PM CARES Fund ‌ನಿಂದ 100 ಕೋಟಿ ರೂ ರಿಲೀಸ್, ಯಾವುದಕ್ಕೆ ಗೊತ್ತಾ?

ಕೋವಿಡ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಪ್ರಪಂಚದ ವಿವಿಧ ದೇಶಗಳು ಮುಂಚೂಣಿಯಲ್ಲಿದ್ದು, ಭಾರತವೂ ಸಹ ಪ್ರಾರಂಭದ ಹಂತದಲ್ಲಿ ಯಶ ಕಂಡಿದೆ. ಹೀಗಾಗಿ ಕೋವಿಡ್ ವ್ಯಾಕ್ಸಿನ್ ತಯಾರಿಕೆಗೆ ಪಿಎಂ ಕೇರ್ಸ್ ಫಂಡ್ ನಿಂದ 100 ಕೋಟಿ ರೂ.ಗಳನ್ನು ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರಗಳಿಗೆ 1000 ಕೋಟಿ, ವೆಂಟಿಲೇಟರ್ ಖರೀದಿಗಾಗಿ 2000 ಕೋಟಿ ರೂ ರಿಲೀಸ್ ಕೋವಿಡ್ ವ್ಯಾಕ್ಸಿನ್ ತಯಾರಿಕೆಗೆ ಕೇಂದ್ರ ಸರ್ಕಾರ PM CARES Fund ನಿಂದ, ನೂರು ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. […]

PM CARES Fund ‌ನಿಂದ 100 ಕೋಟಿ ರೂ ರಿಲೀಸ್, ಯಾವುದಕ್ಕೆ ಗೊತ್ತಾ?

Updated on: Aug 18, 2020 | 2:38 PM

ಕೋವಿಡ್ ವ್ಯಾಕ್ಸಿನ್ ತಯಾರಿಕೆಯಲ್ಲಿ ಪ್ರಪಂಚದ ವಿವಿಧ ದೇಶಗಳು ಮುಂಚೂಣಿಯಲ್ಲಿದ್ದು, ಭಾರತವೂ ಸಹ ಪ್ರಾರಂಭದ ಹಂತದಲ್ಲಿ ಯಶ ಕಂಡಿದೆ. ಹೀಗಾಗಿ ಕೋವಿಡ್ ವ್ಯಾಕ್ಸಿನ್ ತಯಾರಿಕೆಗೆ ಪಿಎಂ ಕೇರ್ಸ್ ಫಂಡ್ ನಿಂದ 100 ಕೋಟಿ ರೂ.ಗಳನ್ನು ಅನುದಾನ ನೀಡಲಾಗಿದೆ.

ರಾಜ್ಯ ಸರ್ಕಾರಗಳಿಗೆ 1000 ಕೋಟಿ, ವೆಂಟಿಲೇಟರ್ ಖರೀದಿಗಾಗಿ 2000 ಕೋಟಿ ರೂ ರಿಲೀಸ್
ಕೋವಿಡ್ ವ್ಯಾಕ್ಸಿನ್ ತಯಾರಿಕೆಗೆ ಕೇಂದ್ರ ಸರ್ಕಾರ PM CARES Fund ನಿಂದ, ನೂರು ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಜೊತೆಗೆ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ರಾಜ್ಯ ಸರ್ಕಾರಗಳಿಗೆ 1000 ಕೋಟಿ ರೂ.ಗಳನ್ನು ನೀಡಲಾಗಿದ್ದು, ವೆಂಟಿಲೇಟರ್ ಖರೀದಿಗಾಗಿ 2000 ಕೋಟಿ ನೀಡಲಾಗಿದೆ ಎಂದಿದ್ದಾರೆ.

ಈಗಾಗಲೇ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ರಾಜ್ಯಗಳಿಗೆ 3100 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದು, ಇದರ ಸಂಪೂರ್ಣ ಮಾಹಿತಿ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ:PM CARES Fund ಹಣ ವರ್ಗಾವಣೆ ಬಗ್ಗೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್

Published On - 2:30 pm, Tue, 18 August 20