ದೀಪಾವಳಿಯಂದು.. ಅಮ್ಮನ ಹಳೇ ಸೀರೆ ಬಳಸಿ ನಟ ರಿತೇಶ್ ಏನು ಮಾಡಿದ್ದಾರೆ ನೋಡಿ!

ದೀಪಾವಳಿಯಂದು.. ಅಮ್ಮನ ಹಳೇ ಸೀರೆ ಬಳಸಿ ನಟ ರಿತೇಶ್ ಏನು ಮಾಡಿದ್ದಾರೆ ನೋಡಿ!

ಮುಂಬೈ: ಮಕ್ಕಳಗೆ ಸಾಮಾನ್ಯವಾಗಿ ತಮ್ಮ ತಾಯಿಯ ಹಳೇ ಸೀರೆಯನ್ನು ಕಂಡರೆ ಕೂಡಲೇ ನೆನಪಾಗೋದು ಬಾಲ್ಯದಲ್ಲಿ ಆಕೆಯೊಂದಿಗೆ ಕಳೆದ ಆ ಮಧುರ ಕ್ಷಣಗಳು. ಹೌದು, ಅಮ್ಮನ ಹಳೇ ಸೀರೆ ಒಂಥರಾ ಮಧುರ ನೆನಪುಗಳ ಆಗರ. ಅಂಥದ್ದೇ ಒಂದು ಇಂಟರೆಸ್ಟಿಂಗ್ ನೆನಪನ್ನು ಮೆಲುಕು ಹಾಕುತ್ತಾ ಬಾಲಿವುಡ್​ ನಟ ರಿತೇಶ್​ ದೇಶಮುಖ್​ ಮಾಡಿರುವ ಐಡಿಯಾ ನೋಡಿ! ದೀಪಾವಳಿಯ ಅಂಗವಾಗಿ ರಿತೇಶ್​ ತಮ್ಮ ತಾಯಿ ವೈಶಾಲಿ ದೇಶಮುಖ್ ತೊಡುತ್ತಿದ್ದ ಹಳೇ ಸೀರೆಯಿಂದ ಉಡುಪೊಂದನ್ನು ತಯಾರಿಸಿದ್ದಾರೆ. ತಮ್ಮ ತಾಯಿಯ ಆಗಸ ಬಣ್ಣದ ಸೀರೆಯಿಂದ ತಮಗೆ […]

KUSHAL V

|

Nov 15, 2020 | 6:13 PM

ಮುಂಬೈ: ಮಕ್ಕಳಗೆ ಸಾಮಾನ್ಯವಾಗಿ ತಮ್ಮ ತಾಯಿಯ ಹಳೇ ಸೀರೆಯನ್ನು ಕಂಡರೆ ಕೂಡಲೇ ನೆನಪಾಗೋದು ಬಾಲ್ಯದಲ್ಲಿ ಆಕೆಯೊಂದಿಗೆ ಕಳೆದ ಆ ಮಧುರ ಕ್ಷಣಗಳು. ಹೌದು, ಅಮ್ಮನ ಹಳೇ ಸೀರೆ ಒಂಥರಾ ಮಧುರ ನೆನಪುಗಳ ಆಗರ. ಅಂಥದ್ದೇ ಒಂದು ಇಂಟರೆಸ್ಟಿಂಗ್ ನೆನಪನ್ನು ಮೆಲುಕು ಹಾಕುತ್ತಾ ಬಾಲಿವುಡ್​ ನಟ ರಿತೇಶ್​ ದೇಶಮುಖ್​ ಮಾಡಿರುವ ಐಡಿಯಾ ನೋಡಿ!

ದೀಪಾವಳಿಯ ಅಂಗವಾಗಿ ರಿತೇಶ್​ ತಮ್ಮ ತಾಯಿ ವೈಶಾಲಿ ದೇಶಮುಖ್ ತೊಡುತ್ತಿದ್ದ ಹಳೇ ಸೀರೆಯಿಂದ ಉಡುಪೊಂದನ್ನು ತಯಾರಿಸಿದ್ದಾರೆ. ತಮ್ಮ ತಾಯಿಯ ಆಗಸ ಬಣ್ಣದ ಸೀರೆಯಿಂದ ತಮಗೆ ಹಾಗೂ ತಮ್ಮ ಮಕ್ಕಳಿಗೆ ಹೊಸ ಕುರ್ತಾಗಳನ್ನು ಸ್ಟಿಚ್ ಮಾಡಿಸಿಕೊಂಡಿದ್ದಾರೆ.

ಹಳೇ ಸೀರೆಯಿಂದ ತಯಾರಿಸಿದ ಈ ಹೊಸ ಉಡುಪುಗಳನ್ನು ರಿತೀಶ್ ಹಾಗೂ ಅವರ ಮಕ್ಕಳು ಹಬ್ಬದ ದಿನದಂದು ಧರಿಸಿ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರುವ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ, ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಜೊತೆಗೆ, ತಮ್ಮ ಟ್ವಿಟರ್​ ಖಾತೆಯಲ್ಲಿ ಅಮ್ಮನ ಹಳೆಯ ಸೀರೆ ದೀಪಾವಳಿಯಂದು ಮಕ್ಕಳಿಗೆ ಹೊಸ ಬಟ್ಟೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada