Navjot Singh Sidhu: 10 ತಿಂಗಳ ಜೈಲು ಶಿಕ್ಷೆ ನಂತರ ಬಿಡುಗಡೆಯಾದ ನವಜೋತ್ ಸಿಂಗ್ ಸಿಧು; ಕೇಂದ್ರ ಸರ್ಕಾರ, ಮೋದಿ ವಿರುದ್ಧ ವಾಗ್ದಾಳಿ

|

Updated on: Apr 01, 2023 | 7:15 PM

Road-Rage Case: ಜೈಲಿನಿಂದ ಹೊರಬಂದ ಕೂಡಲೇ ಕೇಂದ್ರ ಮತ್ತು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ನವಜೋತ್ ಸಿಂಗ್ ಸಿಧು, ಪ್ರಜಾಪ್ರಭುತ್ವವು ಸಂಕೋಲೆಯಿಂದ ಬಿಗಿಯಲ್ಪಟ್ಟಿದೆ ಎಂದು ಹೇಳಿದ್ದಾರೆ.

Navjot Singh Sidhu: 10 ತಿಂಗಳ ಜೈಲು ಶಿಕ್ಷೆ ನಂತರ ಬಿಡುಗಡೆಯಾದ ನವಜೋತ್ ಸಿಂಗ್ ಸಿಧು; ಕೇಂದ್ರ ಸರ್ಕಾರ, ಮೋದಿ ವಿರುದ್ಧ ವಾಗ್ದಾಳಿ
ನವಜೋತ್ ಸಿಂಗ್ ಸಿಧು
Follow us on

ಪಟಿಯಾಲ: 34 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ರಸ್ತೆ ಜಗಳ (Road Rage) ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) 10 ತಿಂಗಳ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪಂಜಾಬ್‌ನ (Punjab) ಪಟಿಯಾಲದಲ್ಲಿರುವ ಜೈಲಿನಿಂದ ಹೊರಬಂದ ನಂತರ ಸಿಧು ಅಲ್ಲಿಂದಲೇ ತಮ್ಮ ಕೆಲಸ ಶುರು ಮಾಡಿದ್ದಾರೆ. ಪ್ರಜಾಪ್ರಭುತ್ವವು ಸಂಕೋಲೆಯಿಂದ ಬಿಗಿಯಲ್ಪಟ್ಟಿದೆ ಎಂದು ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲಾ ಒಂದು ಕ್ರಾಂತಿಯೂ ಬಂದಿದೆ ಮತ್ತು ಈ ಬಾರಿ ಆ ಕ್ರಾಂತಿಯ ಹೆಸರು ರಾಹುಲ್ ಗಾಂಧಿ. ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.


ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂಚು ನಡೆಯುತ್ತಿದೆ. ಅವರು ಪಂಜಾಬ್ ಅನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಾನು ಗೋಡೆಯಂತೆ ನಿಂತಿದ್ದೇನೆ ಎಂದಿದ್ದಾರೆ ಸಿಧು.

ನಾನು ನನ್ನ ಚಿಕ್ಕ ಸಹೋದರ (ಮುಖ್ಯಮಂತ್ರಿ ಮತ್ತು ಎಎಪಿ ನಾಯಕ) ಭಗವಂತ್ ಮಾನ್ ಅವರನ್ನು ಕೇಳಲು ಬಯಸುತ್ತೇನೆ. ನೀವು ಪಂಜಾಬ್ ಜನರನ್ನು ಏಕೆ ಮರುಳು ಮಾಡಿದ್ದೀರಿ? ನೀವು ದೊಡ್ಡ ಭರವಸೆಗಳನ್ನು ನೀಡಿದ್ದೀರಿ, ಹಾಸ್ಯ ಚಟಾಕಿ ಹಾರಿಸಿದ್ದೀರಿ. ಆದರೆ ನೀವು ಇಂದು ಕಾಗದದಲ್ಲಿ ಮಾತ್ರ ಮುಖ್ಯಮಂತ್ರಿಯಾಗಿದ್ದೀರಿ ಎಂಜು ಸಿಧು ಹೇಳಿದ್ದಾರೆ. ಶನಿವಾರ (ಇಂದು) ನಿಗದಿತ ಸಮಯದಿಂದ ಎಂಟು ಗಂಟೆಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ತಾನು ಬಿಡುಗಡೆಯಾಗುವ ಮೊದಲು ಮಾಧ್ಯಮಗಳು ಅಲ್ಲಿರಬಾರದು ಎಂದು ಸರ್ಕಾರ ಬಯಸಿದೆ ಎಂದು ಅವರು ಆರೋಪಿಸಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ಸಿಧುಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. 1988 ರಲ್ಲಿ  ಸಿಧು ಮತ್ತು ಅವರ ಸ್ನೇಹಿತನೊಂದಿಗಿನ ಜಗಳದ ನಂತರ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದ ಕೋರಿಕೆಯ ಮೇರೆಗೆ ನ್ಯಾಯಾಲಯದ ತೀರ್ಪು ಬಂದಿದೆ. ಕುಟುಂಬವು 2018 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಕೊಲೆಯಿಂದ ಖುಲಾಸೆಗೊಳಿಸಿದ ಆದೇಶವನ್ನು ಮರುಪರಿಶೀಲಿಸುವಂತೆ ಕೇಳಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Sat, 1 April 23