ಒಡಿಶಾ: ಒಡಿಶಾದ ಜಾರ್ಸುಗುಡದಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಉಕ್ಕು ಮತ್ತು ವಿದ್ಯುತ್ ಸ್ಥಾವರದ 6 ಉದ್ಯೋಗಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ.
ಸಂಬಲ್‌ಪುರ-ಜಾರ್ಸುಗುಡ ಬಿಜು ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಕಾರ್ಮಿಕರು ಪ್ಲಾಂಟ್ ಸೈಟ್‌ನಿಂದ ಜಾರ್ಸುಗುಡಾ ಪಟ್ಟಣಕ್ಕೆ ಬಸ್‌ನಲ್ಲಿ ಹಿಂತಿರುಗುತ್ತಿದ್ದರು.
Odisha | 6 dead, over 20 injured as a bus carrying employees of a company met with an accident in Jharsuguda after coal-laden truck collided with bus. Most employees severely injured. 10 referred to hospital in Burla, Sambalpur,14 under treatment here: N Mohapatra,SDPO,Jharsuguda pic.twitter.com/TNxmUoLUEs
— ANI (@ANI) September 16, 2022
ಅಪಘಾತದಲ್ಲಿ ಹೆಚ್ಚಿನ ನೌಕರರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಜಾರ್ಸುಗುಡಾ ಉಪ ಪೊಲೀಸ್ ವರಿಷ್ಠಾಧಿಕಾರಿ ಎನ್.ಮಹಾಪಾತ್ರ ತಿಳಿಸಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವಿಮ್ಸಾರ್) ಗೆ ಸ್ಥಳಾಂತರಿಸಲಾಗಿದೆ.ಕೆಲ ಕಾರ್ಮಿಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
Published On - 10:20 am, Sat, 17 September 22