ವಂಚನೆ ಪ್ರಕರಣ: ಕಿರಣ್ ಗೋಸಾವಿ ನ.8ರವರೆಗೆ ಪೊಲೀಸ್ ಕಸ್ಟಡಿಗೆ

TV9 Digital Desk

| Edited By: Rashmi Kallakatta

Updated on: Nov 05, 2021 | 4:49 PM

ಕಿರಣ್ ಗೋಸಾವಿ ಅವರು ಕೆಪಿಜಿ ಡ್ರೀಮ್ಜ್ ಸೊಲ್ಯೂಷನ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದರು, ಇದು ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಿಗೆ ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿತು. ಕಂಪನಿಯು ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡಿತು.

ವಂಚನೆ ಪ್ರಕರಣ: ಕಿರಣ್ ಗೋಸಾವಿ ನ.8ರವರೆಗೆ ಪೊಲೀಸ್ ಕಸ್ಟಡಿಗೆ
ಕಿರಣ್ ಗೋಸಾವಿ, ಆರ್ಯನ್ ಖಾನ್

Follow us on

ಮುಂಬೈ: 2018ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಗೋಸಾವಿಯ ಪೊಲೀಸ್ ಕಸ್ಟಡಿಯನ್ನು ನ್ಯಾಯಾಲಯ ಶುಕ್ರವಾರ ಮೂರು ದಿನಗಳ ಕಾಲ ವಿಸ್ತರಿಸಿದೆ. ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಗೋಸಾವಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸ್ವತಂತ್ರ ಸಾಕ್ಷಿಯೂ ಆಗಿದ್ದರು. ವಂಚನೆ ಪ್ರಕರಣದಲ್ಲಿ ಪುಣೆ ಪೊಲೀಸರು ಆತನನ್ನು ಈ ಹಿಂದೆ ಬಂಧಿಸಿದ್ದರು ಮತ್ತು ನವೆಂಬರ್ 5 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಶುಕ್ರವಾರ, ನ್ಯಾಯಾಲಯವು ಗೋಸಾವಿಯ ಪೊಲೀಸ್ ಕಸ್ಟಡಿಯನ್ನು ಮೂರು ದಿನಗಳ ಕಾಲ ವಿಸ್ತರಿಸಿತು. ಕಳೆದ ವಾರ ಪುಣೆ ಪೊಲೀಸರು 2018 ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಗೋಸಾವಿಯ ಬಂಧನವನ್ನು ದೃಢಪಡಿಸಿದರು. ಇದೇ ಪ್ರಕರಣದಲ್ಲಿ ಪುಣೆ ಪೊಲೀಸರು ಆತನ ವಿರುದ್ಧ ಲುಕೌಟ್ ಸುತ್ತೋಲೆ ಹೊರಡಿಸಿದಾಗಿನಿಂದ ಆತ ತಲೆಮರೆಸಿಕೊಂಡಿದ್ದ. 2018 ರ ವಂಚನೆ ಪ್ರಕರಣದಲ್ಲಿ ಗೋಸಾವಿಯನ್ನು ಪುಣೆಯ ಕಟ್ರಾಜ್ ಪ್ರದೇಶದ ಲಾಡ್ಜ್‌ನಿಂದ ಮುಂಜಾನೆ 3 ಗಂಟೆಗೆ ಬಂಧಿಸಿದ್ದೇವೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತಾಭ್ ಗುಪ್ತಾ ಹೇಳಿದ್ದಾರೆ.

ಏನಿದು ಪ್ರಕರಣ? ಕಿರಣ್ ಗೋಸಾವಿ ಅವರು ಕೆಪಿಜಿ ಡ್ರೀಮ್ಜ್ ಸೊಲ್ಯೂಷನ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದರು, ಇದು ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಿಗೆ ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿತು. ಕಂಪನಿಯು ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡಿತು. ಮಲೇಷ್ಯಾದ ಹೋಟೆಲ್‌ನಲ್ಲಿ ಕೆಲಸದ ನೆಪದಲ್ಲಿ ಗೋಸಾವಿ ತನಗೆ 3.09 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಅಂತಹ ಆಕಾಂಕ್ಷಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಮಲೇಷ್ಯಾಕ್ಕೆ ಬಂದ ಮೇಲೆ ಆಕಾಂಕ್ಷಿಗೆ ಕಿರಣ್ ಗೋಸಾವಿಯಿಂದ ಮೋಸ ಹೋಗಿರುವುದು ಗೊತ್ತಾಯಿತು. ಪುಣೆ ನಗರದ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಗೋಸಾವಿ ಪ್ರಮುಖ ಆರೋಪಿಯಾಗಿದ್ದು, 2019ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಕಿರಣ್ ಗೋಸಾವಿ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಸಾಕ್ಷಿಯಾಗಿದ್ದರು. ಇದರಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ 20 ಜನರನ್ನು ಬಂಧಿಸಲಾಯಿತು. ಈ ತಿಂಗಳ ಆರಂಭದಲ್ಲಿ ಎನ್‌ಸಿಬಿ ದಾಳಿಯ ನಂತರ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರೊಂದಿಗೆ ಸೆಲ್ಫಿಯಲ್ಲಿ ಕಾಣಿಸಿಕೊಂಡ ನಂತರ ಕಿರಣ್ ಗೋಸಾವಿ ಸುದ್ದಿಯಾಗಿದ್ದರು.

ಇದನ್ನೂ ಓದಿ: ಎನ್​​ಸಿಬಿ ಸಾಕ್ಷಿ ಕಿರಣ್ ಗೋಸಾವಿ ವಿರುದ್ಧ ಪುಣೆಯಲ್ಲಿ  ಮೂರನೇ ಎಫ್ಐಆರ್ ದಾಖಲು 

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada