ಪ್ರಧಾನಿ ಮೋದಿ ಸರ್ಕಾರ ವಿರುದ್ಧ ಆರೋಪ: ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ ಜೆಪಿ ನಡ್ಡಾ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಿರುಗೇಟು ನೀಡಿದ್ದು, ಇದು ಕಾಂಗ್ರೆಸ್ ಪಕ್ಷದ ಪರಕೀಯ ಪರಿಕಲ್ಪನೆಯಾಗಿರಬಹುದು, ಆದರೆ ಸಾರ್ವಜನಿಕರಿಗೆ ಸೇವೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ನವದೆಹಲಿ, ಅಕ್ಟೋಬರ್ 22: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಧಿಕಾರಿಗಳು ಮತ್ತು ಸೈನಿಕರನ್ನು ಬಿಜೆಪಿ ಪಕ್ಷದ ಮಾರ್ಕೆಟಿಂಗ್ ಏಜೆಂಟರನ್ನಾಗಿ ಪರಿವರ್ತಿಸಿದೆ. ಸರ್ಕಾರದ ಅಧಿಕಾರಿಗಳು ಬಿಜೆಪಿ ಪ್ರಚಾರಕರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದ್ದರು. ಇದೀಗ ಅವರ ಆರೋಪಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಿರುಗೇಟು ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಪರಕೀಯ ಪರಿಕಲ್ಪನೆಯಾಗಿರಬಹುದು, ಆದರೆ ಸಾರ್ವಜನಿಕರಿಗೆ ಸೇವೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಎಲ್ಲಾ ಯೋಜನೆಗಳ ಪರಿಪೂರ್ಣತೆ ಮತ್ತು ಎಲ್ಲಾ ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಇದು ಬಡವರ ಹಿತಾಸಕ್ತಿಯನ್ನು ಹೊಂದಿರುವ ಯಾರಿಗೂ ಸಮಸ್ಯೆ ಆಗುವುದಿಲ್ಲ. ಆದರೆ ಕಾಂಗ್ರೆಸ್ ಬಡವರನ್ನು ಬಡತನದಲ್ಲಿಡಲು ಮಾತ್ರ ಆಸಕ್ತಿಯನ್ನು ಹೊಂದಿದ್ದು, ಹಾಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಜೆ.ಪಿ ನಡ್ಡಾ ಟ್ವೀಟ್
It maybe an alien concept to the Congress Party, but public service delivery is the duty of a Government.
If the Modi Govt wants to ensure saturation of all schemes and ensure all beneficiaries are reached, nobody who has the interest of the poor in his mind can have a problem.…
— Jagat Prakash Nadda (@JPNadda) October 22, 2023
ಯೋಜನೆಗಳ ಪರಿಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸೇವಕರು ತಳಮಟ್ಟವನ್ನು ತಲುಪುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಇರುವುದು ನನಗೆ ಗೊಂದಲವನ್ನುಂಟುಮಾಡಿದೆ. ಇದು ಆಡಳಿತದ ಮೂಲ ತತ್ವವಲ್ಲದಿದ್ದರೆ, ಏನು ಎಂದು ಪ್ರಶ್ನಿಸಿದ್ದಾರೆ.
ಜೆ.ಪಿ ನಡ್ಡಾ ಟ್ವೀಟ್
It baffles me to see the Congress Party have an issue with public servants reaching the grassroots to ensure saturation of schemes. If this not the basic tenet of governance, what is?
Regarding opposition to a ‘Rath’ it is a fit use of public resources unlike using warships as…
— Jagat Prakash Nadda (@JPNadda) October 22, 2023
ರಥಯಾತ್ರೆಗೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಒಂದು ಕಾಲದಲ್ಲಿ ಯುದ್ಧನೌಕೆಗಳನ್ನು ವೈಯಕ್ತಿಕ ದೋಣಿಗಳಾಗಿ ಬಳಸಲಾಗುತ್ತಿತ್ತು. ಇಂತಹ ದುಷ್ಕೃತ್ಯಗಳಿಗೆ ವ್ಯತಿರಿಕ್ತವಾಗಿ ಬಿಜೆಪಿ ಸಾರ್ವಜನಿಕ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:57 pm, Sun, 22 October 23