ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೈಲ್ವೆ ಪೊಲೀಸ್​ಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇಲ್ಲ

|

Updated on: Oct 23, 2023 | 8:20 AM

ಜೈಪುರ-ಮುಂಬೈ ಸೆಂಟ್ರಲ್ ಸೂಪರ್​ಫಾಸ್ಟ್​ ಎಕ್ಸ್​ ಪ್ರೆಸ್​ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದ ರೈಲ್ವೆ ಪೊಲೀಸ್ ಅಧಿಕಾರಿಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇಲ್ಲ ಎಂಬುದು ಸಾಬೀತಾಗಿದೆ. ರೈಲಿನಲ್ಲಿ ನಾಲ್ವರನ್ನು ಈತ ಗುಂಡಿಕ್ಕಿ ಹತ್ಯೆ ಮಾಡಿದ್ದ, ಜುಲೈ 31ರಂದು ಈ ಘಟನೆ ನಡೆದಿತ್ತು. ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಮಾನಸಿಕವಾಗಿ ಸ್ಥಿರವಾಗಿದ್ದಾನೆ ಮತ್ತು ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಅವನಿಗೆ ಎಂದು ಜಿಆರ್​ಪಿ(Government Railway Police) ಆರೋಪಪಟ್ಟಿ ಸಲ್ಲಿಸಿದೆ.

ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೈಲ್ವೆ ಪೊಲೀಸ್​ಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇಲ್ಲ
ರೈಲು
Follow us on

ಜೈಪುರ-ಮುಂಬೈ ಸೆಂಟ್ರಲ್ ಸೂಪರ್​ಫಾಸ್ಟ್​ ಎಕ್ಸ್​ ಪ್ರೆಸ್​ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದ ರೈಲ್ವೆ ಪೊಲೀಸ್ ಅಧಿಕಾರಿಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇಲ್ಲ ಎಂಬುದು ಸಾಬೀತಾಗಿದೆ. ರೈಲಿನಲ್ಲಿ ನಾಲ್ವರನ್ನು ಈತ ಗುಂಡಿಕ್ಕಿ ಹತ್ಯೆ ಮಾಡಿದ್ದ, ಜುಲೈ 31ರಂದು ಈ ಘಟನೆ ನಡೆದಿತ್ತು. ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಮಾನಸಿಕವಾಗಿ ಸ್ಥಿರವಾಗಿದ್ದಾನೆ ಮತ್ತು ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಅವನಿಗೆ ಎಂದು ಜಿಆರ್​ಪಿ(Government Railway Police) ಆರೋಪಪಟ್ಟಿ ಸಲ್ಲಿಸಿದೆ.

ತನಿಖಾಧಿಕಾರಿಗಳು ರೈಲಿನೊಳಗಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು ಅದರಲ್ಲಿ ಚೇತನ್ ಕಂಪಾರ್ಟ್​ಮೆಂಟ್​ನ ನಡುವೆ ಚಲಿಸುತ್ತಿರುವುದನ್ನು ಕಾಣಬಹುದಾಗಿದೆ ಆತ ಆ ನಾಲ್ವರನ್ನು ಹುಡುಕುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ.

ಮಹಾರಾಷ್ಟ್ರದ ಪಾಲ್ಘಢ ನಿಲ್ದಾಣವನ್ನು ದಾಟುತ್ತಿದ್ದಂತೆ ರೈಲ್ವೆಯ ಎಎಸ್​ಐ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ರೈಲಿನಲ್ಲಿ ಚೇತನ್ ಸಿಂಗ್ ಎಂಬ ರೈಲ್ವೆ ರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಈ ಗುಂಡಿನ ದಾಳಿ ನಡೆಸಿದ್ದು, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್, ಓರ್ವ ಆರ್‌ಪಿಎಫ್ ಸಿಬ್ಬಂದಿ ಹಾಗೂ ಜೈಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ಸೇರಿ ಒಟ್ಟು ನಾಲ್ಕು ಮಂದಿಯನ್ನು ಹತ್ಯೆ ಮಾಡಿದ್ದ.

ಮತ್ತಷ್ಟು ಓದಿ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರ್‌ಪಿಎಫ್ ಕಾನ್ಸ್‌ಟೇಬಲ್‌ ವಿರುದ್ಧ ಮತೀಯ ದ್ವೇಷ ಹರಡಿದ ಆರೋಪ

ಕೈಗೆ ಅಪಾಯಕಾರಿ ಆಯುಧಗಳನ್ನು ಕೊಟ್ಟು ಬಿಟ್ಟರೆ ಸಾಕಾಗುವುದಿಲ್ಲ. ಈ ಶಸ್ತ್ರಾಸ್ತ್ರ ಹೊಂದಿರುವ ಯೋಧರ, ಪೊಲೀಸರ ಸಾಮರ್ಥ್ಯದ ಜೊತೆ ಮಾನಸಿಕ ಯೋಗಕ್ಷೇಮವನ್ನು ಸಹ ನಿರ್ಣಯಿಸುವುದು ಪ್ರಮುಖವಾಗಿದೆ. ಕೆಲವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಸಂದರ್ಭದಲ್ಲೂ ಇಂತಹ ಕೃತ್ಯಗಳನ್ನು ಎಸಗಬಹುದು, ಹೀಗಾಗಿ ಮಾನಸಿಕ ಯೋಗಕ್ಷೇಮವನ್ನು ಕೂಡ ಮೌಲ್ಯ ಮಾಪನ ಮಾಡುತ್ತಿರಬೇಕು ಎನ್ನುವ ವಾದವೂ ಎದ್ದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ