ದೆಹಲಿಯ ಕರ್ನಾಟಕ ಭವನ ಸಿಬ್ಬಂದಿಗೆ ಕೊರೊನಾ ಸೋಂಕು

|

Updated on: Jun 13, 2020 | 4:18 PM

ದೆಹಲಿ: ಇಡೀ ಭಾರತದಲ್ಲೇ ಎಗ್ಗಿಲ್ಲದೆ ಹರಡುತ್ತಿರುವ ಕೊರೊನಾ ದೇಶದ ರಾಜಧಾನಿ ದೆಹಲಿಯಲ್ಲೂ ವ್ಯಾಪಕವಾಗಿ ಹಬ್ಬಿದೆ. ಇದೀಗ ದೆಹಲಿಯಲ್ಲಿರುವ ಕರ್ನಾಟಕ ಭವನದ ಸಿಬ್ಬಂದಿಯೊಬ್ಬರಲ್ಲೂ ಸೋಂಕು ದೃಢವಾಗಿದೆ. ಕರ್ನಾಟಕ ಭವನದಲ್ಲಿ ರೂಮ್ಬಾಯ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹಾಗಾಗಿ ಸಿಬ್ಬಂದಿಯನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ನಿಡಲಾಗ್ತಿದೆ. ದೆಹಲಿಯ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನಕ್ಕೆ ರಾಜಧಾನಿಗೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೇರಿ ಹಲವಾರು ಗಣ್ಯರು ಆಗಾಗ ಭೇಟಿ ನೀಡುತ್ತಾರೆ. ಆದರೆ ಕಳೆದ ಕೆಲವು ತಿಂಗಳಿನಿಂದ ಲಾಕ್ಡೌನ್ ಘೋಷಣೆಯಾದ ಬಳಿಕ […]

ದೆಹಲಿಯ ಕರ್ನಾಟಕ ಭವನ ಸಿಬ್ಬಂದಿಗೆ ಕೊರೊನಾ ಸೋಂಕು
Follow us on

ದೆಹಲಿ: ಇಡೀ ಭಾರತದಲ್ಲೇ ಎಗ್ಗಿಲ್ಲದೆ ಹರಡುತ್ತಿರುವ ಕೊರೊನಾ ದೇಶದ ರಾಜಧಾನಿ ದೆಹಲಿಯಲ್ಲೂ ವ್ಯಾಪಕವಾಗಿ ಹಬ್ಬಿದೆ. ಇದೀಗ ದೆಹಲಿಯಲ್ಲಿರುವ ಕರ್ನಾಟಕ ಭವನದ ಸಿಬ್ಬಂದಿಯೊಬ್ಬರಲ್ಲೂ ಸೋಂಕು ದೃಢವಾಗಿದೆ. ಕರ್ನಾಟಕ ಭವನದಲ್ಲಿ ರೂಮ್ಬಾಯ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದೆ. ಹಾಗಾಗಿ ಸಿಬ್ಬಂದಿಯನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ನಿಡಲಾಗ್ತಿದೆ.

ದೆಹಲಿಯ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನಕ್ಕೆ ರಾಜಧಾನಿಗೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೇರಿ ಹಲವಾರು ಗಣ್ಯರು ಆಗಾಗ ಭೇಟಿ ನೀಡುತ್ತಾರೆ. ಆದರೆ ಕಳೆದ ಕೆಲವು ತಿಂಗಳಿನಿಂದ ಲಾಕ್ಡೌನ್ ಘೋಷಣೆಯಾದ ಬಳಿಕ ಯಾವ ಗಣ್ಯರೂ ಭೇಟಿ ನೀಡಿರಲಿಲ್ಲ. ಆದರೆ ಸೋಂಕಿತ ರೂಮ್ಬಾಯ್ ಭವನದ ಇತರೆ ಸಿಬ್ಬಂದಿಯ ಜೊತೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ.