Video: ಗೋವರ್ಧನ ಪೂಜೆ ವಿಧಿವಿಧಾನದಲ್ಲಿ ಚಾಟಿಯೇಟು ಸ್ವೀಕರಿಸಿದ ಛತ್ತೀಸ್‌ಗಡದ ಸಿಎಂ ಭೂಪೇಶ್ ಬಘೇಲ್   

Bhupesh Baghel ರಾಜ್ಯದ ಒಳಿತಿಗಾಗಿ ಮತ್ತು ಎಲ್ಲಾ ಕಷ್ಟಗಳ ಅಂತ್ಯಕ್ಕಾಗಿ ಪ್ರಾರ್ಥಿಸುವಾಗ  ಚಾಟಿಯೇಟು ವಾರ್ಷಿಕ ಸಂಪ್ರದಾಯವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ. ಚಾಟಿಯೇಟು ವಿಶೇಷವಾದದ್ದು, ಇದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Video: ಗೋವರ್ಧನ ಪೂಜೆ ವಿಧಿವಿಧಾನದಲ್ಲಿ ಚಾಟಿಯೇಟು ಸ್ವೀಕರಿಸಿದ ಛತ್ತೀಸ್‌ಗಡದ ಸಿಎಂ ಭೂಪೇಶ್ ಬಘೇಲ್   
ಭೂಪೇಶ್ ಬಘೇಲ್
Edited By:

Updated on: Nov 05, 2021 | 4:01 PM

ಜಾಂಜ್‌ಗಿರಿ: “ಗೋವರ್ಧನ ಪೂಜೆ” ಉತ್ಸವದ ಆಚರಣೆಯ ಅಂಗವಾಗಿ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೆ ಇಂದು ಸಾರ್ವಜನಿಕವಾಗಿ “ಚಾಟಿಯೇಟು” ನೀಡಲಾಯಿತು. 60 ವರ್ಷದ ಭೂಪೇಶ್ ಬಘೇಲ್  ತನ್ನ ಬಲಗೈಯನ್ನು ಮುಂದೆ ಹಿಡಿದಿರುವ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಎಂಟು ಚಾಟಿ ಏಟುಗಳನ್ನು ನೀಡುತ್ತಿರುವುದನ್ನು ಕಾಣಬಹುದು. ಇದಾದ ನಂತರ ಮುಖ್ಯಮಂತ್ರಿಯು ನಂತರ ಬೀರೇಂದ್ರ ಠಾಕೂರ್ ಎಂಬ ಆ ವ್ಯಕ್ತಿಯನ್ನು ಅಪ್ಪಿಕೊಳ್ಳುತ್ತಿರುವುದು ವಿಡಿಯೊದಲ್ಲಿದೆ. ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದುರ್ಗದಲ್ಲಿ ಗೋವರ್ಧನ ಪೂಜೆಯ ಆಚರಣೆಯ ಅಂಗವಾಗಿ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವಿಡಿಯೊಗೆ ಶೀರ್ಷಿಕೆ ನೀಡಿದೆ.


ಈ ಆಚರಣೆಯು ಜಾಂಜ್‌ಗಿರಿ ಎಂಬ ಗ್ರಾಮದಲ್ಲಿ ನಡೆಯುತ್ತಿದ್ದು, ಬಾಘೇಲ್ ಪ್ರತಿ ವರ್ಷ ಭೇಟಿ ನೀಡುತ್ತಾರೆ ಎಂದು ವರದಿಯಾಗಿದೆ. ಕಳೆದ ವರ್ಷದವರೆಗೆ ಬೀರೇಂದ್ರ ಠಾಕೂರ್ ಅವರ ತಂದೆಯೇ  ಈ ರೀತಿ ಮಾಡುತ್ತಿದ್ದರು ಎಂದು ಬಘೇಲ್ ಭಾಷಣದಲ್ಲಿ ಹೇಳಿದ್ದಾರೆ.

“ಈಗ ಭರೋಸಾ ಠಾಕೂರ್ ಅವರ ಮಗ ಈ ಸಂಪ್ರದಾಯವನ್ನು ನಡೆಸುತ್ತಿದ್ದಾನೆ. ನಮ್ಮ ಪೂರ್ವಜರು ಈ ಸಿಹಿಯಾದ ಪುಟ್ಟ ಸಂಪ್ರದಾಯಗಳನ್ನು ಹೊಂದಿದ್ದರು, ಅದು ನಮಗೆ ಬಹಳ ಜನಪ್ರಿಯವಾಗಿದೆ ಮತ್ತು ನಮಗೆ ಬಹಳಷ್ಟು ಸಂತೋಷವನ್ನು ನೀಡುತ್ತದೆ. ಹಳ್ಳಿಗಳಲ್ಲಿನ ಈ ಆಚರಣೆಗಳು ರೈತರ ಒಳಿತಿಗಾಗಿ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಒಳಿತಿಗಾಗಿ ಮತ್ತು ಎಲ್ಲಾ ಕಷ್ಟಗಳ ಅಂತ್ಯಕ್ಕಾಗಿ ಪ್ರಾರ್ಥಿಸುವಾಗ  ಚಾಟಿಯೇಟು ವಾರ್ಷಿಕ ಸಂಪ್ರದಾಯವಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ. ಚಾಟಿಯೇಟು ವಿಶೇಷವಾದದ್ದು, ಇದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇದನ್ನೂ ಓದಿ: ಮುಂಬೈ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ₹ 4 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ, ವ್ಯಕ್ತಿ ಬಂಧನ