್ಟ್​ನಲ್ಲಿ ಶೇ. 23.9 ರಷ್ಟು ಜಿಡಿಪಿ ಕುಸಿದಿದೆ ಎಂದು ಸ್ಪಷ್ಟಪಡಿಸಿದೆ.

ತಾಂತ್ರಿಕ ಹಿಂಜರಿತ (Technical Recession) ಎಂದರೇನು? ಉತ್ಪಾದನೆಯಲ್ಲಿ ಸತತ ಎರಡು ತ್ರೈಮಾಸಿಕಗಳ ಕಾಲ ಕಂಡುಬರುವ ಆರ್ಥಿಕ ಕುಸಿತವನ್ನು ತಾಂತ್ರಿಕ ಹಿಂಜರಿತ (Technical Recession) ಎಂದು ಕರೆಯಲಾಗುತ್ತದೆ. ಇದರ ಜೊತೆಗೆ, ಉದ್ಯೋಗ, ಗೃಹ, ಸಾಂಸ್ಥಿಕ ಆದಾಯ ಮತ್ತು ಇತರ ವ್ಯವಹಾರಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ವಿವರಿಸಲು ತಾಂತ್ರಿಕ ಹಿಂಜರಿತ ಎಂಬ ಪದವನ್ನು ಬಳಸಲಾಗುತ್ತದೆ

ಇತ್ತೀಚೆಗೆ ತಾಂತ್ರಿಕ ಹಿಂಜರಿತವನ್ನು ಅನುಭವಿಸಿದ ದೇಶಗಳಾವುವು? ಈಗಾಗಲೇ ಕೊರೊನಾ ಮಹಾಮಾರಿ ಜಾಗತಿಕ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇಂಡೋನೇಷ್ಯಾ ಎರಡು ದಶಕಗಳಲ್ಲಿ ಮೊದಲ ಬಾರಿಗೆ ಆರ್ಥಿಕ ಕುಸಿತ ಕಂಡಿದ್ದು, ಸೆಪ್ಟೆಂಬರ್ ಅಂತ್ಯದ ಮೂರು ತಿಂಗಳಲ್ಲಿ ಶೇ.3.49 ರಷ್ಟು ಜಿಡಿಪಿ ಕುಸಿದಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇಂಗ್ಲೆಂಡ್​ ಶೇ. 21.7ರಷ್ಟು ಮತ್ತು ಮೊದಲ ತ್ರೈಮಾಸಿಕದಲ್ಲಿ ಶೇ. 1.6ರಷ್ಟು ಕುಸಿತ ಕಂಡಿದೆ. ಜೊತೆಗೆ, ಜೂನ್ ಅಂತ್ಯದ ಮೂರು ತಿಂಗಳಲ್ಲಿ ಬ್ರೆಜಿಲ್ ಶೇ.11.4ರಷ್ಟು ಜಿಡಿಪಿ ಕುಸಿತವನ್ನು ಕಂಡಿತ್ತು.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?